Paris Olympics: ರೈಲ್ವೇ ಜಾಲದ ಬಳಿಕ ಫೈಬರ್ ಜಾಲದ ಮೇಲೆ ದಾಳಿ!
Team Udayavani, Jul 30, 2024, 6:30 AM IST
ಪ್ಯಾರಿಸ್: ಒಲಿಂಪಿಕ್ಸ್ ಉದ್ಘಾಟನ ದಿನವಾದ ಶುಕ್ರವಾರ (ಜು. 26) ಪ್ಯಾರಿಸ್‌ನಲ್ಲಿ ರೈಲ್ವೇ ಜಾಲದ ಮೇಲೆ ಬೆಂಕಿ ದಾಳಿಯಾಗಿತ್ತು. ಈ ದಾಳಿ ಪ್ರಕರಣ ಇಲ್ಲಿಗೇ ನಿಂತಿಲ್ಲ, ರವಿವಾರ ರಾತ್ರಿ ಅಲ್ಲಿನ ದೂರಸಂಪರ್ಕ ಜಾಲದ ಮೇಲೂ ದಾಳಿ ನಡೆದಿದೆ. ಇದರಿಂದ ಫೈಬರ್ ನೆಟ್‌ವರ್ಕ್‌ಗೆ ಸಮಸ್ಯೆಯಾಗಿದೆ ಎಂದು ಸ್ಥಳೀಯ ಟೆಲಿಕಾಂ ಕಂಪೆನಿಗಳು ತಿಳಿಸಿವೆ.
ಪ್ಯಾರಿಸ್‌ನ ಹಲವು ಕಡೆ ಫೈಬರ್ ಲೈನ್‌ಗಳನ್ನು ಧ್ವಂಸಗೊಳಿಸಲಾಗಿದೆ. ಹಲವು ಕಡೆ ದೂರಸಂಪರ್ಕ ವ್ಯತ್ಯಯವಾಗಲು ಕಾರಣವಾಗಿದ್ದರೂ ಒಲಿಂಪಿಕ್ಸ್ ಸಂಘಟಕರು ಮಾತ್ರ ತಮಗೆ ಏನಾದರೂ ತೊಂದರೆಯಾಗಿದೆಯೇ ಎಂದು ಬಾಯಿ ಬಿಟ್ಟಿಲ್ಲ. ಆದರೆ ಫ್ರಾನ್ಸ್ ಸರಕಾರದ ಕನಿಷ್ಠ 6 ಇಲಾಖೆಗಳಿಗೆ ಇದರಿಂದ ತೊಂದರೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸೆನ್ ನದಿ ನೀರು ಶುದ್ಧವಾಗಿಲ್ಲ
ಹನ್ನೆರಡು ಸಾವಿರ ಕೋಟಿ ರೂ. ಖರ್ಚು ಮಾಡಿ ಪ್ಯಾರಿಸ್‌ನ ಸೆನ್ ನದಿಯನ್ನು ಶುದ್ಧೀಕರಿಸಿದ್ದರೂ ಪ್ರಯೋಜನವಾಗಿಲ್ಲ. ಇದರಲ್ಲಿ ಈಜು ಸ್ಪರ್ಧೆಗಳನ್ನು ನಡೆಸುವಷ್ಟು ನೀರಿನ ಗುಣಮಟ್ಟ ವಿಲ್ಲ ಎಂದು ತಜ್ಞರು ಹೇಳಿದ್ದಾರೆ. ಆದ್ದರಿಂದ ಟ್ರಯಾಥ್ಲಾನ್ ಸಂಘಟಕರು ಸತತ 2ನೇ ದಿನವೂ ಇಲ್ಲಿ ನಡೆಯಬೇಕಾದ ಈಜು ಸ್ಪರ್ಧೆಯನ್ನು ಮುಂದೂ ಡಿದ್ದಾರೆ. ನದಿಯ ನೀರಿನ ಗುಣಮಟ್ಟ ಮುಂದಿನ ಅವಧಿಯಲ್ಲಿ ಸುಧಾರಿಸಿದರೆ, ಇಲ್ಲಿ ಟ್ರಯಾಥ್ಲಾನ್ ಕ್ರೀಡೆಯ ಈಜು ಸ್ಪರ್ಧೆ ನಡೆಯುತ್ತದೆ. ಇಲ್ಲವಾದರೆ ಈಜನ್ನು ಮಾತ್ರ ರದ್ದು ಮಾಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vinesh Phogat ತೀರ್ಪು ನಮ್ಮ ಪರ ಬರುವ ನಿರೀಕ್ಷೆ;ಅದು ವೈಯಕ್ತಿಕ ಪದಕವಲ್ಲ: ಸಂಜಯ್ ಸಿಂಗ್
Paris Olympics: ಅಮೆರಿಕಕ್ಕೆ ಬಂತು ಒಲಿಂಪಿಕ್ಸ್ ಧ್ವಜ
Paris: 2036ರ ಒಲಿಂಪಿಕ್ಸ್ ಭಾರತ ನಡೆಸಬಲ್ಲದು: ಫ್ರಾನ್ಸ್ ಅಧ್ಯಕ್ಷ
Paris Olympics 2024ಕ್ಕೆ ವರ್ಣರಂಜಿತ ವಿದಾಯ
IOA; ವಿನೀಶ್ ಫೋಗಾಟ್ ವಿಚಾರದಲ್ಲಿ ತಣ್ಣಗೆ ನುಣುಚಿಕೊಂಡಿತಾ ಐಒಎ?; ಪಿಟಿ ಉಷಾ ಹೇಳಿದ್ದೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.