ನಾನು ದೊಡ್ಡ ಕತ್ತೆ, ಅಧಿಕಾರಿ ಕುಟುಂಬದ ‘ಅಸಲಿ ಮುಖ’ದ ಬಗ್ಗೆ ನನಗೆ ಗೊತ್ತಾಗಲೇ ಇಲ್ಲ : ಮಮತಾ
Team Udayavani, Mar 21, 2021, 4:30 PM IST
ಕೊಲ್ಕತ್ತಾ : ತೃಣಮೂಲ ಕಾಂಗ್ರೆಸ್ ನ ನಾಯಕಿ ಮಮತಾ ಬ್ಯಾನರ್ಜಿ ಚುನವಣಾ ಪ್ರಚಾರ ಸಭೆಯಲ್ಲಿ ತಮ್ಮನ್ನು ತಾವೇ ದೂಷಿಸಿಕೊಂಡಿದ್ದಾರೆ.
ಅಧಿಕಾರಿ ಕುಟುಂಬದ ನಿಜ ಮುಖವನ್ನು ನನಗೆ ಕಂಡುಕೊಳ್ಳುವುದಕ್ಕೆ ಆಗಿಲ್ಲ ಎಂಬ ಕಾರಣಕ್ಕೆ ಮಮತಾ ಚುನಾವಣಾ ಮತ ಪ್ರಚಾರ ಸಭೆಯಲ್ಲಿ ಬಹಿರಂಗವಾಗಿ ತಮ್ಮನ್ನು ತಾವೇ ದೂಷಿಸಿಕೊಂಡಿದ್ದಾರೆ.
ನಂದಿಗ್ರಾಮದಲ್ಲಿ ತಮ್ಮೆದುರು ಸ್ಪರ್ಧೆ ಮಾಡಲಿರುವ ಪಶ್ಚಿಮ ಬಂಗಾಳದ ಈಗಿನ ಪ್ರಭಾವಿ ಬಿಜೆಪಿಯ ನಾಯಕ ಸುವೇಂದು ಅಧಿಕಾರಿಯವರನ್ನು ತರಾಟೆಗೆ ತೆಗದುಕೊಂಡಿರುವ ಮಮತಾ, ಮೇದಿನಿ ಪುರ ಜಿಲ್ಲೆಯಲ್ಲಿ ಅಧಿಕಾರಿ ಕುಟುಂಬವು 5000 ಕೋಟಿಯಷ್ಟು ಮೌಲ್ಯದ ಸಾಮ್ರಾಜ್ಯ ಕಟ್ಟಿದ್ದಾರೆ ಎಂಬ ಮಾತುಗಳನ್ನು ಕೇಳಿದ್ದೇನೆ ಎಂದು ಹೇಳಿದ್ದಾರೆ.
ಓದಿ : ಹೆಣ್ಣೆದೆಯ ಭಾವಗಳ ದರ್ಶಿಸುವ ‘ಕನಸು ಕನ್ನಡಿ’
ಅಧಿಕಾರಕ್ಕೆ ಬಂದ ಮೇಲೆ ಈ ವಿಚಾರದ ಬಗ್ಗೆ ತನಿಖೆ ಮಾಡಲಾಗುತ್ತದೆ ಎಂದು ಮಮತಾ ಹೇಳಿದ್ದಾರೆ.
ಜಿಲ್ಲೆಯಲ್ಲಿ ಅತ್ಯಂತ ಪ್ರಭಾವವನ್ನು ಹೊಂದಿರುವ ಅಧಿಕಾರಿ ಕುಟುಂಬದ ಹೆಚ್ಚಿನ ಸದಸ್ಯರು ಬಿಜೆಪಿಗೆ ಸೇರಿದ್ದಾರೆ. ಅಥವಾ ಕೇಸರಿ ಪಕ್ಷಕ್ಕೆ ಸೇರಲು ಇಚ್ಛಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಅನುಭವಿ ಟಿ ಎಮ್ ಸಿ ಸಂಸದ ಸಿಸಿರ್ ಅಧಿಕಾರಿ(ಸುವೇಂದು ಅಧಿಕಾರಿಯವರ ತಂದೆ) ಎಗ್ರಾದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ಪ್ರಮುಖ ನಾಯಕರ ಸಮ್ಮುಖದಲ್ಲಿ ಆದಿತ್ಯವಾರ(ಮಾ.21) ಬಿಜೆಪಿಗೆ ಸೇರ್ಪಡೆಗೊಂಡರು.
ಅಧಿಕಾರಿ ಕುಟುಂಬವನ್ನು ‘ಮಿರ್ ಜಾಫರ್’ ಗೆ ಹೋಲಿಸಿದ ಮಮತಾ ಬ್ಯಾನರ್ಜಿ, ಈ ಭಾಗದ ಜನರು ಅಧಿಕಾರಿ ಕುಟುಂಬವನ್ನು ಸಹಿಸಿಕೊಳ್ಳುವುದಿಲ್ಲ. ಜನರು ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ ಎಂದು ಮಮತಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇನ್ನು, ‘ನಾನು ದೊಡ್ಡ ಕತ್ತೆ’. ಅಧಿಕಾರಿ ಕುಟುಂಬದ ‘ಅಸಲಿ ಮುಖ’ವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾನು ವಿಫಲಳಾದೆ. ನನಗೆ ಗೊತ್ತಿಲ್ಲ. ಆದರೇ, ಅಧಿಕಾರಿ ಕುಟುಂಬ ಮೇದಿನಿಪುರ ಜಿಲ್ಲೆಯಲ್ಲಿ 5000 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಜನರು ಹೇಳುತ್ತಾರೆ. ಅವರು ಮತವನ್ನು ಹಣಕ್ಕೆ ಖರೀದಿ ಮಾಡುತ್ತಿದ್ದಾರೆ. ಅವರಿಗೆ ಮತ ಹಾಕಬೇಡಿ. ಎಂದು ಬ್ಯಾನರ್ಜಿ ಕಿಡಿ ಕಾರಿದ್ದಾರೆ.
ಬಿಜೆಪಿಯನ್ನು ಕೂಡ ತರಾಟೆಗೆ ತೆಗೆದುಕೊಂಡ ಮಮತಾ ಬ್ಯಾನರ್ಜಿ, ಬಿಜೆಪಿಯವರೆಂದರೇ ರಾಕ್ಷಸರು, ಗೂಂಡಾಗಳು ಎಂದು ಹೇಳಿದ್ದಾರೆ.
ಇನ್ನು, ಪಕ್ಷದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತಾಡಿದ ಮಮತಾ, ಆರೋಗ್ಯ, ರಸ್ತೆಗಳು ಮತ್ತು ಇತರ ಯೋಜನೆಗಳಂತಹ ಎಲ್ಲಾ ಕಾರ್ಯಗಳನ್ನು ರಾಜ್ಯ ಸರ್ಕಾರವು ಕೈಗೊಂಡಿದೆ ಮತ್ತು ಅಧಿಕಾರಿಯ ಕುಟುಂಬದಿಂದಲ್ಲ ಎಂಬುದನ್ನು ಎತ್ತಿ ತೋರಿಸಿದ್ದಾರೆ. ಶಾಂತಿಯನ್ನು ಕಾಪಾಡಲು ಮತ್ತು ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು ಬಿಜೆಪಿಯನ್ನು ಪಶ್ಚಿಮ ಬಂಗಾಳದಿಂದ ಹೊರಗಿಡುವಂತೆ ಸಭಿಕರನ್ನು ಮಮತಾ ಒತ್ತಾಯಿಸಿದ್ದಾರೆ.
ಓದಿ : ಹಣ ನುಂಗುತ್ತಿರುವ ಬಿಜೆಪಿ ಸರ್ಕಾರದ ‘ಏಕಗವಾಕ್ಷಿ’ ವ್ಯವಸ್ಥೆಯನ್ನು ಮೋದಿ ಕೊನೆಗಾಣಿಸಲಿ: HDK
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.