ಜಂಗಮಹಲ್‌ ಜಿಲ್ಲೆಗಳ ಮೇಲೆಯೇ ಎಲ್ಲರ ಕಣ್ಣು


Team Udayavani, Mar 15, 2021, 7:10 AM IST

ಜಂಗಮಹಲ್‌ ಜಿಲ್ಲೆಗಳ ಮೇಲೆಯೇ ಎಲ್ಲರ ಕಣ್ಣು

ಪಶ್ಚಿಮ ಬಂಗಾಲದ ಅರಣ್ಯ ಪ್ರದೇಶದಲ್ಲಿ ಸೋಮ ವಾರ ಎರಡು ಹುಲಿಗಳ ಹೋರಾಟ. ಆ ಪೈಕಿ ಒಂದು ಗಾಯಾಳು ಹುಲಿ.
ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಸುದ್ದಿಯಾ ಗುತ್ತಿರುವುದೇ ಈ ಅರಣ್ಯ ಪ್ರದೇಶಗಳಿಂದ. ಯಾಕೆಂದರೆ, ತೃಣ ಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿಗೆ 2019ರ ಕನಸು ಎಲ್ಲಿ ಮರುಕಳಿಸುತ್ತದೋ ಎಂಬ ಆತಂಕ. ಅದೇ ಬಿಜೆಪಿಗೆ 2019ರ ಲೋಕಸಭೆ ಚುನಾವಣೆಯಲ್ಲಿ ಬಿಡಿದ ಚಿತ್ರಕ್ಕೆ ಮತ್ತಷ್ಟು ಬಣ್ಣ ತುಂಬುವ ಆಸೆ.

ಅದಕ್ಕೇ ಆಸ್ಪತ್ರೆಯಲ್ಲಿದ್ದ ಮಮತಾ ಸಹ ಗಾಲಿ ಕುರ್ಚಿ ಮೇಲೆ ಕುಳಿತು ಪುರುಲಿಯಾದಲ್ಲಿ ಕೇಂದ್ರದ ವಿರುದ್ಧ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಬ್ಬರಿಸುತ್ತಿದ್ದರೆ, ಅಲ್ಲೇ ಹತ್ತಿರದ ಮತ್ತೂಂದು ಜಿಲ್ಲೆ ಬಂಕುರಾದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಮತಾ ವಿರುದ್ಧ ಗುಡುಗುತ್ತಿದ್ದರು. ಇಬ್ಬರ ಲೆಕ್ಕಾಚಾರ ಜೋರಾಗಿ ನಡೆಯುತ್ತಿರುವುದು ಇಲ್ಲಿಯೇ. ಆಗಲೇ ವ್ಯಾಖ್ಯಾನಿಸಿದಂತೆ, ಒಬ್ಬರಿಗೆ ಮನೆಯಿಂದ ಹೊರಗೆ ಹೋದವರನ್ನು ವಾಪಸು ತರುವ “ಘರ್‌ ವಾಪಸಿ’ಸವಾಲು. ಮತ್ತೂಬ್ಬರಿಗೆ ತಮ್ಮ ವಿರೋಧಿಯ ತಂತ್ರಕ್ಕೆ ತಡೆಯೊಡ್ಡಿ, ಬುಡಕಟ್ಟು ವರ್ಗದ ಮತ ಬ್ಯಾಂಕಿನ ಮೇಲೆ ತಮ್ಮ ಪ್ರಭಾ ವಲಯವನ್ನು ಮತ್ತಷ್ಟು ವಿಸ್ತರಿಸುವ ಆಸೆ. ಇಬ್ಬರದ್ದೂ ಗೆಲ್ಲುವ ತಂತ್ರಗಳೇ.

ಹಾಗಾದರೆ ಈ ಬುಡಕಟ್ಟು ಜಿಲ್ಲೆಗಳೇಕೆ ಇಬ್ಬರ ನಿದ್ದೆಯನ್ನೂ ಕೆಡಿಸಿವೆ? ಅದರಲ್ಲೂ ಮಮತಾ ಅವರ ನಿದ್ದೆಯನ್ನು ಎಂಬುದು ಕುತೂಹಲದ ಸಂಗತಿಯೇ. ಅದಕ್ಕೇ ಆಸ್ಪತ್ರೆಯಲ್ಲಿದ್ದ ಮಮತಾ ಅವರೂ ಗಾಲಿ ಕುರ್ಚಿಯಲ್ಲಾದರೂ ಪರವಾಗಿಲ್ಲ ಎಂದು ಚುನಾವಣ ಪ್ರಚಾರಕ್ಕೆ ಇಳಿದದ್ದು. ಇಂದು (ಮಾ. 15) ಅಮಿತ್‌ ಶಾರ ಬೇಟೆ ನಡೆಯುತ್ತಿರುವುದು ಬಂಕುರಾ ಮತ್ತಿತರ ಪ್ರದೇಶದಲ್ಲಿ. ಒಂದುವೇಳೆ ಶಾ ಏನಾದರೂ ವಶೀಕರಣ ತಂತ್ರ ಬಳಸಿಬಿಟ್ಟರೆ ಆಮೇಲೆ ಏನೂ ಮಾಡುವಂತಿಲ್ಲ ಎಂಬುದು ಮಮತಾರ ಲೆಕ್ಕಾಚಾರ.

ದಕ್ಷಿಣ ಬಂಗಾಲದ ವ್ಯಾಪ್ತಿಯ ಜಂಗಮಹಲ್‌ ಜಿಲ್ಲೆಗಳೆಂದು ಕರೆಯಲಾಗುವ ಪುರುಲಿಯಾ, ಬಂಕುರಾ, ಪಶ್ಚಿಮ ಮಿಡ್ನಾಪುರ ಹಾಗೂ ಜಾರ್‌ಗ್ರಾಮ್‌, ಇದರೊಂದಿಗೆ ಉತ್ತರ ಬಂಗಾಲದ ಜಲಪಾಯ್‌ಗಾರಿ, ಅಲಿ ಪು ರ್‌ ದ್ವಾ ರ್‌, ಕೂಚ್‌ ಬೆಹಾರ್‌ ಜಿಲ್ಲೆಗಳೂ ಈ ಚುನಾವಣೆಯಲ್ಲಿ ಎರಡೂ ಪ್ರಮುಖ ಪಕ್ಷಗಳ ಗಮನವನ್ನು ಸೆಳೆದಿವೆ. ವಿಶೇಷವಾಗಿ ಜಂಗಮಹಲ್‌ ನ ಮೊದಲ ನಾಲ್ಕು ಜಿಲ್ಲೆಗಳಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿ ತೃಣ ಮೂಲ ಕಾಂಗ್ರೆಸ್‌ಗೆ ಭೂಕಂಪನವೇ ಆಗಿತ್ತು. ಬುಡಕಟ್ಟು ಜನಾಂಗದ ಬಹುತೇಕ ಮತಗಳು ಬಿಜೆಪಿ ಪಾಲಾಗಿದ್ದವು. ಈ ಮತ ಬ್ಯಾಂಕ್‌ ತೃಣಮೂಲಕ್ಕಿಂತ ಮೊದಲು ಎಡರಂಗ ಹಾಗೂ ಕಾಂಗ್ರೆಸ್‌ನದ್ದಾಗಿತ್ತು. ಅದೀಗ ಸಂಪೂರ್ಣ ವಲಸೆ ಹೋಗಿವೆ. ದಕ್ಷಿಣ ಬಂಗಾಲದ ಬುಡಕಟ್ಟು ಜಿಲ್ಲೆಗಳಲ್ಲಿ 30ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಿವೆ.

2019ರ ಕನಸು
2019ರ ಲೋಕಸಭೆ ಚುನಾವಣೆಯಲ್ಲಿ ಆದ ಬಹಳ ದೊಡ್ಡ ಬೆಳವಣಿಗೆಯೆಂದರೆ, ಒಂದನೆಯದು- ಎಡರಂಗದ ಕಡೆಗಿದ್ದ ಬುಡಕಟ್ಟು ಜನಾಂಗದವರ ಮತಗಳು ಬಹುತೇಕ ಬಿಜೆಪಿಗೆ ವರ್ಗಾವಣೆಯಾದದ್ದು. ಎರಡನೆಯದು-ಎಡರಂಗ ಹಾಗೂ ಕಾಂಗ್ರೆಸ್‌ ಲೆಕ್ಕಕ್ಕೇ ಇಲ್ಲದಂತಾಗಿದ್ದು. ತೃಣಮೂಲ ಕಾಂಗ್ರೆಸ್‌ ಹಾಗೂ ಬಿಜೆಪಿಯ ಈಗಿನ ಸ್ಪರ್ಧೆಗೆ (ಈ ವಿಧಾನಸಭೆ ಚುನಾವಣೆ) ವೇದಿಕೆ ಸಿದ್ಧಪಡಿಸಿದ್ದು.

ಆ ಚುನಾವಣೆಯಲ್ಲಿ ಬಿಜೆಪಿಯು ತೃಣಮೂಲ ಕೈಯಲ್ಲಿದ್ದ 12, ಸಿಪಿಐನಲ್ಲಿದ್ದ 2 ಹಾಗೂ ಯುಪಿಎ ಮೈತ್ರಿಕೂಟದ (ಕಾಂಗ್ರೆಸ್‌, ಎಡರಂಗ ಒಳಗೊಂಡಂತೆ) ನ 2 ಸೀಟುಗಳನ್ನು ಸೆಳೆದುಕೊಂಡಿದ್ದು. 2014ರಲ್ಲಿ ತೃಣಮೂಲ ಕಾಂಗ್ರೆಸ್‌ 34 ಲೋಕಸಭಾ ಕ್ಷೇತ್ರ ಗೆದ್ದಿದ್ದರೆ, ಸಿಪಿಐ 2 ಗೆದ್ದಿತ್ತು. ಯುಪಿಎ 4 ಗೆದ್ದಿತ್ತು. ಆಗ ಬಿಜೆಪಿ 2 ಸ್ಥಾನಗಳನ್ನಷ್ಟೇ ಗೆದ್ದಿತ್ತು. ಆದರೆ 2019 ರಲ್ಲಿ ತೃಣಮೂಲಕ್ಕೂ ಮತ ಹಂಚಿಕೆಯಲ್ಲಿ ಶೇ. 3.46ರಷ್ಟು ಲಾಭವಾಗಿತ್ತು. ಅದಕ್ಕಿಂತ ಹೆಚ್ಚಾಗಿ ಬಿಜೆಪಿಗೆ ಶೇ. 22.76ರಷ್ಟು ಹೆಚ್ಚುವರಿ ಮತಗಳು ಲಭಿಸಿದ್ದವು. ಒಟ್ಟು ಗಳಿಸಿದ ಮತ ಪ್ರಮಾಣ ಶೇ. 40.71. ಇದೇ 2009ರಲ್ಲಿ ಬಿಜೆಪಿ ಸ್ಪರ್ಧೆಯಲ್ಲೇ ಇರಲಿಲ್ಲ.

ಈ ಕೆಟ್ಟ ಕನಸೇ ಮಮತಾರನ್ನು ಕಾಡುತ್ತಿರುವುದು. ಇದೇ ಸಂದರ್ಭದಲ್ಲಿ 2019ರಲ್ಲಿ ಸಿಕ್ಕ ಮತದಾರರ ಬೆಂಬಲ ಆ ಬಳಿಕ ಕೆಲವು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಸಿಕ್ಕಿದೆ. ಹೀಗಾಗಿಯೇ ಬಿಜೆಪಿ ಸಹ ಪಶ್ಚಿಮ ಬಂಗಾಲದಲ್ಲಿ ಅಧಿಕಾರ ಹಿಡಿಯುವ ದಿನಗಳು ಹತ್ತಿರವಾಗಿವೆ ಎನ್ನುತ್ತಿರುವುದು.

– ಅಶ್ವಘೋಷ

ಟಾಪ್ ನ್ಯೂಸ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನುಗ್ಗೇಕಾಯಿಯ ಊರಿನಲ್ಲಿ ಚುನಾವಣೆಯ ಘಮಘಮ

ನುಗ್ಗೇಕಾಯಿಯ ಊರಿನಲ್ಲಿ ಚುನಾವಣೆಯ ಘಮಘಮ

ಕಾಂಗ್ರೆಸ್‌ನಿಂದ ಹೊರ ಹೋದವರೆಲ್ಲ ಒಡೆಯರೇ!

ಕಾಂಗ್ರೆಸ್‌ನಿಂದ ಹೊರ ಹೋದವರೆಲ್ಲ ಒಡೆಯರೇ!

ತಮಿಳುನಾಡು ಚುನಾವಣೆ: ಅಣ್ಣಾಮಲೈ ನಾಮಪತ್ರ ಸಲ್ಲಿಕೆ, ತೇಜಸ್ವಿ ಸೂರ್ಯ, ಮುನಿರತ್ನ ಸಾಥ್

ತಮಿಳುನಾಡು ಚುನಾವಣೆ: ಅಣ್ಣಾಮಲೈ ನಾಮಪತ್ರ ಸಲ್ಲಿಕೆ, ತೇಜಸ್ವಿ ಸೂರ್ಯ, ಮುನಿರತ್ನ ಸಾಥ್

ಕೇರಳ ಕಾಂಗ್ರೆಸ್‌ನ ಅರ್ಧ ಕಥೆ; ಉಳಿದದ್ದು ನಾಳೆ

ಕೇರಳ ಕಾಂಗ್ರೆಸ್‌ನ ಅರ್ಧ ಕಥೆ; ಉಳಿದದ್ದು ನಾಳೆ

ಪುದುಚೇರಿ ಪ್ರದೇಶ ಸಣ್ಣದು; ಲೆಕ್ಕಾಚಾರ ದೊಡ್ಡದು

ಪುದುಚೇರಿ ಪ್ರದೇಶ ಸಣ್ಣದು; ಲೆಕ್ಕಾಚಾರ ದೊಡ್ಡದು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.