ಕೇರಳ : ಸ್ಪರ್ಧಾಕಣದಲ್ಲಿ ಕುಟುಂಬ ರಾಜಕಾರಣ..!
ಕೇರಳದಲ್ಲಿ ಕುಂಟುಂಬ ರಾಜಕಾರಣದ್ದೇ ಮೇಲುಗೈ
Team Udayavani, Mar 26, 2021, 5:12 PM IST
ಕೇರಳ : ಕೇರಳದ 140 ವಿಧಾನ ಸಭಾ ಕ್ಷೇತ್ರಗಳಲ್ಲಿ ಸುಮಾರು 20 ಅಭ್ಯರ್ಥಿಗಳು ಆಡಳಿತ ಪಕ್ಷ ಸಿಪಿಐ(ಎಮ್) ನೇತೃತ್ವದ ಎಲ್ ಡಿ ಎಫ್ ಹಾಗೂ ಕಾಂಗ್ರೆಸ್ ನೇತೃತ್ವದ ಯು ಡಿ ಎಫ್ ನ ಮಾಜಿ ಮುಖ್ಯಮಂತ್ರಿಗಳ ಹಾಗೂ ಶಾಸಕರ ಮಕ್ಕಳು ಹಾಗೂ ಸಂಬಂಧಿಕರು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರ ಅಳಿಯ, ಡೆಮೊಕ್ರೆಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾದ ನ್ಯಾಷನಲ್ ಪ್ರೆಸಿಡೆಂಟ್, ಮಹಮ್ಮದ್ ರಿಯಾಸ್ ಕೂಡ ಈ ಬಾರಿ ಕೇರಳದ ವಿಧಾನ ಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದು, ಕೇರಳದ ಹೈ ವೋಲ್ಟೇಜ್ ಮತ ಕ್ಷೇತ್ರಗಳಲ್ಲಿ ಒಂದಾದ ಕೋಜ್ಹಿಕೋಡ್ ನ ಬೇಪೋರ್ ನಲ್ಲಿ ಸಿಪಿಐ(ಎಮ್) ಅವರಿಗೆ ಮಣೆ ಹಾಕಿದೆ.
ಓದಿ : ಅಸ್ಸಾಂ ನಲ್ಲಿ ನಾನೇ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುತ್ತೇನೆ : ಸರಬಾನಂದ ಸೋನೊವಾಲ
ರಿಯಾಸ್ ಒಬ್ಬರೇ ಅಲ್ಲ. ಕೇರಳ ಮಾಜಿ, ಹಾಲಿ ನಾಯಕರ ಸಂಬಂಧಿಗಳು ಈ ಬಾರಿ ಕೇರಳದ ವಿಧಾನ ಸಭಾ ಚುನಾವಣೆಯ ಅಖಾಡಕ್ಕಿಳಿಯಲಿದ್ದು, ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಇಬ್ರಾಹಿಂ ಕುಂಜು ಅವರ ಮಗ, ಪಿಇ ಅದ್ಬುಲ್ ಗಫೂರ್, ಮಾಜಿ ಕಾಂಗ್ರೆಸ್ ಶಾಸಕ ಕೆ, ಅಚ್ಚ್ಯುತನ್ ಅವರ ಪತ್ರ ಸುಮೇಶ್ ಕೆ ಅಚ್ಚ್ಯುತನ್ ಹಾಗೂ ಮಾಜಿ ಶಾಸಕ ದಿವಂಗತ ಎನ್ ವಿಜಯನ್ ಪಿಳೈ ಅವರ ಮಗ ಡಾ. ವಿ ಸುಜಿತ್(ಸ್ವತಂತ್ರ ಅಭ್ಯರ್ಥಿ) ಕೇರಳದ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿಯಲಿದ್ದಾರೆ.
ಇನ್ನು, ಮಾಜಿ ಮುಖ್ಯಮಂತ್ರಿಯಾದ ಕರುಣಾಕರನ್ ಅವರ ಮಕ್ಕಳಾದ ಕಾಂಗ್ರೆಸ್ ನಾಯಕ ಕೆ. ಮುರುಳಿಧರನ್ ನೇಮೋಮ್ ಕ್ಷೇತ್ರದಿಂದ, ಪದ್ಮಜಾ ವೇಣುಗೋಪಾಲನ್ ತ್ರಿಶೂರ್ ವಿಧಾನ ಸಭಾ ಕ್ಷೇತ್ರದಿಂದ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ಇನ್ನು, ಮಾಜಿ ಸಚಿವ ಥಾಮಸ್ ಚಾಂಡಿ ಅವರ ಸಹೋದರ ಎನ್ ಸಿ ಪಿ ಯ ಕೆ. ಥಾಮಸ್ ಕೂಡ ಕುಟ್ಟನಾಡ್ ವಿಧಾನಾ ಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರವನ್ನು ಸಲ್ಲಿಸಿದ್ದಾರೆ.
ಇರಿಂಜಲಕುಡ ವಿಧಾನ ಸಭಾ ಕ್ಷೇತ್ರದಿಂದ ಸಿಪಿಐ(ಎಮ್0 ನ ಕಾರ್ಯದರ್ಶಿ ಅವರ ಧರ್ಮ ಪತ್ನಿ ಪ್ರೊ. ಆರ್ ಬಿಂದು ಕೂಡ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಮಾಜಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್ ಅವರ ಅಳಿಯಂದಿರಾದ ವಿಜಯ ರಾಘವನ್ ಮತ್ತು ಪಿ ವಿ ಶ್ರೀನಿಜಿನ್ (ಕುನ್ನತುನಾಡ್) ಅವರನ್ನು ಎಲ್ ಡಿ ಎಫ್ ಕಣಕ್ಕಿಳಿಸಿದೆ.
ಓದಿ : ‘ಈಗೋ’ ಒಳ್ಳೆಯದೇ… ಎಲ್ಲಿಯ ತನಕವೆಂದರೇ..
ಇನ್ನು, ಜೋಸ್ ಕೆ ಮಣಿ ಅವರು ಇತ್ತೀಚೆಗೆ ಎಡ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ತಮ್ಮ ತಂದೆ ಕೇರಳ ಕಾಂಗ್ರೆಸ್ ನ ಸ್ಥಾಪಕ ಮುಖಂಡ ದಿವಂಗತ ಕೆ ಎಮ್ ಮಣಿ ಅವರಿಂದ ಬಳುವಳಿಯಾಗಿ ಬಂದ ವಿಧಾನ ಸಭಾ ಕ್ಷೇತ್ರ ಪಾಲಾದಿಂದ ಸ್ಪರ್ಧೆಗೆ ಇಳಿಯುತ್ತಿದ್ದಾರೆ. ಈ ಮಧ್ಯೆ ಐಎಎಸ್ ಮಾಜಿ ಅಧಿಕಾರಿ ಅವರ ಸೋದರ ಮಾವ ಎಂ ಪಿ ಜೋಸೆಫ್ ಯುಡಿಎಫ್ ಅಭ್ಯರ್ಥಿಯಾಗಿ ತ್ರಿಕಾರಿಪುರದಿಂದ ತಮ್ಮ ಅದೃಷ್ಟವನ್ನು ಪ್ರಯತ್ನಿಸುತ್ತಿದ್ದಾರೆ.
ಯುಡಿಎಫ್ ನಿಂದ, ಮಾಜಿ ಮಂತ್ರಿಗಳ ಮಕ್ಕಳಾದ ಹಾಗೂ ಸ್ವತಃ ಮಾಜಿ ಮಂತ್ರಿಗಳಾದ ಎಂ.ಕೆ.ಮುನೀರ್ (ಕೊಡುವಲ್ಲಿ), ಶಿಬು ಬೇಬಿ ಜಾನ್ (ಚವರ) ಅನೂಪ್ ಜಾಕೋಬ್ (ಪಿರವೋಮ್) ಮತ್ತು ದಿವಂಗತ ಸ್ಪೀಕರ್ ಜಿ ಕಾರ್ತಿಕೇಯನ್ ಅವರ ಪುತ್ರ ಕೆ.ಎಸ್.ಸಬರಿನಾಥನ್ (ಅರುವಿಕ್ಕರ) ಕಣದಲ್ಲಿದ್ದು “ಪ್ರಭಾವಿ ರಾಜಕಾರಣಿಗಳ ಕುಡಿಗಳು” ಎಂದು ಕರೆಸಿಕೊಳ್ಳುತ್ತಿದ್ದಾರೆ.
ಇನ್ನು, ಕಾಂಗ್ರೆಸ್ ಮಾಜಿ ಮಹಿಳಾ ಮೋರ್ಚಾ ಅಧ್ಯಕ್ಷೆ ಲತಿಕಾ ಸುಭಾಷ್ ಅವರಿಗೆ ಯು ಡಿ ಎಫ್ ನಿಂದ ಬಂದ ಟಿಕೆಟ್ ನಿರಾಕರಿಸಿದ್ದರಿಂದ ಅವರು ಪಕ್ಷವನ್ನು ತೊರೆದಿದ್ದರು. ಈಗ ಎಟ್ಟುಮನೂರಿನಿಂದ ಸ್ವತಂತ್ರರಾಗಿ ಸ್ಪರ್ಧಿಸುತ್ತಿದ್ದಾರೆ.
ಇಂತಹ ರಾಜಕೀಯ ಬೆಳವಣಿಗೆಗಳು ಯಾವುದೇ ರಾಜಕೀಯ ತತ್ವಾದರ್ಶಗಳಿಲ್ಲದಂತೆ ನಮಗೆ ಸಾಮಾನ್ಯವಾಗಿ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಕಂಡು ಬರುತ್ತದೆ ಎಂದು ಕೇರಳ ವಿಶ್ವ ವಿದ್ಯಾಲಯದ ಮಾಜಿ ರಾಜಕೀಯ ಶಾಸ್ತ್ರದ ಪ್ರೊ. ಪ್ರಭಾಸ್ ಪಿಟಿಐ ಸುದ್ದಿ ಸಂಸ್ಥೆಗೆ ಅಭಿಪ್ರಾಯ ತಿಳಿಸಿದ್ದಾರೆ.
“ಯು ಡಿ ಎಫ್ ನಲ್ಲಿ ಇಂತಹ ಬೆಳವಣಿಗೆಗಳು ಹೆಚ್ಚು ಪ್ರಚಲಿತದಲ್ಲಿತ್ತು. ಹಿಂದಿನ ಯು ಡಿ ಎಫ್ ಸಚಿವಾಲಯದಲ್ಲಿ, ಆರು ಮಂತ್ರಿಗಳು ಪ್ರಮುಖ ರಾಜಕಾರಣಿಗಳ ಪುತ್ರರಾಗಿದ್ದರು” ಎಂದು ವಕೀಲ ಹಾಗೂ ರಾಜಕೀಯ ವಿಶ್ಲೇಷಕರಾದ ಎ ಜಯಶಂಕರ್ ಅಭಿಪ್ರಾಯ ಪಟ್ಟಿದ್ದಾರೆ.
ಓದಿ : ಅಸ್ಸಾಂ : ಬುದ್ಧಿವಂತಿಕೆಯಿಂದ ಮತವನ್ನು ಚಲಾಯಿಸಿ : ಮನಮೋಹನ್ ಸಿಂಗ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.