Paris Olympics: ಗುರಿ ತಪ್ಪಿದ ದೀಪಿಕಾ ಕುಮಾರಿ
Team Udayavani, Aug 3, 2024, 9:54 PM IST
ಪ್ಯಾರಿಸ್: ಒಲಿಂಪಿಕ್ಸ್ ಬಿಲ್ಗಾರಿಕೆಯ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ಗೆ ಏರಿದ್ದ ದೀಪಿಕಾ ಕುಮಾರಿ ಸೋಲನುಭವಿಸಿದ್ದಾರೆ. ಶನಿವಾರ ನಡೆದ ಪಂದ್ಯದಲ್ಲಿ ದೀಪಿಕಾ, ದಕ್ಷಿಣ ಕೊರಿಯಾದ ನಾಮ್ ಸುಹ್ಯೆನ್ ವಿರುದ್ಧ 6-4 ಅಂತರದಿಂದ ಪರಾಭವಗೊಂಡರು.
ಇದಕ್ಕೂ ಮುನ್ನ ನಡೆದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಜನ್ ಕೌರ್ ಕೂಡ ಸೋತರು. ಅವರು ಇಂಡೋನೇಷ್ಯಾದ ದಿಯಾನಂದ ಚಾಯಿರುನಿಸಾ ವಿರುದ್ಧ ನಿರಾಸೆಗೀಡಾದರು. ಇಲ್ಲಿಗೆ ಬಿಲ್ಗಾರಿಕೆಯಲ್ಲಿ ಭಾರತದ ಒಲಿಂಪಿಕ್ಸ್ ಸವಾಲು ಅಂತ್ಯಗೊಂಡಿತು.
ಆರಂಭಿಕ ಹಂತದಲ್ಲಿ ಸುಹ್ಯೆನ್ ವಿರುದ್ಧ 3 ಸೆಟ್ಗಳಲ್ಲಿ ಎರಡರಲ್ಲಿ ಗೆದ್ದು ದೀಪಿಕಾ ಭಾರೀ ನಿರೀಕ್ಷೆ ಮೂಡಿಸಿದ್ದರು. ಆದರೆ 4ನೇ ಸೆಟ್ನಲ್ಲಿ ಬರೀ 7ಕ್ಕೆ ಗುರಿಯಿಡುವ ಮೂಲಕ ಮುಂದಿನ ಹಂತಕ್ಕೇರಲಿದ್ದ ಅವಕಾಶವನ್ನು ಕೈಚೆಲ್ಲಿದರು.
ನಾಲ್ಕನೇ ಒಲಿಂಪಿಕ್ಸ್:
2010ರ ಹೊಸದಿಲ್ಲಿ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬಂಗಾರ ಗೆದ್ದಿದ್ದ ದೀಪಿಕಾ, ಈ ಬಾರಿ 4ನೇ ಬಾರಿಗೆ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ್ದರು. ಆದರೆ ಈ ಬಾರಿಯೂ ಅವರು ಬರಿಗೈಯಲ್ಲಿ ತವರಿಗೆ ವಾಪಸಾಗಲಿದ್ದಾರೆ. ಇದಕ್ಕೂ ಹಿಂದಿನ ಲಂಡನ್, ರಿಯೋ ಮತ್ತು ಟೋಕಿಯೊ ಒಲಿಂಪಿಕ್ಸ್ನಲ್ಲೂ ದೀಪಿಕಾ ನಿರಾಸೆ ಮೂಡಿಸಿದ್ದರು.
ಬಿಲ್ಗಾರಿಕೆ ಮಿಶ್ರ ತಂಡ ವಿಭಾಗದಲ್ಲಿ ಅಂಕಿತಾ ಭಕತ್ ಮತ್ತು ಧೀರಜ್ ಬೊಮ್ಮದೇವರ ಅವರನ್ನೊಳಗೊಂಡ ತಂಡ 4ನೇ ಸ್ಥಾನ ಪಡೆದದ್ದೇ ಪ್ಯಾರಿಸ್ನಲ್ಲಿ ಬಿಲ್ಗಾರಿಕೆ ವಿಭಾಗದಲ್ಲಿ ಭಾರತದ ಉತ್ತಮ ಸಾಧನೆಯಾಗಿದೆ. ಉಳಿದಂತೆ ಮತ್ತೆಲ್ಲ ವಿಭಾಗಗಳಲ್ಲೂ ಭಾರತೀಯ ಬಿಲ್ಗಾರರು ನೀರಸ ಪ್ರದರ್ಶನ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.