ಪಶ್ಚಿಮಬಂಗಾಳದಲ್ಲಿ ಟಿಎಂಸಿ ಹೊಸ ತಳಿಯ ಮಾವೋವಾದಿಗಳನ್ನು ಸೃಷ್ಟಿಸಿದೆ: ಪ್ರಧಾನಿ ಮೋದಿ
ಶಿಕ್ಷಣ, ಅಭಿವೃದ್ಧಿ, ಪ್ರತಿಯೊಂದು ಮನೆಗೂ ಶುದ್ಧ ನೀರು ಕೊಡುತ್ತೇವೆ ಎಂದು ಬಿಜೆಪಿ ಹೇಳುತ್ತದೆ ಎಂದು ಮೋದಿ ತಿಳಿಸಿದರು.
Team Udayavani, Mar 18, 2021, 3:35 PM IST
ಕೋಲ್ಕತಾ: ಪ್ರಧಾನಿ ನರೇಂದ್ರ ಮೋದಿ ಅವರು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಗುರುವಾರ(ಮಾರ್ಚ್ 18) ಪಶ್ಚಿಮಬಂಗಾಳದ ಪುರುಲಿಯಾದಲ್ಲಿ ವಾಗ್ದಾಳಿ ನಡೆಸಿದ್ದು, ತೃಣಮೂಲ ಕಾಂಗ್ರೆಸ್ ಜನರನ್ನು ಕಷ್ಟದಲ್ಲಿ ಬದುಕುವಂತೆ ಮಾಡಿಬಿಟ್ಟಿದೆ. ಅಷ್ಟೇ ಅಲ್ಲ ಬಂಗಾಳದಲ್ಲಿ ಟಿಎಂಸಿ ಹೊಸ ತಳಿಯ ಮಾವೋವಾದಿಗಳನ್ನು ಸೃಷ್ಟಿಸಿದೆ ಎಂದು ಆರೋಪಿಸಿದರು.
ಇದನ್ನೂ ಓದಿ:ಕೋವಿಡ್ ಕೆಲಸ ಮಾಡುವವರಿಗೆ ಇಂದಿನಿಂದ 50 ದಿನಗಳವರೆಗೆ ರಜೆ ಇಲ್ಲ: ಸಚಿವ ಸುಧಾಕರ್
ಪುರುಲಿಯಾದಲ್ಲಿ ಎಡಪಕ್ಷ ಮತ್ತು ತೃಣಮೂಲ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಕೈಗಾರಿಕಾ ಅಭಿವೃದ್ಧಿಯನ್ನೇ ನಿರ್ಲಕ್ಷಿಸಿಬಿಟ್ಟಿದೆ. ತೃಣಮೂಲ ಕಾಂಗ್ರೆಸ್ ಬಂಗಾಳದಲ್ಲಿ ಹೊಸ ತಳಿಯ ಮಾವೋವಾದಿಗಳನ್ನು ಸೃಷ್ಟಿಸಿದ್ದು, ಸಾರ್ವಜನಿಕರ ಹಣವನ್ನು ಲೂಟಿಗೈದಿರುವುದಾಗಿ ಪ್ರಧಾನಿ ಮೋದಿ ದೂರಿದರು.
ತೃಣಮೂಲ ಕಾಂಗ್ರೆಸ್ ಹತ್ತು ವರ್ಷಗಳ ಕಾಲ ದುರಾಡಳಿತ ನಡೆಸಿದೆ, ಅಲ್ಲದೇ ತುಷ್ಟೀಕರಣದ ರಾಜಕೀಯ ಮಾಡಿದೆ ಎಂದರು. ಖೇಲ್ ಹೋಗಾ ಎಂದು ದೀದಿ ಹೇಳುತ್ತಾರೆ, ಆದರೆ ಉದ್ಯೋಗ, ಶಿಕ್ಷಣ, ಅಭಿವೃದ್ಧಿ, ಪ್ರತಿಯೊಂದು ಮನೆಗೂ ಶುದ್ಧ ನೀರು ಕೊಡುತ್ತೇವೆ ಎಂದು ಬಿಜೆಪಿ ಹೇಳುತ್ತದೆ ಎಂದು ಮೋದಿ ತಿಳಿಸಿದರು.
ಪುಲ್ವಾಮಾ ದಾಳಿ ನಡೆದಾಗ ಮಮತಾ ಬ್ಯಾನರ್ಜಿ ಯಾವ ಕಡೆಗಿದ್ದರು ಎಂಬುದನ್ನು ಬಂಗಾಳ ನೆನಪಿಸಿಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.