Boxing: ಲವ್ಲಿನಾ ಕ್ವಾರ್ಟರ್ ಫೈನಲ್ ಪ್ರವೇಶ… ಅಗ್ರ ಶ್ರೇಯಾಂಕದ ಲೀ ಕ್ವಿನ್ ಸವಾಲು
Team Udayavani, Aug 1, 2024, 7:30 AM IST
ಪ್ಯಾರಿಸ್: ಸತತ 2ನೇ ಒಲಿಂಪಿಕ್ಸ್ ಪದಕದ ಕನಸು ಕಾಣುತ್ತಿರುವ ಬಾಕ್ಸರ್ ಲವ್ಲಿನಾ ಬೊಬೊìಹೇನ್ (75 ಕೆಜಿ) ಬುಧವಾರದ ತಮ್ಮ ಮೊದಲ ಬೂಟ್ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಅವರು ನಾರ್ವೆಯ ಸುನ್ನಿವಾ ಹಾಫ್ಸ್ಟಾಡ್ ವಿರುದ್ಧ 5-0 ಅಂತರದ ಮೇಲುಗೈ ಸಾಧಿಸಿದರು.
ಕಳೆದ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಲವ್ಲಿನಾ 69 ಕೆಜಿ ವಿಭಾಗದಲ್ಲಿ ಕಂಚು ಗೆದ್ದಿದ್ದರು. ಪ್ಯಾರಿಸ್ನಲ್ಲಿ ಇದನ್ನು ಸರಿದೂಗಿಸಲು ಇನ್ನೊಂದು ಗೆಲುವು ಅಗತ್ಯವಿದೆ. ಸೆಮಿಫೈನಲ್ ಪ್ರವೇಶಿಸಿದರೆ ಪದಕ ಖಾತ್ರಿಯಾಗಲಿದೆ.
ಆದರೆ ಆ. 4ರಂದು ನಡೆಯುವ ಕ್ವಾರ್ಟರ್ ಫೈನಲ್ ಸ್ಪರ್ಧೆ ಲವ್ಲಿನಾ ಪಾಲಿಗೆ ಅತ್ಯಂತ ಕಠಿನವಾಗಿ ಪರಿಣಮಿಸುವ ಸಾಧ್ಯತೆ ಇದೆ. ಇಲ್ಲಿ ಅವರು ಚೀನದ ಅಗ್ರ ಶ್ರೇಯಾಂಕದ ಲೀ ಕ್ವಿನ್ ಸವಾಲು ಎದುರಿಸಲಿದ್ದಾರೆ. ಟೋಕಿಯೊ ಒಲಿಂಪಿಕ್ಸ್ನಲ್ಲಿ ಲೀ ಕ್ವಿನ್ ಬೆಳ್ಳಿ ಪದಕ ಜಯಿಸಿದ್ದರು (ಮಿಡ್ಲ್ವೇಟ್, 75 ಕೆಜಿ ವಿಭಾಗ). ಇದಕ್ಕೂ ಹಿಂದಿನ ರಿಯೋ ಗೇಮ್ಸ್ ನಲ್ಲಿ ಕಂಚು ಹಾಗೂ 2022ರ ಏಷ್ಯಾಡ್ನಲ್ಲಿ ಚಿನ್ನ ಗೆದ್ದ ಹೆಗ್ಗಳಿಕೆ ಲೀ ಕ್ವಿನ್ ಅವರದ್ದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್, ಜಡೇಜಾ; ಶತಕ ಬಾರಿಸಿದ ಲೋಕಲ್ ಬಾಯ್
INDvsBAN: ”ಈತ ಭಾರತದ ಬಾಬರ್ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ
Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್ ಮಾಡಿದ ಕ್ರಿಕೆಟ್ ಆಸ್ಟ್ರೇಲಿಯಾ
Ricky Ponting: ಡೆಲ್ಲಿಯಿಂದ ಪಂಜಾಬ್ ಗೆ ಬಂದ ರಿಕಿ ಪಾಂಟಿಂಗ್
Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್ ಟೆಸ್ಟ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.