Tokyo Olympics: ಪದಕಕ್ಕೆ ಇನ್ನೊಂದೇ ಹೆಜ್ಜೆ- ಕುಸ್ತಿಯಲ್ಲಿ ದೀಪಕ್, ರವಿ ಸೆಮಿಗೆ ಲಗ್ಗೆ
ಬೊಲೊರ್ಟುಯಾ ಖುರೆಲ್ಕು ವಿರುದ್ಧ 2-2 ಸಮಬಲದ ಪೈಪೋಟಿ ನೀಡಿದೂ ಸೋತು ಹೊರಬಿದ್ದಿದ್ದರು.
Team Udayavani, Aug 4, 2021, 10:28 AM IST
ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮತ್ತೊಂದು ಭರವಸೆ ಮೂಡಿಸಿರುವ ಭಾರತೀಯ ಅಥ್ಲೀಟ್ ಗಳು, ಬುಧವಾರ (ಆಗಸ್ಟ್ 04) ಕುಸ್ತಿ ಸ್ಪರ್ಧೆಯಲ್ಲಿ ರವಿ ಕುಮಾರ್ ದಹಿಯಾ ಮತ್ತು ದೀಪಕ್ ಪುನಿಯಾ ತಮ್ಮ ವೈಯಕ್ತಿಕ ವಿಭಾಗದಲ್ಲಿ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.
ಇದನ್ನೂ ಓದಿ:ಮಾಜಿ ಶಾಸಕ ಇದಿನಬ್ಬ ಪುತ್ರನ ಮನೆ ಮೇಲೆ ಎನ್ ಐ ಎ ಅಧಿಕಾರಿಗಳ ದಾಳಿ
ಪುರುಷರ 57ಕೆಜಿ ಫ್ರೀಸ್ಟೈಲ್ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ರವಿ ದಹಿಯಾ ಅವರು ಬಲ್ಗೇರಿಯಾದ ಜಾರ್ಜಿ ವಾಂಗೆಲೋವ್ ಅವರನ್ನು ನೇರ 14-4 ಅಂತರದಿಂದ ಪರಾಜಯಗೊಳಿಸಿದ್ದರೆ, ದೀಪಕ್ ಪುನಿಯಾ ಚೀನಾದ ಜುಶೆನ್ ಲಿನ್ ಅವರನ್ನು 86 ಕೆಜಿ ವಿಭಾಗದಲ್ಲಿ 6-3ರ ಅಂತರದಿಂದ ಸೋಲಿಸುವ ಮೂಲಕ ಸೆಮಿ ಫೈನಲ್ ಪ್ರವೇಶಿಸಿದ್ದಾರೆ.
ಪದಕಕ್ಕೆ ಇನ್ನೊಂದೇ ಹೆಜ್ಜೆ:
ಇಂದು ಮಧ್ಯಾಹ್ನ 2.45ಕ್ಕೆ ನಡೆಯಲಿರುವ 57 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ದಹಿಯಾ ಅವರು ಕಝಕಿಸ್ತಾನದ ನುರಿಸ್ಲಾಮ್ ಸನಾಯೆವ್ ವಿರುದ್ಧ ಸೆಣಸಲಿದ್ದು, ದೀಪಕ್ ಪುನಿಯಾ ಅಮೆರಿಕದ ಡೇವಿಡ್ ಮೊರಿಸ್ ಸವಾಲನ್ನು ಎದುರಿಸಲಿದ್ದಾರೆ. ಬೆಳ್ಳಿ ಪದಕ ಪಡೆಯುವ ನಿರೀಕ್ಷೆ ಭರವಸೆ ಮೂಡಿಸಿದೆ.
ಟೋಕಿಯೊ ಒಲಿಂಪಿಕ್ಸ್ ನ ವನಿತಾ ಕುಸ್ತಿಯ 62ಕೆಜಿ ಫ್ರೀಸ್ಟೈಲ್ ವಿಭಾಗದ ಮೊದಲ ಸುತ್ತಿನಲ್ಲಿ ಭಾರತದ ಸೋನಮ್ ಮಲಿಕ್ ಸೋಲು ಕಂಡಿದ್ದಾರೆ. ಮಂಗಳವಾರ ನಡೆದ ಈ ಹೋರಾಟದಲ್ಲಿ ಸೋಮನ್ ಮುಂಗೋಲಿಯಾದ ಬೊಲೊರ್ಟುಯಾ ಖುರೆಲ್ಕು ವಿರುದ್ಧ 2-2 ಸಮಬಲದ ಪೈಪೋಟಿ ನೀಡಿದೂ ಸೋತು ಹೊರಬಿದ್ದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್‌ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.