“ಕೇರಳದ ಗುಜರಾತ್’ ತ್ರಿಕೋನ ಸ್ಪರ್ಧೆಗೆ ರೆಡಿ
Team Udayavani, Apr 1, 2021, 6:50 AM IST
2016ರಲ್ಲಿ ನೀಮೊಮ್ ಅಂದಾಕ್ಷಣ ಇಡೀ ಕೇರಳವೇಕೆ, ದೇಶಕ್ಕೆ ದೇಶವೇ ಹಿಂತಿರುಗಿ ನೋಡಿತ್ತು! ಒ. ರಾಜ್‌ಗೋಪಾಲ್ ಎಂಬ 83ರ ವ್ಯಕ್ತಿ, ಇಲ್ಲಿ ಕಮಲ ಚಿಹ್ನೆಯಿಂದ ವಿಧಾನಸಭೆಗೆ ಗೆದ್ದು, ಕೇರಳದಲ್ಲಿ ಬಿಜೆಪಿಯ ಚೊಚ್ಚಲ ಖಾತೆ ತೆರೆಸಿದ್ದರು. ಅಲ್ಲಿಂದ ಎದೆಯುಬ್ಬಿಸಿ ನಿಂತ ಬಿಜೆಪಿ, ನೀಮೊಮನ್ನು “ಕೇರಳದ ಗುಜರಾತ್’ ಅಂತಲೇ ಬಣ್ಣಿಸುತ್ತಿದೆ.
ಆದರೆ, 2021ರಲ್ಲಿ ಇಲ್ಲಿನ ಚಿತ್ರಣ ಬೇರೆ ರೀತಿ ಕಾಣುತ್ತಿದೆ. ರಾಜ್‌ಗೋಪಾಲ್ ಬದಲಿಗೆ ಬಿಜೆಪಿ ಇಲ್ಲಿ ಮಿಝೋರಾಂನ ಮಾಜಿ ರಾಜ್ಯಪಾಲ, ಪತ್ರಿಕೋದ್ಯಮ ಹಿನ್ನೆಲೆಯ ಕುಮ್ಮನಂ ರಾಜಶೇಖರನ್‌ರನ್ನು ಕಣಕ್ಕಿಳಿಸಿದೆ. ಒಟ್ಟು ಮತದಾರರ ಪೈಕಿ ಶೇ.30 ಮಂದಿಗೆ ಸದಸ್ಯತ್ವ ನೀಡಿರುವ ಬಿಜೆಪಿಗೆ ಇಲ್ಲಿ ಸಂಘಟನೆ ಬಲವಿದೆ. 2019ರ ಸಂಸತ್ ಚುನಾವಣೆಯಲ್ಲಿ ಶಶಿ ತರೂರ್ ವಿರುದ್ಧ ಸ್ಪರ್ಧಿಸಿ ರಾಜಶೇಖರನ್ ಸೋತಿದ್ದರೂ, ನೀಮೊಮ್ ಕ್ಷೇತ್ರ ಮಾತ್ರ ಬಿಜೆಪಿ ಪರ ವಾಲಿತ್ತು.
ನೀಮೊಮ್‌ನಲ್ಲಿ ಮೇಲ್ವರ್ಗದ ಹಿಂದೂಗಳ ಅತ್ಯಧಿಕ ಮತಗಳಿರುವ ಕಾರಣದಿಂದಲೇ ಬಿಜೆಪಿ ಕಳೆದಬಾರಿ ಗೆದ್ದಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ. ಹೀಗಾಗಿ, ಈ ಸಲ ಬಿಜೆಪಿಯಂತೆ ಕಾಂಗ್ರೆಸ್ ಮತ್ತು ಸಿಪಿಎಂಗಳೂ ಮೇಲ್ವರ್ಗದ ಅಭ್ಯರ್ಥಿಯನ್ನೇ ನಿಲ್ಲಿಸಿವೆ.
“ಕೇರಳದಲ್ಲಿ ನೀಮೊಮ್, ಬಿಜೆಪಿಗೆ ಮೊದಲ ಮತ್ತು ಕೊನೇ ಕ್ಷೇತ್ರ’ ಎಂಬುದು ಇಲ್ಲಿ ಕಾಂಗ್ರೆಸ್‌ನ ಸಂಕಲ್ಪ. 4 ಬಾರಿ ಕೇರಳ ಸಿಎಂ ಆಗಿದ್ದ ಕೆ. ಕರುಣಾಕರನ್ ಅವರ ಪುತ್ರ, ಕೆ. ಮುರಳೀಧರನ್‌ಗೆ ಕೈ ಟಿಕೆಟ್ ನೀಡಿದೆ. ಅನುಭವಿ ರಾಜಕಾರಣಿಯೂ ಆಗಿರುವ ಮುರಳೀಧರನ್ ಬೆನ್ನಿಗೆ ಮಾಜಿ ರಕ್ಷಣ ಸಚಿವ ಎ.ಕೆ. ಆ್ಯಂಟನಿ ಅವರ ಪ್ರಚಾರದ ಬೆಂಬಲವಿದೆ.
ಕಳೆದ ಬಾರಿ ಬಿಜೆಪಿ ವಿರುದ್ಧ ಸೋತಿದ್ದ ವಿ. ಶಿವನಕುಟ್ಟಿ ಸಿಪಿಎಂ ಅಭ್ಯರ್ಥಿ. ನೀಮೊಮ್ ತನ್ನ “ಕೆಂಪುಕೋಟೆ’ ಅಂತಲೇ ಕರೆಯುತ್ತಿರುವ ಸಿಪಿಎಂ, ಸೋತಾಗಿನಿಂದ ಇಲ್ಲಿ ಸರಿಯಾಗಿ ನಿದ್ರಿಸಿಲ್ಲ. ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿ ತನ್ನ ಮತಗಳನ್ನು ಸೆಳೆಯಬಹುದು ಎಂಬ ಆತಂಕ ಸಿಪಿಎಂಗೆ. ಒಟ್ಟಿನಲ್ಲಿ ತ್ರಿಕೋನ ಸ್ಪರ್ಧೆಯಿಂದಾಗಿ ನೀಮೊಮ್ ಕುತೂಹಲದ ಕಣವಾಗಿದೆ.
………………………………………………………………………………………………………………………………………………………
ನಾನೂ ನಿಮ್ಮಂತೆ ಮನೆಕೆಲಸ ಮಾಡಿರುವೆ: ಪ್ರಿಯಾಂಕಾ
ಚಾಲಾಕುಡಿ: ಪ್ರಿಯಾಂಕಾ ಗಾಂಧಿ ಯಾವತ್ತೂ ತಮ್ಮ ಮನೆಯಲ್ಲಿ ಕಸ ಗುಡಿಸಿರಲಿಕ್ಕಿಲ್ಲ ಎಂದು ನೀವು ಭಾವಿಸಿರಬಹುದು. ಆದರೆ, ವಸ್ತು ಸ್ಥಿತಿ ಹಾಗಿಲ್ಲ. “ನಾನೂ ಮನೆಯನ್ನು ಸ್ವತ್ಛಗೊಳಿಸಿದ್ದೇನೆ, ಅಡುಗೆ ಮಾಡಿದ್ದೇನೆ, ಮಕ್ಕಳನ್ನು ನೋಡಿಕೊಂಡಿದ್ದೇನೆ. ನಿಜ ಹೇಳಬೇಕೆಂ ದರೆ, 25ರಿಂದ 47ನೇ ವಯಸ್ಸಿನವರೆಗೂ ನಾನು ಗೃಹಿಣಿಯಾಗಿಯೇ ಇದ್ದೆ…’
– ಇದು ಕೇರಳದ ಚಾಲಕುಡಿಯಲ್ಲಿ ಚುನಾವಣ ಪ್ರಚಾರದ ವೇಳೆ ಗೃಹಿಣಿಯರೊಂದಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಆಡಿರುವ ಮಾತು. ಗೃಹಿಣಿಯರ ಮತಗಳನ್ನು ಯುಡಿಎಫ್ ಕಡೆಗೆ ಸೆಳೆಯುವ ನಿಟ್ಟಿನಲ್ಲಿ ತಮ್ಮದೇ ಅನುಭವಗಳನ್ನು ಬಿಚ್ಚಿಟ್ಟ ಪ್ರಿಯಾಂಕಾ, “ಒಬ್ಬ ಗೃಹಿಣಿಯಾಗಿ ನಾನು ಬಹಳಷ್ಟು ಕಲಿತಿದ್ದೇನೆ. ನೀವು ಮಾಡುವ ಕೆಲಸಕ್ಕಿಂತ ಯಾವುದೂ ದೊಡ್ಡದಲ್ಲ, ನೀವಿಲ್ಲದಿದ್ದರೆ ಮಕ್ಕಳು ಸಭ್ಯ ನಾಗರಿಕರಾಗುವುದಿಲ್ಲ, ನೀವಿಲ್ಲದಿದ್ದರೆ ಕುಟುಂಬದಲ್ಲಿ ಸಂತಸವಿರುವುದಿಲ್ಲ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.