Women’s ಟೇಬಲ್ ಟೆನಿಸ್: ಕ್ವಾರ್ಟರ್ ಫೈನಲ್‌ಗೆ ಭಾರತ ತಂಡ
ರೊಮೇನಿಯಾ ವಿರುದ್ಧ ಮಣಿಕಾ, ಶ್ರೀಜಾ, ಅರ್ಚನಾ ತಂಡಕ್ಕೆ ಜಯ
Team Udayavani, Aug 5, 2024, 10:29 PM IST
ಪ್ಯಾರಿಸ್: ಒಲಿಂಪಿಕ್ಸ್ ಮಹಿಳಾ ಟೇಬಲ್ ಟೆನಿಸ್ ತಂಡ ಸ್ಪರ್ಧೆಯಲ್ಲಿ ಭಾರತ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ತಲುಪಿ ದಾಖಲೆ ಬರೆದಿದೆ. ಸೋಮವಾರದ ಸ್ಪರ್ಧೆಯಲ್ಲಿ ಕನ್ನಡತಿ ಅರ್ಚನಾ ಗಿರೀಶ್ ಕಾಮತ್, ಮಣಿಕಾ ಬಾತ್ರಾ ಮತ್ತು ಶ್ರೀಜಾ ಅಕುಲಾ ಅವರನ್ನೊಳಗೊಂಡ ತಂಡ ರೊಮೇನಿಯಾ ವಿರುದ್ಧ 3-2 ಅಂತರದ ಜಯ ಸಾಧಿಸಿತು.
ಒಟ್ಟು 5 ಸುತ್ತುಗಳ ಸ್ಪರ್ಧೆಯಲ್ಲಿ ಭಾರತ ಆರಂಭಿಕ 2 ಪಂದ್ಯಗಳನ್ನು ಗೆದ್ದು 2-0 ಮುನ್ನಡೆ ಸಾಧಿಸಿತು. ಆದರೆ ತಿರುಗಿ ಬಿದ್ದ ರೊಮೇನಿಯಾ ಮುಂದಿನೆರಡು ಪಂದ್ಯಗಳನ್ನು ಗೆದ್ದು 2-2 ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ನಿರ್ಣಾಯಕ ಪಂದ್ಯದಲ್ಲಿ ಮಣಿಕಾ ಬಾತ್ರಾ ಭಾರತದ ಗೆಲುವನ್ನು ಸಾರಿದರು.
ಮೊದಲ ಡಬಲ್ಸ್‌ನಲ್ಲಿ ಕರಾವಳಿ ಮೂಲದ ಕನ್ನಡತಿ ಅರ್ಚನಾ ಕಾಮತ್-ಶ್ರೀಜಾ ಅಕುಲಾ ಸೇರಿಕೊಂಡು ಅಡಿನಾ ಡಿಯಾಕೊನು-ಎಲಿಜಬೆತ ಸಮರಾ ಜೋಡಿ ವಿರುದ್ಧ 11-9, 12-10, 11-7 ಅಂತರದ ಜಯ ಸಾಧಿಸಿದರು. ಮುಂದಿನ ಪಂದ್ಯದಲ್ಲಿ ಮಣಿಕಾ ಬಾತ್ರಾ 11-5, 11-7, 11-7 ಅಂತರದಿಂದ ಬರ್ನಾಡೆಟ್ ಸೋಕ್ಸ್ ವಿರುದ್ಧ ಗೆದ್ದರು.
3ನೇ ಪಂದ್ಯದಲ್ಲಿ ಎಲಿಜಬೆತ್ ಸಮರಾ ವಿರುದ್ಧ ಶ್ರೀಜಾ ಸೋಲು ಕಾಣಬೇಕಾಯಿತು. ಅಂತರ 11-8, 4-11, 11-7, 6-11. 4ನೇ ಪಂದ್ಯದಲ್ಲಿ ಅರ್ಚನಾಗೆ ಅದೃಷ್ಟ ಒಲಿಯಲಿಲ್ಲ. ಅವರು ಬರ್ನಾಡೆಟ್ ಸೋಕ್ಸ್ ವಿರುದ್ಧ 5-11, 11-8, 7-11 ಅಂತರದಿಂದ ಸೋತರು. ರೊಮೇನಿಯಾ ಹೋರಾಟವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿತ್ತು. ನಿರ್ಣಾಯಕ ಪಂದ್ಯದಲ್ಲಿ ಮಣಿಕಾ ಬಾತ್ರಾ ಭಾರತದ ಪಾಲಿನ ಆಪತಾºಂಧವರಾಗಿ ಮೂಡಿಬಂದರು. ಅವರು ಅಡಿನಾ ಡಿಯಾಕೊನು ವಿರುದ್ಧ 11-5, 11-9, 11-9 ಮೇಲುಗೈ ಸಾಧಿಸಿದರು.
* ಪುರುಷರ ಟಿಟಿ, ಚೀನ ಎದುರಾಳಿ
ಟೇಬಲ್ ಟೆನಿಸ್ ತಂಡ ವಿಭಾಗದಲ್ಲಿ ಭಾರತದ ಪುರುಷರು ಸೋಮವಾರ ಚೀನವನ್ನು ಎದುರಿಸಲಿದೆ. ಶರತ್ ಕಮಲ್, ಮಾನವ್ ಥಾಕರ್, ಹರ್ಮೀತ್ ದೇಸಾಯಿ ಭಾರತ ತಂಡದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vinesh Phogat ತೀರ್ಪು ನಮ್ಮ ಪರ ಬರುವ ನಿರೀಕ್ಷೆ;ಅದು ವೈಯಕ್ತಿಕ ಪದಕವಲ್ಲ: ಸಂಜಯ್ ಸಿಂಗ್
Paris Olympics: ಅಮೆರಿಕಕ್ಕೆ ಬಂತು ಒಲಿಂಪಿಕ್ಸ್ ಧ್ವಜ
Paris: 2036ರ ಒಲಿಂಪಿಕ್ಸ್ ಭಾರತ ನಡೆಸಬಲ್ಲದು: ಫ್ರಾನ್ಸ್ ಅಧ್ಯಕ್ಷ
Paris Olympics 2024ಕ್ಕೆ ವರ್ಣರಂಜಿತ ವಿದಾಯ
IOA; ವಿನೀಶ್ ಫೋಗಾಟ್ ವಿಚಾರದಲ್ಲಿ ತಣ್ಣಗೆ ನುಣುಚಿಕೊಂಡಿತಾ ಐಒಎ?; ಪಿಟಿ ಉಷಾ ಹೇಳಿದ್ದೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.