TT Doubles:ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕರಾವಳಿಯ ಪ್ರತಿಭೆ ಅರ್ಚನಾ ಕಾಮತ್ ಸ್ಪರ್ಧೆ
Team Udayavani, Aug 2, 2024, 6:55 AM IST
ಉಡುಪಿ: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್‌ನಲ್ಲಿ ಮಂಗಳೂರು ಮೂಲದ ವೈದ್ಯ ದಂಪತಿ ಪುತ್ರಿ ಡಾ| ಅರ್ಚನಾ ಕಾಮತ್ ಅವರು ಭಾರತೀಯ ಮಹಿಳಾ ಟೇಬಲ್ ಟೆನಿಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ ಮತ್ತು ಅವರ ಈವರೆಗಿನ ಸಾಧನೆಯು ಭಾರತದ ಟಿಟಿ ಕ್ರೀಡೆಯ ಉದಯೋನ್ಮುಖ ಪ್ರತಿಭೆ ಎಂದೇ ಖ್ಯಾತರಾಗಿದ್ದಾರೆ.
ಬೆಂಗಳೂರಿನ ಖ್ಯಾತ ವೈದ್ಯರಾದ ಡಾ| ಗಿರೀಶ್ ಕಾಮತ್ ಹಾಗೂ ಡಾ| ಅನುರಾಧಾ ಕಾಮತ್ ಅವರ ಪುತ್ರಿ ಅರ್ಚನಾ ಕಾಮತ್ ಅವರು ತಮ್ಮ 9ನೇ ವರ್ಷದಿಂದಲೇ ಮಂಗಳೂರಿನ ಪದವಿನಂಗಡಿಯ ಕೊಂಚಾಡಿಯಲ್ಲಿ ಟೇಬಲ್ ಟೆನಿಸ್ ಅಭ್ಯಾಸ ಆರಂಭಿಸಿದ್ದರು. ರಜಾ ದಿನಗಳಲ್ಲಿ ಪ್ರಕಾಶ್ ಕಾಮತ್ ಅವರೊಂದಿಗೆ ಟೇಬಲ್ ಟೆನಿಸ್ ಆಡುತ್ತಿದ್ದ ಅವರು ಆಬಳಿಕ ಟಿ.ಟಿ.ಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಬಂದರು.
ಕುಟುಂಬದಿಂದ ಸಿಕ್ಕಿದ ನಿರೀಕ್ಷೆಗೂ ಮೀರಿದ ಬೆಂಬಲದ ಜತೆಗೆ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು, ಪ್ರಾಂಶುಪಾಲರ ಪ್ರೋತ್ಸಾಹದಿಂದ ಅವರು ಅಲ್ಪಾವಧಿಯಲ್ಲಿಯೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಹಲವು ಪದಕ ಗಳಿಸಿದ್ದಾರೆ.
ಸಾಧನೆಯ ಹಾದಿ
2014ರಲ್ಲಿ ಬಾರ್ಬಡೋಸ್‌ನಲ್ಲಿ ನಡೆದ ಐಟಿಟಿಎಫ್ ವರ್ಲ್ಡ್ ಕೆಡೆಟ್ ಚಾಲೇಂಜ್‌ನಲ್ಲಿ ಏಷ್ಯಾವನ್ನು ಪ್ರತಿನಿಧಿಸಿದ್ದ ಅವರ ತಂಡ ಬೆಳ್ಳಿ ಪದಕ ಗೆದ್ದಿತ್ತು. 2016ರಲ್ಲಿ ಮೊರೊಕ್ಕೋದಲ್ಲಿ ನಡೆದ ಐಟಿಟಿಎಫ್ ಜೂನಿಯರ್ ಸರ್ಕ್ನೂಟ್‌ನಲ್ಲಿ ಅರ್ಚನಾ ಅವರು ಸಿಂಗಲ್ಸ್, ಡಬಲ್ಸ್ ಮತ್ತು ತಂಡವಾಗಿ ಆಡಿ ಚಿನ್ನದ ಪದಕ ಗೆದ್ದು ವಿಶೇಷ ಸಾಧನೆ ಮಾಡಿದ್ದರು. ಒಟ್ಟಾರೆ 129 ಪದಕ ಗೆದ್ದ ಸಾಧನೆ ಮಾಡಿದ ಅರ್ಚನಾ 22 ಅಂತಾರಾಷ್ಟ್ರೀಯ, 14 ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿ ಮಿಂಚಿದ್ದರು. 2015ರಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪದಕವನ್ನು ಪಡೆದಿದ್ದಾರೆ.
ಶಿಕ್ಷಣದಲ್ಲೂ ಸಾಧನೆ
ಅರ್ಚನಾ ಅವರು ಕ್ರೀಡೆಯ ಜತೆಗೆ ಶೈಕ್ಷಣಿಕ ಜೀವನದಲ್ಲೂ ವಿಶೇಷ ಸಾಧನೆ ಮಾಡಿದ್ದಾರೆ. 2016ರಲ್ಲಿ ಪ್ರೌಢಶಾಲಾ ಹಂತದಲ್ಲಿ ಬೆಸ್ಟ್ ಔಟ್‌ಗೊàಯಿಂಗ್ ಸ್ಟೂಡೆಂಟ್ ಆ್ಯಂಡ್ ಬೆಸ್ಟ್ ಆಲ್‌ರೌಂಡರ್ ಆಗಿದ್ದರು. ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.98.72 ಅಂಕದೊಂದಿಗೆ ರಾಜ್ಯಕ್ಕೆ 9ನೇ ರ್‍ಯಾಂಕ್ ಪಡೆದಿದ್ದರು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.97 ಅಂಕ ಪಡೆದಿದ್ದ ಅವರು ಅರ್ಥಶಾಸ್ತ್ರದಲ್ಲಿ ಬಿ.ಎ. ಹಾನರ್ಸ್ ಪೂರೈಸಿ, ಈಗ ಇಂಟರ್‌ನ್ಯಾಶನಲ್ ರಿಲೇಶನ್ಸ್, ಸೆಕ್ಯೂರಿಟಿ ಆ್ಯಂಡ್ ಸ್ಟ್ರಾಟೆಜಿ ವಿಷಯದಲ್ಲಿ ಎಂ.ಎ. ಅಂತಿಮ ಸೆಮಿಸ್ಟರ್ ಓದುತ್ತಿದ್ದಾರೆ.
ಆ. 5ರಿಂದ ಡಬಲ್ಸ್ ಸ್ಪರ್ಧೆ
ಅರ್ಚನಾ ಕಾಮತ್ ಅವರು ಟೇಬಲ್ ಟೆನಿಸ್ ಸ್ಪರ್ಧೆಯ ಡಬಲ್ಸ್‌ನಲ್ಲಿ ಮನಿಕಾ ಬಾತ್ರಾ, ಶ್ರೀಜಾ ಅಕುಲಾ ಜತೆ ಆಡಲಿದ್ದಾರೆ. ವನಿತೆಯರ ಡಬಲ್ಸ್‌ನ ಅಂತಿಮ 16ರ ಸುತ್ತಿನ ಪಂದ್ಯಗಳು ಆ. 5ರಂದು ಆರಂಭಗೊಳ್ಳಲಿವೆ. ಈ ಸ್ಪರ್ಧೆಯಲ್ಲಿ ಶ್ರೇಷ್ಠ ಸಾಧನೆ ಮಾಡುವ ಮೂಲಕ ಅವರು ದೇಶದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸುವಂತಾಗಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vinesh Phogat ತೀರ್ಪು ನಮ್ಮ ಪರ ಬರುವ ನಿರೀಕ್ಷೆ;ಅದು ವೈಯಕ್ತಿಕ ಪದಕವಲ್ಲ: ಸಂಜಯ್ ಸಿಂಗ್
Paris Olympics: ಅಮೆರಿಕಕ್ಕೆ ಬಂತು ಒಲಿಂಪಿಕ್ಸ್ ಧ್ವಜ
Paris: 2036ರ ಒಲಿಂಪಿಕ್ಸ್ ಭಾರತ ನಡೆಸಬಲ್ಲದು: ಫ್ರಾನ್ಸ್ ಅಧ್ಯಕ್ಷ
Paris Olympics 2024ಕ್ಕೆ ವರ್ಣರಂಜಿತ ವಿದಾಯ
IOA; ವಿನೀಶ್ ಫೋಗಾಟ್ ವಿಚಾರದಲ್ಲಿ ತಣ್ಣಗೆ ನುಣುಚಿಕೊಂಡಿತಾ ಐಒಎ?; ಪಿಟಿ ಉಷಾ ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ
Malpe: ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.