ಮ್ಯಾಗ್ನೆಟ್ ಮ್ಯಾನ್ ಆಗಲು ಹುಚ್ಚು ಸಾಹಸ : ಈತನ ಹೊಟ್ಟೆಯಲ್ಲಿ ಸಿಕ್ಕಿದ್ದು ಏನು ಗೊತ್ತಾ ?
Team Udayavani, Feb 10, 2021, 1:09 PM IST
ಲಂಡನ್ : ಮ್ಯಾಗ್ನೆಟಿಕ್ ಮ್ಯಾನ್ ಆಗಲು ಹೋದ ಲಂಡನ್ ಮೂಲದ 12 ವರ್ಷದ ಬಾಲಕನೋರ್ವ ತನ್ನ ಪ್ರಾಣಕ್ಕೆ ಸಂಚಕಾರ ತಂದುಕೊಂಡಿದ್ದು, ವೈದ್ಯರ 6 ಗಂಟೆಗಳ ಪರಿಶ್ರಮದ ಫಲವಾಗಿ ಪುನರ್ ಜನ್ಮ ಪಡೆದಿದ್ದಾನೆ.
ತನ್ನ ಹೊಟ್ಟೆಗೆ ಕಬ್ಬಿಣ ಅಂಟಿಕೊಳ್ಳುತ್ತದೆಯೇ ಎಂಬ ಕುತೂಹಲದಿಂದ ಬರೋಬ್ಬರಿ 54 ಆಯಸ್ಕಾಂತ್ ಬಾಲ್ ಗಳನ್ನ ರಿಲೇ ಮಾರಿಸನ್ , ಪ್ರತಿದಿನ ಒಂದರಂತೆ ಸೇವಿಸಿದ್ದ. ಇವು ಟಾಯ್ಲೆಟ್ ಮೂಲಕ ಹೊರಬರಬಹುದು ಎಂದು ಆತ ಅಂದಾಜಿಸಿದ್ದ. ಆದರೆ, ಅವು ಹೊರ ಬರದೆ ಇದ್ದಾಗ ಗಾಬರಿಗೊಂಡು ತನ್ನ ತಾಯಿ ಬಳಿ ವಿಷಯ ತಿಳಿಸಿದ್ದಾರೆ.
ಇದನ್ನೂ ಓದಿ :ರಸ್ತೆ ಅಪಘಾತ ಪ್ರಕರಣ: 10 ತಿಂಗಳುಗಳಲ್ಲಿ 43 ಸಾವು
ಮಗನ ಹುಚ್ಚಾಟದಿಂದ ಗಾಬರಿಗೊಂಡ ಆಕೆ, ಮಗನನ್ನು ವೈದ್ಯರ ಬಳಿ ಕರೆದೊಯ್ದು, ಎಕ್ಸ್-ರೇ ಮಾಡಿಸಿದ್ದಾರೆ. ಈ ವೇಳೆ ರಿಲೇ ಹೊಟ್ಟೆ ಹಾಗೂ ಕರುಳಿನಲ್ಲಿ ಮ್ಯಾಗ್ನೆಟಿಕ್ ಬಾಲ್ ಗಳಿರುವುದು ನೋಡಿ ವೈದ್ಯರೆ ಶಾಕ್ ಹಾಕಿದ್ದಾರೆ. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆತರದಿದ್ದರೆ ಈತನ ಪ್ರಾಣಕ್ಕೆ ಕುತ್ತು ಇತ್ತು ಎಂದು ವೈದ್ಯರು ಹೇಳಿದ್ದಾರೆ.
ತಕ್ಷಣವೇ ಕಾರ್ಯಪ್ರವೃತ್ತರಾದ ವೈದ್ಯರ ತಂಡ ಸತತ 6 ಗಂಟೆಗಳ ಕಾಲ ಸರ್ಜರಿ ಮಾಡೋ ಮೂಲಕ ಆಯಸ್ಕಾಂತದ ಬಾಲ್ ಗಳನ್ನು ಹೊರ ತೆಗೆದಿದ್ದಾರೆ. ಸದ್ಯ ರಿಲೇ ಪ್ರಾಣಾಪಾಯದಿಂದ ಪಾರಾಗಿದ್ದು,ಆಸ್ಪತ್ರೆಯಲ್ಲಿ ಬೆಡ್ ರೆಸ್ಟ್ ನಲ್ಲಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.