ಉ. ಪ್ರದೇಶದ ಬಾಲಿಯಖೇರಿ ಬ್ಲಾಕ್ ನ ಸ್ವೀಪರ್ ಪತ್ನಿಯೇ ಬ್ಲಾಕ್ ನ ಮುಖ್ಯಸ್ಥೆಯಾಗಿ ಅಧಿಕಾರ
ಉತ್ತರ ಪ್ರದೇಶದ ಸಹರಾನ್ ಪುರದ ಬಾಲಿಯಖೇರಿ ಬ್ಲಾಕ್ ನ ಮುಖ್ಯಸ್ಥರಾಗಿ ಸೋನಿಯಾ ಅಧಿಕಾರ
Team Udayavani, Jul 15, 2021, 3:53 PM IST
ಬಾಲಿಯಖೇರಿ : ಉತ್ತರ ಪ್ರದೇಶದ ಸಹರಾನ್ ಪುರದ ಬಾಲಿಯಖೇರಿ ಬ್ಲಾಕ್ ನ ಮುಖ್ಯಸ್ತೆಯಾಗಿ ಸೋನಿಯಾ ಅಧಿಕಾರ ವಹಿಸಿಕೊಂಡಿದ್ದಾರೆ.
ತಿಂಗಳ ಆರಂಭದಲ್ಲಿ ನಡೆದ ಬ್ಲಾಕ್ ಮುಖ್ಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಬಿಜೆಪಿ ಸದಸ್ಯರಾಗಿದ್ದ ಸೋನಿಯಾ ಇತ್ತೀಚೆಗೆ ಮುಖ್ಯಸ್ಥೆಯಾಗಿ ಆಯ್ಕೆಗೊಂಡಿದ್ದಾರೆ.
ಇದನ್ನೂ ಓದಿ : ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ‘ಸೈದ್ಧಾಂತಿಕ ಬದಲಾವಣೆ’ ಅಗತ್ಯವಿದೆ: ಕೋಚ್ ರಮೇಶ್ ಪೊವಾರ್
ಸೋನಿಯಾ, ಬಾಲಿಯಖೇರಿಯ 55 ನೇ ವಾರ್ಡ್‌ನಿಂದ ಬಿಡಿಸಿ ಅಥವಾ ಬ್ಲಾಕ್ ಡೆವೆಲಪ್ ಮೆಂಟ್ ಕೌನ್ಸಿಲ್ ಚುನಾವಣೆಗೆ ಸ್ಪರ್ಧಿಸಿದ್ದರು. ಸೋನಿಯಾ ಬಿಡಿಸಿ ಚುನಾವಣೆಯಲ್ಲಿ ಜಯಗಳಿಸಿದ ನಂತರ ಈ ತಿಂಗಳು ಬ್ಲಾಕ್ ನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಬಿಜೆಪಿ ಮುಖಂಡ ಮತ್ತು ಜಿಲ್ಲಾ ಪಂಚಾಯತ್ ಸದಸ್ಯ ಮುಖೇಶ್ ಚೌಧರಿ 26 ವರ್ಷದ ವಿದ್ಯಾವಂತೆ ಸೋನಿಯಾ ಅವರನ್ನು ಈ ಹುದ್ದೆಗೆ ಅಭ್ಯರ್ಥಿಯನ್ನಾಗಿ ಸ್ಪರ್ಧೆಗೆ ಇಳಿಸಿದ್ದರು. ಬಾಲಿಯಖೇರಿ ಬ್ಲಾಕ್ ಮುಖ್ಯಸ್ಥರ ಹುದ್ದೆಯನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡದ ವರ್ಗಕ್ಕೆ ಮೀಸಲಾತಿ ಅಡಿಯಲ್ಲಿ ಸೋನಿಯಾ ಅಧಕಾರ ವಹಿಸಕೊಂಡಿದ್ದಾರೆ.
ಬ್ಲಾಕ್ ಸ್ವೀಪರ್ ಪತ್ನಿ ಬ್ಲಾಕ್ ನ ಮುಖ್ಯಸ್ಥೆ
ನಲ್ಹೆರಾ ಗುಜ್ಜರ್ ಗ್ರಾಮದ ನಿವಾಸಿ ಸುನಿಲ್, ಬಾಲಿಯಖೇರಿ ಡೆವಲಪ್ ಮೆಂಟ್ ಬ್ಲಾಕ್ ನಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅದೇ ಬ್ಲಾಕ್ ನ ಮುಖ್ಯಸ್ಥರಾಗಿ ಸುನಿಲ್ ಪತ್ನಿ ಸೋನಿಯಾ ಅಧಿಕಾರ ವಹಿಸಿಕೊಂಡಿದ್ದಾರೆ.
ಈ ಬಗ್ಗೆ ಸುಲಿಲ್ ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ್ದು, ಸೋನಿಯಾ ಬ್ಲಾಕ್ ಮುಖ್ಯಸ್ಥರಾಗುತ್ತಾರೆಂದು ನಾನು ಎಂದು ಭಾವಿಸಿರಲಿಲ್ಲ. ಸಂತಸವಾಗುತ್ತಿದೆ. ಆಕೆಯ ಪ್ರೀತಿ ಹಾಗೂ ಬೆಂಬಲ ಮಾತ್ರ ನಾನು ನೀಡಬಲ್ಲೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಪಂಜಾಬ್ ಸಿಂಗ್ ದ್ವಯರ ವೈಮನಸ್ಸಿಗೆ ಕಾಂಗ್ರೆಸ್ ಹೈಕಮಾಂಡ್ ಮುಲಾಮು..!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಜೇಶ್ವರ ವಿಧಾನಸಭಾ ಕ್ಷೇತ್ರ : ಜಿದ್ದಾಜಿದ್ದಿನ ತ್ರಿಕೋನ ಸ್ಪರ್ಧೆ
ಕಾಸರಗೋಡು ವಿಧಾನಸಭಾ ಕ್ಷೇತ್ರ ಮುಸ್ಲಿಂಲೀಗ್‌ನ ಭದ್ರಕೋಟೆ: ಈ ಬಾರಿ ತ್ರಿಕೋನ ಸ್ಪರ್ಧೆ
ಕೇರಳ ಅಖಾಡ: ಕೋನ್ನಿ ಕ್ಷೇತ್ರ-ಐಕ್ಯರಂಗ, ಎಡರಂಗ ಕೋಟೆಯೊಳಗೆ ಕಮಲ ಅರಳುತ್ತಾ?
ಕೇರಳ ಅಖಾಡ: ಸೋಲಿಲ್ಲದ ಸರದಾರ…12ನೇ ಬಾರಿಯೂ ಚಾಂಡಿ ದಾಖಲೆಯ ಜಯ ಸಾಧಿಸುತ್ತಾರಾ?
ವಂದೇ ಮಾತರಂ ನಾಡಿಗೆ ಎಲ್ಲರೂ ಒಂದೇ: ಪ್ರಧಾನಿ ನರೇಂದ್ರ ಮೋದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.