ಬಿಜೆಪಿಯ ಬೆಂಬಲದಿಂದಾಗಿ ನಮ್ಮ ಸರ್ಕಾರ ಸುಸೂತ್ರವಾಗಿ ಅಧಿಕಾರ ನಡೆಸುತ್ತಿದೆ : ಪಳನಿಸ್ವಾಮಿ
Team Udayavani, Mar 24, 2021, 11:03 AM IST
ನವ ದೆಹಲಿ : ತಮಿಳು ನಾಡಿನ ಸರ್ಕಾರ ಬಿಜೆಪಿಯ ಬೆಂಬಲದ ಕಾರಣದಿಂದಾಗಿ ಸುಸೂತ್ರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದರೊಂದಿಗೆ ಸಂದರ್ಶನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.
ಓದಿ : ಮೊರಟೋರಿಯಂ ಚಕ್ರಬಡ್ಡಿ ಮನ್ನಾ : ಬ್ಯಾಂಕ್‌ಗಳಿಗೆ ಸುಪ್ರೀಂ ಕೋರ್ಟ್ ತಾಕೀತು
ಶಶಿಕಲಾ ಅವರ ಆಜ್ಞೆಯ ಮೇರೆಗೆ ಪಳನಿಸ್ವಾಮಿ ತಮಿಳು ನಾಡಿನ ಮುಖ್ಯಮಂತ್ರಿಯಾಗಿದ್ದಾರೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ನನ್ನ ಅರ್ಹತೆಯನ್ನು ನೋಡಿ ಅವರು ನನಗೆ ಈ ಸ್ಥಾನವನ್ನು ನೀಡಿದ್ದಾರೆ. ನನ್ನ ಅನುಭವ ಹಾಗೂ ಜ್ಞಾನದ ಕಾರಣದಿಂದಾಗಿ ನಾನು ಈ ಸ್ಥಾನವನ್ನು ಪಡೆಯಲು ಸಾಧ್ಯವಾಯಿತು. ಈ ಸ್ಥಾನಕ್ಕೆ ಒಮ್ಮೆಲೆ ನಾನು ಜಿಗಿದು ಮುಖ್ಯಮಂತ್ರಿಯಗಿದ್ದಲ್ಲ. ನಾನು ಸಂಸದನಾಗಿದ್ದೆ, ಶಾಸಕನಾಗಿದ್ದೆ, ಸಚಿವನಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದೇನೆ. ಅದಾದ ಬಳಿಕ ನಾನು ಮುಖ್ಯಮಂತ್ರಿಯಾಗಿದ್ದೇನೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಪಳಿನಿಸ್ವಾಮಿ ತಮ್ಮನ್ನು ಡಿ ಎಮ್ ಕೆ ನಾಯಕ ಎಮ್ ಕರುಣಾನಿಧಿ ಅವರಿಗೆ ಹೋಲಿಸಿಕೊಂಡರು. ಡಿ ಎಮ್ ಕೆ ಸ್ಥಾಪಕ ಸಿ ಎನ್ ಅಣ್ಣಾದುರಿ ನೀಧನದ ನಂತರ, ಕರುಣಾನಿಧಿ ತಮಿಳುನಾಡಿನಲ್ಲಿ ಐದು ಭಾರಿ ಮುಖ್ಯಮಂತ್ರಿಯಾಗಿದ್ದಾರೆ ಎಂದಿದ್ದಾರೆ.
ಕರುಣಾನಿಧಿಯವರಿಗೆ ಮುಖ್ಯಮಂತ್ರಿಯಾಗಲು ಯಾರೂ ಮತ ಹಾಕಲಿಲ್ಲ. ಅಣ್ಣಾದುರಿಯವರಿಗಾಗಿ ಮತ ಚಲಾವಣೆ ಮಾಡಿದ ಕಾರಣ, ಅವರು ಮುಖ್ಯಮಂತ್ರಿಯಾಗಿದ್ದಾರೆ. ಯಾರಾದರೂ ಹಿರಿಯ ಮುಖಂಡ ತಿರಿಕೊಂಡಾಗ, ತೆರವುಗೊಂಡ ಆ ಸ್ಥಾನಕ್ಕೆ ಇನ್ನೊಬ್ಬ ಹೊಸ ನಾಯಕ ಆ ಸ್ಥಾನವನ್ನು ತುಂಬುತ್ತಾನೆ. ಹಾಗೆಯೇ, ನಾನು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದೇನೆ ಎಂದರು.
ಕೆಲವೇ ದಿನಗಳಲ್ಲಿ ಬರಲಿರುವ ತಮಿಳುನಾಡಿನ ಚುನಾವಣೆಯಲ್ಲಿ ಎ ಐ ಎ ಡಿ ಎಮ್ ಕೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾರಣದಿಂದ, ಡಿ ಎಮ್ ಕೆ ನಾಯಕ ಸ್ಟ್ಯಾಲಿನ್ ಎ ಐ ಎ ಡಿ ಎಮ್ ಕೆ ಪಕ್ಷವನ್ನು ಬಿಜೆಪಿಯ ಬಿ ತಂಡ ಎಂದು ಕರೆದಿದ್ದರು.
ಈ ವಿಚಾರಕ್ಕೆ ಪ್ರತಿಕ್ರಯಿಸಿದ ಮುಖ್ಯಮಂತ್ರಿ ಪಳನಿಸ್ವಾಮಿ, ಎ ಐ ಎ ಡಿ ಎಮ್ ಕೆ ಯೊಂದಿಗೆ ಬಿಜೆಪಿ ಮೈತ್ರಿ ಮುರಿದ ನಂತರ, 1999ರಲ್ಲಿ ಡಿ ಎಮ್ ಕೆ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು. ಆಗ ಡಿ ಎಮ್ ಕೆ ಬಿಜೆಪಿಯ ಬಿ ತಂಡ ವಾಗಿತ್ತಾ..? ಡಿ ಎಮ್ ಕೆ ನಾಯಕ ಮುರಸೊಲಿ ಮಾರನ್ ಎನ್ ಡಿ ಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದರು. ಡಿ ಎಮ್ ಕೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರೆ, ಏನು ತೊಂದರೆಯಿಲ್ಲ. ನಾವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಾಗ ಮಾತ್ರ ಅದು ಅಪರಾಧವಾಗುತ್ತದೆ. ತಪ್ಪಾಗುತ್ತದೆ. ಇದು ಡಿ ಎಮ್ ಕೆ ಪ್ರಚಾರದ ಧೋರಣೆ ಎಂದು ಪಳನಿಸ್ವಾಮಿ ಸಂದರ್ಶನದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
ಬಿಜೆಪಿ ಮೈತ್ರಿಯನ್ನು ಒತ್ತಾಯಿಸುತ್ತಿದೆ ಮತ್ತು ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯಂತಹ ಕೇಂದ್ರ ಸಂಸ್ಥೆಗಳನ್ನು ಎ ಐ ಎ ಡಿ ಎಮ್ ಕೆ ನಾಯಕರ ಬೆಂಬಲಕ್ಕಾಗಿ ಒತ್ತಡ ಹೇರಲು ಬಳಸುತ್ತಿದೆ ಎಂಬ ವಿಚಾರವನ್ನು ಅವರು ತಳ್ಳಿಹಾಕಿದರು. “ಇದು ತಪ್ಪು … ನಾವು ಕೇಂದ್ರದಿಂದ ಒಂದು ಬಾರಿ ತೊಂದರೆಗೆ ಒಳಗಾಗಿಲ್ಲ. ಬಿಜೆಪಿ ಬೆಂಬಲದಿಂದಾಗಿ ಎ ಐ ಎ ಡಿ ಎಮ್ ಕೆ ತಮಿಳುನಾಡಿನಲ್ಲಿ ಸುಸೂತ್ರವಾಗಿ ಅಧಿಕಾರ ನಡೆಸುತ್ತಿದೆ. ಎ ಐ ಎ ಡಿ ಎಮ್ ಎಂದು ಅವರು ಹೇಳಿದ್ದಾರೆ.
ಓದಿ : 45+ ಎಲ್ಲರಿಗೂ ಲಸಿಕೆ : ಎ. 1ರಿಂದಲೇ ಜಾರಿಗೆ ಕೇಂದ್ರ ಸಂಪುಟ ನಿರ್ಧಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.