Paris Olympics ಆರ್ಚರಿ: ಮಿಂಚಿದ ಧೀರಜ್, ಅಂಕಿತಾ
Team Udayavani, Jul 25, 2024, 11:34 PM IST
ಪ್ಯಾರಿಸ್: ಉತ್ತಮ ಫಾರ್ಮ್ ನಲ್ಲಿರುವ ಧೀರಜ್ ಬೊಮ್ಮದೇವರ ಮತ್ತು ಅಂಕಿತಾ ಭಕತ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನ ಆರ್ಚರಿ ಕ್ರೀಡೆಯ ರಿಕರ್ವ್ ತಂಡ ಸ್ಪರ್ಧೆಯಲ್ಲಿ ನೇರ ವಾಗಿ ಕ್ವಾರ್ಟರ್‌ಫೈನಲಿಗೆ ಪ್ರವೇಶಿಸುವ ಮೂಲಕ ಭಾರತದ ಅಭಿಯಾನವನ್ನು ಉತ್ತರ ರೀತಿಯಲ್ಲಿ ಆರಂಭಿಸಿದ್ದಾರೆ.
ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಭಾಗವಹಿ ಸುತ್ತಿರುವ ಧೀರಜ್ ಮತ್ತು ಅಂಕಿತಾ ಅವರ ಅಮೋಘ ನಿರ್ವಹಣೆಯಿಂದ ಭಾರತ ಅಗ್ರ ನಾಲ್ಕರೊಳಗಿನ ಸ್ಥಾನ ಪಡೆದಿದೆ. ಈ ಮೂಲಕ ಆರ್ಚರಿಯಲ್ಲಿ ಒಲಿಂಪಿಕ್ ಪದಕ ಗೆಲ್ಲುವ ವಿಶ್ವಾಸ ಮೂಡಿಸಿದೆ. ಈ ವಿಭಾಗದ ಅಗ್ರ ನಾಲ್ಕು ತಂಡಗಳು ನೇರವಾಗಿ ಕ್ವಾರ್ಟರ್‌ಫೈನಲಿಗೇರಲಿವೆ.
ವೈಯಕ್ತಿಕ ವಿಭಾಗದಲ್ಲಿ ವಿಶ್ವಕಪ್ ಕಂಚು ವಿಜೇತ ಧೀರಜ್ ಅಂಟಾಲ್ಯದ ಮೌರೊ ನೆನ್ಪೋಲಿ ಅವರನ್ನು ಸೋಲಿಸಿ ನಾಲ್ಕನೇ ಸ್ಥಾನ ಪಡೆದರು. ಪುರುಷರ ತಂಡ ಒಟ್ಟಾರೆ ಮೂರನೇ ಸ್ಥಾನ ಪಡೆದು ಕ್ವಾರ್ಟರ್‌ಫೈನಲಿಗೇರಿದೆ.
ವನಿತೆಯರ ವಿಭಾಗದಲ್ಲಿ ಅಂಕಿತಾ ಭಕತ್ ಅಮೋಘ ನಿರ್ವಹಣೆ ನೀಡಿ ಅನುಭವಿ ದೀಪಿಕಾ ಕುಮಾರಿ ಅವರನ್ನು ಹಿಂದಿಕ್ಕಿ 11ನೇ ಸ್ಥಾನ ಪಡೆದಿ ದ್ದಾರೆ. 26ರ ಹರೆಯದ ಅಂಕಿತಾ 666 ಅಂಕಗಳೊಂದಿಗೆ ಭಾರತದ ಅಗ್ರ ರ್‍ಯಾಂಕಿನ ಆಟಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ. ತಂಡ ವಿಭಾಗದಲ್ಲಿ ಒಟ್ಟಾರೆ 1983 ಅಂಕ ಪಡೆದಿರುವ ಭಾರತ ನಾಲ್ಕನೇ ಸ್ಥಾನ ಪಡೆದಿದೆ. 2046 ಅಂಕ ಪಡೆದಿರುವ ಕೊರಿಯ ಅಗ್ರಸ್ಥಾನದಲ್ಲಿದ್ದರೆ ಚೀನಾ ದ್ವಿತೀಯ ಮತ್ತು ಮೆಕ್ಸಿಕೊ ಮೂರನೇ ಸ್ಥಾನದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
Pro Kabaddi: ಮೂರಕ್ಕೇರಿದ ಯುಪಿ ಯೋಧಾಸ್
Head Coach: ವೆಸ್ಟ್ ಇಂಡೀಸ್ ಎಲ್ಲ ಮಾದರಿಗೂ ಡ್ಯಾರನ್ ಸಮ್ಮಿ ಕೋಚ್
Ind vs WI T20: ದ್ವಿತೀಯ ಟಿ20 ಪಂದ್ಯದಲ್ಲಿ ತಿರುಗಿ ಬಿದ್ದ ವೆಸ್ಟ್ ಇಂಡೀಸ್ ವನಿತೆಯರು
NZ vs ENG Test: ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್‌ಗೆ 423 ರನ್ ಜಯಭೇರಿ
MUST WATCH
ಹೊಸ ಸೇರ್ಪಡೆ
Arecanut Growers: ಎರಡು ವರ್ಷಕ್ಕೊಮ್ಮೆ ಅಡಿಕೆ ಫಸಲು ಏರಿಳಿತ
New Bill: ಇನ್ನು ಪಂಚಾಯತ್‌ರಾಜ್ ವಿಶ್ವವಿದ್ಯಾನಿಲಯಕ್ಕೆ ಮುಖ್ಯಮಂತ್ರಿ ಕುಲಾಧಿಪತಿ
Mangaluru: ಕರಾವಳಿ ಹೈನುಗಾರರ ಮನ ಗೆದ್ದ ಮನೆ ಬಾಗಿಲಿಗೆ ಪಶು ಸಂಜೀವಿನಿ
BYV vs Yatnal: ರಾಜ್ಯ ಬಿಜೆಪಿಯಲ್ಲಿ ಬಣ ಕದನ ಮತ್ತಷ್ಟು ಉಲ್ಬಣ
ಯುವಕರನ್ನು ಆಕರ್ಷಿಸಲು ನಾನಾ “ರಜೆ’ಗಳ ಸುರಿಮಳೆ; ಸಾಕುಪ್ರಾಣಿಗಳ ಜತೆ ಕಾಲ ಕಳೆಯಲೂ ರಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.