![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Jan 10, 2024, 1:24 AM IST
ಉಡುಪಿ: ಪುತ್ತಿಗೆ ಮಠಾ ಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯೋತ್ಸವದ ಹೊರೆಕಾಣಿಕೆ ಮೆರವಣಿಗೆಗೆ ಉಡುಪಿ ಸಂಸ್ಕೃತ ಕಾಲೇಜಿನ ಬಳಿ ಮಂಗಳವಾರ ಚಾಲನೆ ನೀಡಲಾಯಿತು.
ಮಠದ ದಿವಾನರಾದ ನಾಗರಾಜ್ ಆಚಾರ್ಯ, ಪರ್ಯಾಯ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್ ಹಾಗೂ ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಅವರು ಚಾಲನೆ ನೀಡಿದರು.
ಸಂಸ್ಕೃತ ಕಾಲೇಜಿನ ಬಳಿಯಿಂದ ಆರಂಭಗೊಂಡ ಮೆರವಣಿಗೆ ಕನಕದಾಸ ರಸ್ತೆ, ರಥಬೀದಿ, ವಿದ್ಯೋದಯ ಕಾಲೇಜು, ಮೂಲಕ ಉಗ್ರಾಣ ಸ್ಥಳಕ್ಕೆ ತಂದು ಅಲ್ಲಿ ಮುಹೂರ್ತ ನೆರವೇರಿಸಲಾಯಿತು. ತಟ್ಟಿರಾಯ, ನಾಸಿಕ್ ಬ್ಯಾಂಡ್, ವಾದ್ಯ, ಸಿಡಿಮದ್ದು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತು. ಬುಧವಾರದಿಂದ ಜೋಡುಕಟ್ಟೆಯಿಂದ ಅದ್ಧೂರಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.
ಹೊರೆಕಾಣಿಕೆ ಸಮಿತಿ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಪ್ರಮುಖರಾದ ರಮೇಶ್ ಭಟ್, ರಮೇಶ್ ಶೆಟ್ಟಿ, ಮಂಜುನಾಥ್ ಉಪಾಧ್ಯಾಯ, ರವೀಂದ್ರ ಆಚಾರ್ಯ, ವಿಜಯ ರಾಘವ ರಾವ್, ರಾಮಚಂದ್ರ ಉಪಾಧ್ಯಾ, ಶ್ರೀನಿವಾಸ ಬಾದ್ಯ, ರಘುಪತಿ ರಾವ್, ಹಯವದನ ಭಟ್, ಸತೀಶ್ ಕುಮಾರ್, ಗೌತಮ್ ಹೆಗಡೆ, ದೀಪಕ್ ಶೇಟ್, ಕಿರಣ್ ಶೇಟ್, ರುದ್ರಯ್ಯ ಆಚಾರ್ಯ, ನಳಿನಿ ಪ್ರದೀಪ್ ರಾವ್, ಸಂದೀಪ್ ಮಂಜ, ನಾಗರಾಜ ಉಪಾಧ್ಯಾಯ, ಸಂತೋಷ್ ಪಿ. ಶೆಟ್ಟಿ ತೆಂಕರಗುತ್ತು, ಶೋಭಾ ಉಪಾಧ್ಯಾಯ, ಜಗದೀಶ್ ಶೇಟ್ ಮೊದಲಾದವರು ಉಪಸ್ಥಿತರಿದ್ದರು.
You seem to have an Ad Blocker on.
To continue reading, please turn it off or whitelist Udayavani.