Bronze medal ವಿಜೇತ ಸ್ವಪ್ನಿಲ್ ಗೆ ಮೋದಿ ಕರೆ: ಕೋಟಿ ರೂ. ಬಹುಮಾನ ಘೋಷಿಸಿದ ಶಿಂಧೆ
Team Udayavani, Aug 1, 2024, 8:20 PM IST
ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ 50 ಮೀಟರ್ ರೈಫಲ್ 3 ಪಿ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಶೂಟರ್ ಸ್ವಪ್ನಿಲ್ ಕುಸಾಲೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಕರೆ ಮಾಡಿ ಅಭಿನಂದಿಸಿದ್ದಾರೆ.
ಸ್ವಪ್ನಿಲ್ ಕುಸಾಲೆ ಅವರಿಗೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರು 1 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಶಿಂಧೆ ಅವರು ಇಂದು ಕೊಲ್ಲಾಪುರದ ಸ್ವಪ್ನಿಲ್ ಕುಸಾಲೆ ಅವರ ಕುಟುಂಬಕ್ಕೆ ಕರೆ ಮಾಡಿ ಅಭಿನಂದಿಸಿದರು ಮತ್ತು ಸ್ವಪ್ನಿಲ್ ಅವರ ಮುಂದಿನ ಪ್ರಯತ್ನಗಳಿಗೆ ಮಹಾರಾಷ್ಟ್ರ ಸರ್ಕಾರದಿಂದ ಸಂಪೂರ್ಣ ಬೆಂಬಲ ನೀಡುತ್ತೇವೆ. ಅವರಿಗೆ ಮಹಾರಾಷ್ಟ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ.ಅವರು ರಾಜ್ಯದ ಹೆಮ್ಮೆ’ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸ್ವಪ್ನಿಲ್ ಕುಸಾಲೆ ಅವರ ತಂದೆ ಸುರೇಶ್ ಅವರೊಂದಿಗೆ ಮಾತನಾಡಿ ಅಭಿನಂದನೆ ಸಲ್ಲಿಸಿದರು. ಕುಸಾಲೆ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.
‘ಕ್ರೀಡಾ ಪ್ರಬೋಧನ್’ ನೆರವಾಯಿತು
ಎಎನ್ ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಸ್ವಪ್ನಿಲ್ ಕುಸಾಲೆ “ಒಲಿಂಪಿಕ್ ಪದಕ ಗೆಲ್ಲುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಕನಸು. ನಾನು ಕಷ್ಟಪಟ್ಟು ಈ ಪದಕವನ್ನು ಸಾಧಿಸಿದ್ದೇನೆ. ಮುಂದಿನ ಒಲಿಂಪಿಕ್ಸ್‌ಗಾಗಿ ನಾನು ಶ್ರಮಿಸುತ್ತೇನೆ.ಫೆಡರೇಶನ್ ಮತ್ತು ಎಸ್‌ಎಐ ಸೇರಿದಂತೆ ಎಲ್ಲರೂ ಶೂಟರ್‌ಗಳನ್ನು ಬೆಂಬಲಿಸಿದರು.ನಮ್ಮ ರಾಷ್ಟ್ರಗೀತೆ ನುಡಿಸುವಾಗ ನಾವು ಭಾರತಕ್ಕೆ ಹೆಮ್ಮೆ ತಂದಿದ್ದೇವೆ ಎಂದು ನಾವು ಭಾವಿಸುತ್ತೇವೆ. ಬಾಲ್ಯದಿಂದಲೂ ನನ್ನ ತಂದೆ ನನ್ನನ್ನು ಕ್ರೀಡೆಗೆ ಪ್ರೋತ್ಸಾಹಿಸುತ್ತಿದ್ದರು, ನಾನು ಮಹಾರಾಷ್ಟ್ರ ಸರ್ಕಾರದ ‘ಕ್ರೀಡಾ ಪ್ರಬೋಧನ್’ ಯೋಜನೆಯ ಮೂಲಕ ನನಗೆ ತುಂಬಾ ದೊಡ್ಡ ಸಹಕಾರ ದೊರಕಿದೆ ಎಂದು ಹೇಳಿದ್ದಾರೆ.
#WATCH | After winning bronze medal in Men’s 50m Rifle 3P event at the Paris Olympics, Shooter Swapnil Kusale says, “Winning an Olympic medal is the dream of every athlete. I worked hard and achieved this medal. I will work hard for the next Olympics also…Everyone including the… pic.twitter.com/Qr41Oosu4O
— ANI (@ANI) August 1, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vinesh Phogat ತೀರ್ಪು ನಮ್ಮ ಪರ ಬರುವ ನಿರೀಕ್ಷೆ;ಅದು ವೈಯಕ್ತಿಕ ಪದಕವಲ್ಲ: ಸಂಜಯ್ ಸಿಂಗ್
Paris Olympics: ಅಮೆರಿಕಕ್ಕೆ ಬಂತು ಒಲಿಂಪಿಕ್ಸ್ ಧ್ವಜ
Paris: 2036ರ ಒಲಿಂಪಿಕ್ಸ್ ಭಾರತ ನಡೆಸಬಲ್ಲದು: ಫ್ರಾನ್ಸ್ ಅಧ್ಯಕ್ಷ
Paris Olympics 2024ಕ್ಕೆ ವರ್ಣರಂಜಿತ ವಿದಾಯ
IOA; ವಿನೀಶ್ ಫೋಗಾಟ್ ವಿಚಾರದಲ್ಲಿ ತಣ್ಣಗೆ ನುಣುಚಿಕೊಂಡಿತಾ ಐಒಎ?; ಪಿಟಿ ಉಷಾ ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.