Olympics; ಇಂದು ಜಾವೆಲಿನ್‌ ಥ್ರೋ ಸ್ಪರ್ಧೆ:ಚಿನ್ನದ ಹುಡುಗ ನೀರಜ್‌ ಮೇಲೆ ನಿರೀಕ್ಷೆ

ಅರ್ಹತಾ ಸುತ್ತಿನಲ್ಲಿ ಭಾಗಿಯಾಗುತ್ತಿರುವ ನೀರಜ್‌, ಕಿಶೋರ್‌ ಜೇನಾ

Team Udayavani, Aug 6, 2024, 6:30 AM IST

Niraj Chopra

ಪ್ಯಾರಿಸ್‌: ಭಾರತದ ಅಥ್ಲೆಟಿಕ್ಸ್‌ ಇತಿಹಾಸದಲ್ಲಿ ವೈಯಕ್ತಿಕ ಚಿನ್ನದ ಪದಕ ಮೊದಲ ಒಲಿಂಪಿಕ್ಸ್‌ ಸಾಧಕನಾಗಿ ಮೂಡಿಬಂದ ನೀರಜ್‌ ಚೋಪ್ರಾ ಕೋಟ್ಯಂತರ ದೇಶವಾಸಿಗಳ ನಿರೀಕ್ಷೆಯನ್ನು ಹೊತ್ತು ಮಂಗಳವಾರ ಪ್ಯಾರಿಸ್‌ ಅಂಗಳದಲ್ಲಿ ಪ್ರತ್ಯಕ್ಷರಾಗಲಿದ್ದಾರೆ. ಜಾವೆಲಿನ್‌ ಎಸೆತದ ಅರ್ಹತಾ ಸ್ಪರ್ಧೆಗಳು ಮಂಗಳವಾರ ನಡೆಯಲಿದ್ದು, ಆ. 8ರ ಗುರುವಾರ ಫೈನಲ್‌ ಏರ್ಪಡಲಿದೆ.

26 ವರ್ಷದ ನೀರಜ್‌ ಚೋಪ್ರಾ ಪ್ಯಾರಿಸ್‌ನಲ್ಲೂ ಚಾಂಪಿಯನ್‌ ಆಗಿ ಮೂಡಿಬಂದರೆ ಒಲಿಂಪಿಕ್ಸ್‌ ಚರಿತ್ರೆಯಲ್ಲಿ ಜಾವೆಲಿನ್‌ ಸ್ವರ್ಣ ಉಳಿಸಿಕೊಂಡ ವಿಶ್ವದ ಕೇವಲ 5ನೇ ಅಥ್ಲೀಟ್‌ ಎನಿಸಲಿದ್ದಾರೆ. ಉಳಿದ ಸಾಧಕರೆಂದರೆ ಸ್ವೀಡನ್‌ನ ಎರಿಕ್‌ ಲೆಮ್ಮಿಂಗ್‌ (1908, 1912), ಫಿನ್ಲಂಡ್‌ನ‌ ಜಾನಿ ಮೈರ (1920, 1924), ಜೆಕ್‌ ಗಣರಾಜ್ಯದ ಜಾನ್‌ ಝಿಲೆಜ್ನಿ (1992, 1996 ಮತ್ತು 2000) ಮತ್ತು ನಾರ್ವೆಯ ಆ್ಯಂಡ್ರೀಸ್‌ ತೊರ್ಕಿಲ್ಡ್‌ಸೆನ್‌ (2004, 2008). ಇವರಲ್ಲಿ ಝಿಲೆಜ್ನಿ ಅವರದು ಹ್ಯಾಟ್ರಿಕ್‌ ಸಾಧನೆಯಾಗಿದೆ.

ಈ ವರ್ಷ ಮೂರೇ ಸ್ಪರ್ಧೆ
ಪ್ಯಾರಿಸ್‌ ಒಲಿಂಪಿಕ್ಸ್‌ಗಾಗಿ ಭಾರೀ ಸಿದ್ಧತೆ ನಡೆಸಿರುವ ನೀರಜ್‌ ಚೋಪ್ರಾ ಈ ವರ್ಷ ವಿಶ್ವ ಮಟ್ಟದ ಮೂರೇ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಆದರೆ ಇಲ್ಲಿ ನಿರೀಕ್ಷಿತ ಮಟ್ಟ ತಲುಪಿಲ್ಲ. ದೋಹಾ ಡೈಮಂಡ್‌ ಲೀಗ್‌ನಲ್ಲಿ ಇವರಿಗೆ ಲಭಿಸಿದ್ದು ದ್ವಿತೀಯ ಸ್ಥಾನ (88.36 ಮೀ.). ಇದೇ ಈ ಸೀಸನ್‌ನಲ್ಲಿ ನೀರಜ್‌ ದಾಖಲಿಸಿದ ಆತ್ಯುತ್ತಮ ಸಾಧನೆ.

ಅನಂತರ ಮೇ 28ರಂದು ನಡೆದ ಓಸ್ಟ್ರಾವಾ ಗೋಲ್ಡನ್‌ ಸ್ಪೈಕ್‌ ಕೂಟದಿಂದ ಹಿಂದೆ ಸರಿದರು. ತೊಡೆಯ ಸ್ನಾಯು ಸಂಬಂಧಿ ನೋವು ಇದಕ್ಕೆ ಕಾರಣವಾಗಿತ್ತು. ಬಳಿಕ ಪಾವೊ ನುರ್ಮಿ ಗೇಮ್ಸ್‌ನಲ್ಲಿ ಪುನರಾಗಮನ ಸಾರಿದರು. ಇಲ್ಲಿ 85.97 ಮೀ. ಸಾಧನೆಗೈದರು.
ಟೋಕಿಯೊದಲ್ಲಿ 87.58 ಮೀ. ಸಾಧನೆಯೊಂದಿಗೆ ಚಿನ್ನ ಗೆದ್ದ ಬಳಿಕ ನೀರಜ್‌ ಚೋಪ್ರಾ ಅವರ ಒಟ್ಟು ಪ್ರದರ್ಶನವೇನೋ ಸ್ಥಿರವಾಗಿದೆ. 15 ಸ್ಪರ್ಧೆಗಳಲ್ಲಿ 85 ಮೀಟರ್‌ಗೂ ಕಡಿಮೆ ದೂರ ದಾಖಲಿಸಿದ್ದು 2 ಸಲ ಮಾತ್ರ. ಪ್ಯಾರಿಸ್‌ನಲ್ಲಿ ಅವರು ಸಂಪೂರ್ಣ ಫಿಟ್‌ ಆಗಿರುವುದರಿಂದ ಭಾರತೀಯರ ನಿರೀಕ್ಷೆ ಗರಿಗೆದರಿದೆ.

ನೀರಜ್‌ ಎದುರಾಳಿಗಳು
ಟೋಕಿಯೊದಲ್ಲಿ ಬೆಳ್ಳಿ ಪದಕ ಗೆದ್ದ ಜೆಕ್‌ ತ್ರೋವರ್‌ ಜಾಕುಬ್‌ ವಾದ್ಲೆಶ್‌, ಜರ್ಮನಿಯ ಜೂಲಿಯನ್‌ ವೆಬರ್‌, ಮಾಜಿ ವಿಶ್ವ ಚಾಂಪಿಯನ್‌ ಆ್ಯಂಡರ್ಸನ್‌ ಪೀಟರ್ ಅವರ ಪ್ರಬಲ ಪೈಪೋಟಿ ನೀರಜ್‌ಗೆ ಎದುರಾಗಲಿದೆ. ಇವರಲ್ಲಿ ವಾದ್ಲೆಶ್‌, ದೋಹಾ ಡೈಮಂಡ್‌ ಲೀಗ್‌’ನಲ್ಲಿ ಭಾರತೀಯನನ್ನು ಹಿಂದಿಕ್ಕಿದ್ದರು.

ಭಾರತದ ಮತ್ತೋರ್ವ ಜಾವೆಲಿನ್‌ ಎಸೆತಗಾರ ಕಿಶೋರ್‌ ಜೇನಾ ಕೂಡ ಸ್ಪರ್ಧೆಯಲ್ಲಿದ್ದಾರೆ. ಕಳೆದ ವರ್ಷದ ಏಷ್ಯಾಡ್‌ನ‌ಲ್ಲಿ 87.54 ಮೀ. ಸಾಧನೆಯಿಂದಾಗಿ ಅವರು ನೇರವಾಗಿ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದರು. ಅನಂತರ 80 ಮೀ. ಗಡಿ ದಾಟಲು ಇವರಿಂದಾಗಲಿಲ್ಲ ಎಂಬುದೊಂದು ಹಿನ್ನಡೆ.

ಟಾಪ್ ನ್ಯೂಸ್

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

isrel netanyahu

Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sanjay Sing WFI

Vinesh Phogat ತೀರ್ಪು ನಮ್ಮ ಪರ ಬರುವ ನಿರೀಕ್ಷೆ;ಅದು ವೈಯಕ್ತಿಕ ಪದಕವಲ್ಲ: ಸಂಜಯ್ ಸಿಂಗ್

America

Paris Olympics: ಅಮೆರಿಕಕ್ಕೆ ಬಂತು ಒಲಿಂಪಿಕ್ಸ್‌  ಧ್ವಜ

emanual

Paris: 2036ರ ಒಲಿಂಪಿಕ್ಸ್‌ ಭಾರತ ನಡೆಸ‌ಬಲ್ಲದು: ಫ್ರಾನ್ಸ್‌ ಅಧ್ಯಕ್ಷ

Paris-ind

Paris Olympics 2024ಕ್ಕೆ ವರ್ಣರಂಜಿತ ವಿದಾಯ

IOA shrugs off Vinish Phogat issue; What did PT Usha say?

IOA; ವಿನೀಶ್‌ ಫೋಗಾಟ್‌ ವಿಚಾರದಲ್ಲಿ ತಣ್ಣಗೆ ನುಣುಚಿಕೊಂಡಿತಾ ಐಒಎ?; ಪಿಟಿ ಉಷಾ ಹೇಳಿದ್ದೇನು?

MUST WATCH

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

ಹೊಸ ಸೇರ್ಪಡೆ

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Belagavi: Let there be a full discussion of issues in the plenary session: Dr. Prabhakar Kore

Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್‌ ಕೋರೆ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು

Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.