ಪಂಚರಾಜ್ಯ ಚುನಾವಣೆ : ಫೇಸ್ ಬುಕ್ ಜಾಹಿರಾತು : ಅತಿ ಹೆಚ್ಚು ಖರ್ಚು ಮಾಡಿದ ಪಕ್ಷ ಯಾವುದು ?
Team Udayavani, Mar 25, 2021, 6:11 PM IST
ಸಾಂದರ್ಭಿಕ ಚಿತ್ರ
ಕೋಲ್ಕತ್ತಾ : ಮಾರ್ಚ್ 27 ರಿಂದ ಆರಂಭವಾಗುವ ನಾಲ್ಕು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನ ಸಭೆ ಚುನಾವಣೆಗೆ, ಫೇಸ್ ಬುಕ್ ನಲ್ಲಿ ಜಾಹೀರಾತು ನೀಡುವುದಕ್ಕಾಗಿ ಪಶ್ಚಿಮ ಬಂಗಾಳ ಹೆಚ್ಚಿನ ಹಣವನ್ನು ವ್ಯಯ ಮಾಡಿದೆ ಎಂಬ ಮಾಹಿತಿ ಹೊರ ಬಿದ್ದಿದೆ.
ಮೂರನೇ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಮತ್ತೆ ಅಧಿಕಾರಕ್ಕೆ ಹಿಡಿಯುವ ಉದ್ದೇಶದಿಂದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮಾರ್ಚ್ 22ರ ತನಕ 90 ದಿನಗಳ ಫೇಸ್ ಬುಕ್ ಜಾಹಿರಾತುಗಾಗಿ ಪ್ರತಿಪಕ್ಷ ಬಿಜೆಪಿಗಿಂತ ಹೆಚ್ಚು ಹಣವನ್ನು ಖರ್ಚು ಮಾಡಿದೆ ಎಂದು ಮಾಹಿತಿ ಲಭ್ಯವಾಗಿದೆ.
ಓದಿ : ಕಂಠ ಪೂರ್ತಿ ಕುಡಿಸಿ ತನ್ನ ತಂದೆಯನ್ನೇ ಜೀವಂತವಾಗಿ ಸುಟ್ಟು ಹಾಕಿದ ಮಹಿಳೆ. ಕಾರಣವೇನು?
ಚುನಾವಣಾ ಮತ ಪ್ರಚಾರದ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಬರೋಬ್ಬರಿ 3.74 ಕೋಟಿ ರೂ. ಗಳನ್ನು ಸಾಮಾಜಿಕ ಸಮಸ್ಯೆ-ಚುನಾವಣೆ-ರಾಜಕೀಯ ಜಾರಿರಾತುಗಳಿಗಾಗಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳು ಖರ್ಚು ಮಾಡಿವೆ ಎಂದು ವರದಿಯಾಗಿದೆ.
ಇನ್ನು, ವಿಧಾನ ಸಭಾ ಚುನಾವಣೆಯ ಉದ್ದೇಶದಿಂದ ಪಶ್ಚಿಮ ಬಂಗಾಳವನ್ನು ಹೊರತಾಗಿ ತಮಿಳುನಾಡು 3.3 ಕೋಟಿ ರೂ. ಗಳನ್ನು, ಅಸ್ಸಾಂ 61.77 ಲಕ್ಷ, ಕೇರಳ 38.86 ಲಕ್ಷ ಹಾಗೂ ಪುದುಚೆರಿ 3.34 ಲಕ್ಷ ಹಣವನ್ನು ವ್ಯಯ ಮಾಡಿವೆ.
ಪಶ್ಚಿಮ ಬಂಗಾಳದ ಆಡಳಿತ ತೃಣಮೂಲ ಕಾಂಗ್ರೆಸ್ ಪಕ್ಷ ಫೇಸ್ ಬುಕ್ ಜಾಹಿರಾತಿಗಾಗಿ 1.69 ಕೋಟಿ ರೂ. ನಷ್ಟು ಹಣವನ್ನು ಚುನಾವಣಾ ಪ್ರಚಾರ ಸಭೆಯ ಸಂದರ್ಭದಲ್ಲಿ ಖರ್ಚು ಮಾಡಿದೆ. ‘ಬಾಂಗ್ಲಾರ್ ಗೋರ್ಬೋ ಮಮತಾ’(ಬಂಗಾಳದ ಹೆಮ್ಮೆ ಮಮತಾ) ಹಾಗೂ ಕ್ಷೇತ್ರ ಮಟ್ಟದ ಜಾಹಿರಾತಾದ ‘ದಮ್ ದಮ್ ಎರ್ ಗಾರ್ಬೋ ಮಮತಾ’ ಜಾಹೀರಾತುಗಳನ್ನು ಹೊಂದಿದೆ.
ತೃಣಮೂಲದ ಡಿಜಿಟಲ್ ಜಾಹೀರಾತುಗಳನ್ನು ಭಾರತೀಯ ಪಾಲಿಟಿಕಲ್ ಆ್ಯಕ್ಶನ್ ಕಮಿಟಿ (ಐ-ಪಿಎಸಿ) ನಿರ್ವಹಿಸುತ್ತದೆ, ಇದು ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳಲ್ಲಿ ಪಕ್ಷಕ್ಕಾಗಿ ಇತರ ಅಭಿಯಾನಗಳನ್ನು ನಡೆಸಿದೆ.
ಓದಿ : ಸಿಎಂ ಕಾರಂತ ಬಡಾವಣೆ ಕೈಬಿಡುವ ಭರವಸೆ ನೀಡಿಲ್ಲ : ವಿಶ್ವನಾಥ್ ಸ್ಪಷ್ಟನೆ
ಇನ್ನು, “ಖೋಟಿಕಾರೋಕ್ ಮೋದಿ” (ಅಪಾಯಕಾರಿ ಮೋದಿ) ಹೆಸರಿನ ಮತ್ತೊಂದು ಫೇಸ್ ಬುಕ್ ಪೇಜ್ ಗಾಗಿ ರಾಜಕೀಯ ಜಾಹೀರಾತುಗಳಿಗಾಗಿ 33.12 ಲಕ್ಷಗಳನ್ನು ಖರ್ಚು ಮಾಡಿದೆ ಎಂದು ಡಾಟಾ ತಿಳಿಸಿದೆ. ರಾಜ್ಯ ಬಿಜೆಪಿ ಫೇಸ್ ಬುಕ್ ಜಾಹೀರಾತು ಖರ್ಚು ಸುಮಾರು. 25.31 ಲಕ್ಷ. ಇದು ಜಾಹೀರಾತು ಪ್ರಚಾರಗಳಾದ ‘ಅಮರ್ ಪರಿಬಾರ್ ಬಿಜೆಪಿ ಪರಿಬಾರ್’ (ನನ್ನ ಕುಟುಂಬ ಬಿಜೆಪಿ ಕುಟುಂಬ) ಮತ್ತು ‘ಆರ್ ನೋಯಿ ಅನ್ನಯ್’ (ಇನ್ಮುಂದೆ ಅನ್ಯಾಯವಿಲ್ಲ)ಗಳಿಗೆ ಖರ್ಚು ಮಾಡಿದ್ದಾಗಿದೆ.
ತೃಣಮೂಲದ ಫೇಸ್ ಬುಕ್ ಪೇಜ್ 1.3 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದರೆ, ಪಶ್ಚಿಮ ಬಂಗಾಳದ ಬಿಜೆಪಿ 1.7 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದೆ.
ಇನ್ನು, ಫೇಸ್ ಬುಕ್ ನಲ್ಲಿ ಜಾಹೀರಾತುಗಳಿಗಾಗಿ ರಾಜ್ಯ ಕಾಂಗ್ರೆಸ್ ಸುಮಾರು 5 ಲಕ್ಷ ಖರ್ಚು ಮಾಡಿದ್ದರೆ, ಎಡ ಪಕ್ಷಗಳು ಖರ್ಚು ಮಾಡಿದ ಮೊತ್ತ ತೀರಾ ಕಡಿಮೆ ಇದೆ ಎಂದ ಡಾಟಾ ತಿಳಿಸಿದೆ.
ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕಾಗಿ ತೋರಿಕೆಗೆ ಬರುವ ಹಾಗೆ ಎಂದೂ ಖರ್ಚು ಮಾಡುವುದಿಲ್ಲ. ಡಿಜಿಟಲ್ ಪ್ಲಾಟ್ ಫಾರ್ಮ್ ಗಳ ಜಾಹಿರಾತುಗಳಿಗೆ ಹೆಚ್ಚ್ಉ ಹಣಗಲನ್ನು ಖರ್ಚು ಮಾಡುತ್ತಾರೆ ಎಂದು ಸಾಮಾಜಿಕ ಜಾಲತಾಣಗಳ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಓದಿ : ಗುಡಿಸಲಿಗೆ ಬೆಂಕಿ : 5 ಲಕ್ಷ ರೂ. ನಗದು, ಚಿನ್ನಾಭರಣ ಸಹಿತ ಅಪಾರ ಹಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.