ಕೇರಳ ಕಾಂಗ್ರೆಸ್‌ನ ಅರ್ಧ ಕಥೆ; ಉಳಿದದ್ದು ನಾಳೆ

Team Udayavani, Mar 18, 2021, 6:30 AM IST

ಕೇರಳ ಕಾಂಗ್ರೆಸ್‌ನ ಅರ್ಧ ಕಥೆ; ಉಳಿದದ್ದು ನಾಳೆ

ಪ್ರತೀ ರಾಜ್ಯದಲ್ಲೂ ಅದರಲ್ಲೂ ಪ್ರಾದೇಶಿಕ ಪಕ್ಷಗಳು ಇರುವಲ್ಲಿನ ರಾಜಕೀಯ ಲೆಕ್ಕಾಚಾರವೇ ಬೇರೆ. ಅಲ್ಲಿ ಒಂದು ಪಾರ್ಟಿ, ಒಂದು ನಾಯಕ, ಒಂದು ಅಲೆ ಎಂಬುದೆಲ್ಲ ತೀರಾ ಕಡಿಮೆ. ಸರಿ ಮಧ್ಯಾಹ್ನದ ಹೊತ್ತಿನ ಕಡಲಿನ ಹಾಗೆ. ಸಣ್ಣ ಸಣ್ಣ ಅಲೆಗಳು ಒಂದರ ಹಿಂದೆ ಬಂದು ದಡಕ್ಕೆ ಅಪ್ಪಳಿಸುವಂತೆ ಇರುತ್ತದೆ. ಹಾಗೆಂದು ಅವಗಣಿಸುವಂತೆಯೂ ಇಲ್ಲ, ಸಂಜೆ ಆಗುವಷ್ಟರಲ್ಲಿ ಯಾವುದೋ ಒಂದು ಅಲೆ ಹೆದ್ದೆರೆಯಾಗಿ ಬಿಡಬಹುದು!

ಕೇರಳದಲ್ಲಿ ಇಂದು ಹತ್ತಕ್ಕೂ ಹೆಚ್ಚು ಕಾಂಗ್ರೆಸ್‌ಗಳಿವೆ. ಯಾವುದೇ ಗಲ್ಲಿಯಲ್ಲಿ ನಿಂತು ಒಂದು ಕಲ್ಲೆಸೆದರೂ ಅದು ಒಂದು ಕಾಂಗ್ರೆಸ್‌ನ ಅಂಗಳಕ್ಕೆ ಬಿದ್ದೇ ಬೀಳುತ್ತದೆ.

ಇದು ಕೇರಳ ಕಾಂಗ್ರೆಸ್‌ನ ಕಥೆ. ಅಂದರೆ ಕೇರಳ ಪ್ರದೇಶ ಕಾಂಗ್ರೆಸ್‌ನದ್ದಲ್ಲ; ಅದರ ಉಪಕಥೆ. ಇದು ಹೇಗಿದೆ ಎಂದರೆ ಕಥಾ ನಾಯಕನಿಗಾಗಿ ರೂಪಿಸಿದ ಕಥೆಯಲ್ಲಿ ಉಪ ಪಾತ್ರಗಳೆಲ್ಲ ನಾಯಕನ ಮಟ್ಟಕ್ಕೇ ಬೆಳೆದರೆ ಹೇಗೆಯೋ ಹಾಗೆ? ಇನ್ನೊಂದು ರೀತಿಯಲ್ಲಿ ವ್ಯಾಖ್ಯಾನಿಸಬಹುದಾದರೆ ಹತ್ತು ನಾಯಕರು ಮತ್ತು ಅವರ ಹಿಂದೆ ಹತ್ತು ಹಿಂಬಾಲಕರು!

ಹಾಗೆಯೇ ಕರಾವಳಿ ಕಾಂಗ್ರೆಸ್‌ನಿಂದಲೇ ಒಡೆದು ಹುಟ್ಟಿದ್ದು ಕೇರಳ ಕಾಂಗ್ರೆಸ್‌. 1963 ರಲ್ಲಿ ಯುಡಿಎಫ್ ನೇತೃತ್ವ ವಹಿಸಿದ್ದ ಕಾಂಗ್ರೆಸ್‌ನ ಮುಖ್ಯಮಂತ್ರಿ ಆರ್‌. ಶಂಕರ್‌ ಒಂದು ವಿವಾದ ಸಂಬಂಧ ಮುಖಂಡ ಪಿ.ಟಿ. ಚಾಕೋ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದರು. ಇದರಿಂದ ಬೇಸತ್ತ ಚಾಕೋ ಗೆಳೆಯರಾದ ಕೆ.ಎಂ. ಜಾರ್ಜ್‌ ನೇತೃತ್ವದ ಗುಂಪು ಶಂಕರ್‌ ಸರಕಾರದ ವಿರುದ್ಧ ಅವಿಶ್ವಾಸ ಮಂಡಿಸಿತು. ಅಲ್ಲಿಂದ ಶುರುವಾಯಿತು ಕೇರಳ ಕಾಂಗ್ರೆಸ್‌ನ ಉಪಕಥೆ. ಆರ್‌. ಬಾಲಕೃಷ್ಣ ಪಿಳ್ಳೆ„ಅವರು ಕೆ.ಎಂ. ಜಾರ್ಜ್‌ ಜತೆ ಸೇರಿ ಕೇರಳ ಕಾಂಗ್ರೆಸ್‌ ಶುರು ಮಾಡಿದರು. ಅದಕ್ಕೆ ಮತ್ತೂಬ್ಬ ಬಲಿಷ್ಠ ಸಮುದಾಯದ ಮುಖಂಡ ಎಂ. ಪದ್ಮನಾಭನ್‌ ಕೈ ಜೋಡಿಸಿದರು. ಪಕ್ಷ ಬೆಳೆಯುತ್ತಿರುವಾಗಲೇ ಕೆ.ಎಂ.ಮಾಣಿ ಹಾಗೂ ಕೆ.ಜೆ. ಜೋಸೆಫ್ ಎಂಬ ನಾಯಕರೂ ಬೆಳೆದರು.

1977ರ ಸಂದರ್ಭ. ಕೆ.ಎಂ. ಜಾರ್ಜ್‌ ಕಾಲವಾದ ಬಳಿಕ ಪಿಳ್ಳೆ„ ಮತ್ತು ಕೆ.ಎಂ. ಮಾಣಿ ನಡುವೆ ನಾಯಕತ್ವಕ್ಕಾಗಿ ಹಣಾಹಣಿ ಪ್ರಾರಂಭವಾಯಿತು. ತಾನೇ ಹಿರಿಯ ನಾಯಕನಾದ್ದರಿಂದ ನನ್ನದೇ ಪಕ್ಷ ಎಂಬುದು ಪಿಳ್ಳೆ„ ವಾದವಾಗಿತ್ತು. ಆದರೆ ಮಾಣಿ ಮತ್ತು ಜೋಸೆಫ್ ಅವರ ಹಿಂದೆ ಹಿಂಬಾಲಕರ ಸಂಖ್ಯೆ ದೊಡ್ಡದಿತ್ತು. ಇನ್ನೇನು ವಿಧಾನಸಭೆ ಚುನಾವಣೆ ಬರುವ ಸಂದರ್ಭದಲ್ಲಿ ಪಿಳ್ಳೆ„ ಅವರು ಕೇರಳ ಕಾಂಗ್ರೆಸ್‌ನಿಂದ ಹೊರಬಂದು ಕೇರಳ ಕಾಂಗ್ರೆಸ್‌ (ಬಿ) ಸ್ಥಾಪಿಸಿದರು. ಕೇರಳ ಕಾಂಗ್ರೆಸ್‌ ಮಾಣಿ-ಜೋಸೆಫ್ ಮುಂದಾಳತ್ವದಲ್ಲಿ ಸಾಗಿತು.

ಇದು ಎಷ್ಟು ದಿನ ನಡೆಯಲು ಸಾಧ್ಯ? 1979ರಲ್ಲಿ ಕೆ.ಎಂ.ಮಾಣಿ ಮತ್ತೂಬ್ಬ ಮುಖಂಡ ಜೋಸೆಫ್ ಜತೆ ಮುನಿಸಿಕೊಂಡು ಹೊರಬಂದು ಕೇರಳ ಕಾಂಗ್ರೆಸ್‌ (ಎಂ) ಸ್ಥಾಪಿಸಿ ಎಡರಂಗ ನೇತೃತ್ವದ ಯುಡಿಎಫ್ ಕಡೆ ಮುಖ ಮಾಡಿದರು. 1982ರಲ್ಲಿ ಮತ್ತೆ ಯುಡಿಎಫ್ ಕಡೆ ವಾಲಿದರು. ಕೇರಳ ಕಾಂಗ್ರೆಸ್‌ ನಡೆದಿತ್ತು. 1985 ರಲ್ಲಿ ಈ ಎಂ ಮತ್ತು ಬಿ ಮತ್ತೆ ಕೇರಳ ಕಾಂಗ್ರೆಸ್‌ ಜತೆ ಸೇರಿಕೊಂಡರು. ಯುಡಿಎಫ್ಗೆ ಶಕ್ತಿ ತುಂಬಿದರು. ಎರಡೇ ವರ್ಷ, ಮತ್ತೆ ಮಾಣಿ ಮತ್ತು ಜೋಸೆಫ್ ಬೇರೆಯಾದರು. ಪಿಳ್ಳೆ„ ಜೋಸೆಫ್ ಬೆನ್ನಿಗೆ ನಿಂತರು. 1989ರಲ್ಲಿ ಪಿಳ್ಳೆ„ ತಮ್ಮ ಕೇರಳ ಕಾಂಗ್ರೆಸ್‌ (ಬಿ)ಯನ್ನು ಮತ್ತೆ ಬಲಗೊಳಿಸಿದರು. ಇತ್ತ ಜೋಸೆಫ್ 1991ರಲ್ಲಿ ಯುಡಿಎಫ್ ಬಿಟ್ಟು ಎಲ್‌ಡಿಎಫ್ ಬಾಗಿಲಲ್ಲಿ ನಿಂತರು.

ಈಗ ಒಡಕಿನ ಸರದಿ ಮಾಣಿ ಪಕ್ಷದಲ್ಲಿ ಅಂದರೆ ಕೇರಳ ಕಾಂಗ್ರೆಸ್‌ (ಎಂ). ಮಾಣಿಯ ಅನುಯಾಯಿ ಟಿ.ಎಂ. ಜಾಕೋಬ್‌ 1993 ರಲ್ಲಿ ಕೇರಳ ಕಾಂಗ್ರೆಸ್‌ (ಜೆ) ಸ್ಥಾಪಿಸಿದರು. ಇದೇ ಸಂದರ್ಭದಲ್ಲಿ ಪಿ ಟಿ ಚಾಕೋವಿನ ಮಗ ಪಿ.ಸಿ. ಥಾಮಸ್‌ ಮಾಣಿ ಕಾಂಗ್ರೆಸ್‌ನಲ್ಲಿ ಬಲಗೊಂಡಿದ್ದರು. ಅಷ್ಟರಲ್ಲಿ ಮಾಣಿ ತಮ್ಮ ಮಗನನ್ನು ಬೆಳೆಸಬೇಕೆಂಬ ಆಸೆಯಲ್ಲಿದ್ದರು. ಇದು ಮಾಣಿ ಮತ್ತು ಥಾಮಸ್‌ ನಡುವೆ ವಿರಸಕ್ಕೆ ಕಾರಣವಾಯಿತು. ಥಾಮಸ್‌ ಲೋಕಸಭೆ ಸದಸ್ಯರಾಗಿದ್ದ ಸಂದರ್ಭ. 2001ರಲ್ಲಿ ಪಕ್ಷದಿಂದ ಹೊರಬಂದು ಐಎಫ್ಡಿಪಿ ಯನ್ನು ಸ್ಥಾಪಿಸಿ ಎನ್‌ಡಿಎ ಕಡೆ ವಾಲಿದ್ದು ವಿಶೇಷ. ಇಲ್ಲಿಗೇ ಈ ಕಥೆ ಮುಗಿಯಲಿಲ್ಲ. ಮತ್ತೂ ಇದೆ.

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನುಗ್ಗೇಕಾಯಿಯ ಊರಿನಲ್ಲಿ ಚುನಾವಣೆಯ ಘಮಘಮ

ನುಗ್ಗೇಕಾಯಿಯ ಊರಿನಲ್ಲಿ ಚುನಾವಣೆಯ ಘಮಘಮ

ಕಾಂಗ್ರೆಸ್‌ನಿಂದ ಹೊರ ಹೋದವರೆಲ್ಲ ಒಡೆಯರೇ!

ಕಾಂಗ್ರೆಸ್‌ನಿಂದ ಹೊರ ಹೋದವರೆಲ್ಲ ಒಡೆಯರೇ!

ತಮಿಳುನಾಡು ಚುನಾವಣೆ: ಅಣ್ಣಾಮಲೈ ನಾಮಪತ್ರ ಸಲ್ಲಿಕೆ, ತೇಜಸ್ವಿ ಸೂರ್ಯ, ಮುನಿರತ್ನ ಸಾಥ್

ತಮಿಳುನಾಡು ಚುನಾವಣೆ: ಅಣ್ಣಾಮಲೈ ನಾಮಪತ್ರ ಸಲ್ಲಿಕೆ, ತೇಜಸ್ವಿ ಸೂರ್ಯ, ಮುನಿರತ್ನ ಸಾಥ್

ಪುದುಚೇರಿ ಪ್ರದೇಶ ಸಣ್ಣದು; ಲೆಕ್ಕಾಚಾರ ದೊಡ್ಡದು

ಪುದುಚೇರಿ ಪ್ರದೇಶ ಸಣ್ಣದು; ಲೆಕ್ಕಾಚಾರ ದೊಡ್ಡದು

kamal haasan

ತಮಿಳುನಾಡು: ಚುನಾವಣಾ ಪ್ರಚಾರ ಮುಗಿಸಿ ವಾಪಾಸಾಗುತ್ತಿದ್ದ ಕಮಲ್ ಹಾಸನ್ ಮೇಲೆ ದಾಳಿ!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.