Udupi; 3ನೇ ಜ್ಯೇಷ್ಠಯತಿಗೆ 4ನೇ ಪರ್ಯಾಯ ಯೋಗ
Team Udayavani, Jan 16, 2024, 7:45 AM IST
ಉಡುಪಿ: ಶ್ರೀಕೃಷ್ಣನಿಗೆ ನಾಲ್ಕನೆಯ ಬಾರಿಗೆ ಪರ್ಯಾಯ ಪೂಜೆಯನ್ನು ನೆರವೇರಿಸುವ ಕೊನೆಯ
ಘಟ್ಟದಲ್ಲಿರುವ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಅಷ್ಟಮಠಗಳಲ್ಲಿ ಮೊದಲ ಜ್ಯೇಷ್ಠ ಯತಿಗಳಾದರೆ, ಗುರುವಾರ ಮುಂಜಾ ವ ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಪ್ರಸ್ತುತ ಮೂರನೆಯ ಜ್ಯೇಷ್ಠ ಯತಿಗಳು.
ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಪುತ್ತಿಗೆ ಮಠದ 30ನೇ, ಶಿಷ್ಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು 31ನೇ ಯತಿ
ಗಳು. ಶ್ರೀ ಸುಗುಣೇಂದ್ರತೀರ್ಥರ ಪರಮಗುರು ಗಳಾದ 28ನೇ ಯತಿ ಶ್ರೀ ಸುಧೀಂದ್ರತೀರ್ಥರು (1856-1957) ನಾಲ್ಕು ಬಾರಿ ಪರ್ಯಾಯ ಪೀಠಾರೋಹಣ (1896 -97, 1912-13, 1928-29, 1944-45) ಮಾಡಿದ್ದರು. ಬಳಿಕ ಈ ಮಠದಲ್ಲಿ ನಾಲ್ಕನೆಯ ಬಾರಿಗೆ ಪರ್ಯಾಯ ಪೂಜಾ ಅವಕಾಶ ಸಿಗುತ್ತಿರುವುದು ಈಗ. ಶ್ರೀಸುಗುಣೇಂದ್ರತೀರ್ಥರ ಗುರುಗಳಾದ 29ನೆಯ ಯತಿ ಶ್ರೀ ಸುಜ್ಞಾನೇಂದ್ರತೀರ್ಥರಿಗೆ ಒಂದು ಬಾರಿ ಮಾತ್ರ (1960-61) ಪರ್ಯಾಯ ಪೂಜೆ ನಡೆಸುವ ಅವಕಾಶ ಲಭಿಸಿತ್ತು.
ಕಾಪು ತಾಲೂಕಿನ ಎಲ್ಲೂರು ಗ್ರಾಮದ ಮಾಣಿಯೂರಿನಲ್ಲಿ ಎಂ. ಗೋವಿಂದಾಚಾರ್ಯ ಮತ್ತು ಕಮಲಮ್ಮ ಅವರ ಪುತ್ರನಾಗಿ 15.09.1961ರಲ್ಲಿ ಜನಿಸಿದಇವರ ಹೆಸರು ಹಯವದನ.ಎಂ. ಗೋವಿಂದಾಚಾರ್ಯ ರು ಮುದರಂಗಡಿ ಹೈಸ್ಕೂಲ್‌ನ ಹಿಂದಿ/ಕನ್ನಡ ಪಂಡಿತ ಶಿಕ್ಷಕರಾಗಿದ್ದರು. ಮೊದಲು ಅನೇಕ ಜಾತಕಗಳನ್ನು ಪರಿಶೀಲಿಸಿದ ಬಳಿಕ ಪುತ್ತಿಗೆ ಮಠದ ಶ್ರೀ ಸುಜ್ಞಾನೇಂದ್ರತೀರ್ಥರು ಗೋವಿಂದಾ ಚಾರ್ಯರನ್ನು ಕರೆಸಿ ಹಯವದನನನ್ನು ಮಠಕ್ಕೆ ಕೊಡಲು ಕೇಳಿದರು. ತಾಯಿ ಒಪ್ಪಿರಲಿಲ್ಲ. “ನಮಗೆ ದೇವರು 11 ಮಕ್ಕಳನ್ನು ಕೊಟ್ಟಿದ್ದಾನೆ. ಒಬ್ಬ ಮಗನನ್ನು ಶ್ರೀಕೃಷ್ಣನ ಸೇವೆಗಾಗಿ ಕೊಡೋಣ’ ಎಂದು ಗೋವಿಂದಾಚಾರ್ಯರು ಸಮಾಧಾನಪಡಿಸಿದ ಬಳಿಕ ಕಮಲಮ್ಮ
ಒಪ್ಪಿದ್ದರು. ಹಯವದನ ಮಾಣಿಯೂರು ಸಮೀಪದ ಕೆಮುಂಡೇಲು ಶಾಲೆಯಲ್ಲಿ ಏಳನೆಯ ತರಗತಿ ಓದುತ್ತಿರುವಾಗ 13ನೇ ವಯಸ್ಸಿನಲ್ಲಿ ಶ್ರೀ ಸುಜ್ಞಾನೇಂದ್ರತೀರ್ಥ ಶ್ರೀಪಾದರಿಂದ 08.04.1974ರಲ್ಲಿ ಸನ್ಯಾಸಾಶ್ರಮ
ಸ್ವೀಕರಿಸಿ ಶ್ರೀ ಸುಗುಣೇಂದ್ರ ತೀರ್ಥರೆಂದು ನಾಮಕರಣ ಮಾಡಿದರು. ಪಲಿಮಾರು ಮತ್ತು ಭಂಡಾರಕೇರಿ ಮಠದ ಹಿರಿಯ ತಪಸ್ವಿ ಶ್ರೀ ವಿದ್ಯಾಮಾನ್ಯತೀರ್ಥರಿಂದ ವೇದಾಂತದ ಉನ್ನತ ಗ್ರಂಥಗಳನ್ನು ಅಭ್ಯಸಿಸಿದರು.
ಹಿಂದಿನ ಪರ್ಯಾಯಗಳಲ್ಲಿ ಎರಡುಸ್ವಾಗತ ಗೋಪುರಗಳು, ಗೀತಾ ಮಂದಿರ, ನವರತ್ನ ರಥ, ಅನ್ನಬ್ರಹ್ಮ ಭೋಜನ ಶಾಲೆ, ಇಂದ್ರಪ್ರಸ್ಥ ಅತಿಥಿ ಗೃಹಗಳನ್ನು ಸಮರ್ಪಿಸಿದ್ದಾರೆ. 1997ರಬಳಿಕ ಜಾಗತಿಕ ಮಟ್ಟದ ವಿವಿಧ ಸಮ್ಮೇಳನಗಳಲ್ಲಿ ಉಡುಪಿಯ ಪ್ರತಿ ನಿಧಿಯಾಗಿ ಪ್ರಬಂಧ ಮಂಡಿಸಿದ್ದಾರೆ. ವಿದೇಶಗಳ ಹಲವೆಡೆ ಗೌರವಾದರ, ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿದೇಶ ಗಳಲ್ಲಿ 15 ಶಾಖಾ ಮಠಗಳನ್ನೂ ತೆರೆ ದಿದ್ದು ಧರ್ಮಪ್ರಸಾರ ಕಾರ್ಯವನ್ನು ಮಾಡುತ್ತಿದ್ದಾರೆ. ನಾಲ್ಕು ಕಡೆ ವಿದ್ಯಾ ಪೀಠಗಳನ್ನು ಸ್ಥಾಪಿಸಿ ವೇದ, ಸಂಸ್ಕೃತ, ವೇದಾಂತ ಅಧ್ಯಯನಗಳನ್ನು ವಿದ್ಯಾರ್ಥಿಗಳಿಗೆ ಉಣಬಡಿಸುತ್ತಿದ್ದಾರೆ. ನಾಲ್ಕನೆಯ ಪರ್ಯಾಯ ಕಾಲದಲ್ಲಿ ಹಲವು ಮಹತ್ವದ ಯೋಜನೆಗಳನ್ನು ಹಾಕಿಕೊಂಡಿದ್ದಾರೆ.
ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಪೂರ್ವಾಶ್ರಮದ ಹೆಸರು ಪ್ರಶಾಂತ ಆಚಾರ್ಯ. ಉಡುಪಿಯ ಕುಂಜಿಬೆಟ್ಟಿನಲ್ಲಿ 11.08.1989ರಲ್ಲಿ ಜನಿಸಿ ಎಂಜಿನಿಯರಿಂಗ್ ಶಿಕ್ಷಣವನ್ನು ಪಡೆದ ಬಳಿಕ ಬೆಂಗಳೂರಿನಲ್ಲಿ 7 ವರ್ಷ ವಿವಿಧ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದರು. ಮೂಲತಃ ಕಾಪು ತಾಲೂಕಿನ ಅಡ್ವೆಯವರು. ತಂದೆಗುರುರಾಜ ಆಚಾರ್ಯ, ತಾಯಿವಿನುತಾ ಆಚಾರ್ಯ. ಇವರು ಉಡುಪಿ
ಕುಂಜಿಬೆಟ್ಟಿನಲ್ಲಿ ಹೊಟೇಲ್ ನಡೆಸು ತ್ತಿದ್ದರು. ಬೆಂಗಳೂರಿನಲ್ಲಿರುವಾಗ ಧಾರ್ಮಿಕ, ಆಧ್ಯಾತ್ಮಿಕ ಜಿಜ್ಞಾಸೆಯಿಂದ ಪ್ರಶಾಂತರು ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸಂಪರ್ಕಕ್ಕೆ ಬಂದು ಕೃಷ್ಣಪೂಜೆ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಪರಿಶೀಲನೆ ಬಳಿಕ22-04-2019ರಲ್ಲಿ ಸನ್ಯಾಸಾಶ್ರಮದೀಕ್ಷೆಯನ್ನು ಶ್ರೀ ಸುಗುಣೇಂದ್ರ ತೀರ್ಥ ರು ನೀಡಿದರು. ಅಂದಿನಿಂದ ಇತ್ತೀಚೆಗೆ ನಡೆದ ಅಕ್ಕಿ ಮುಹೂರ್ತದವರೆಗೂ ಪುತ್ತಿಗೆ ಮೂಲಮಠದಲ್ಲಿದ್ದು ಶಾಸ್ತ್ರಾಧ್ಯ
ಯನ ನಡೆಸಿದ್ದಾರೆ. ಅಕ್ಕಿ ಮುಹೂರ್ತದ ಬಳಿಕ ಹಿರಿಯ ಶ್ರೀಗಳ ಜತೆ ಪರ್ಯಾಯ ಸಂಚಾರ ಕೈಗೊಂಡರು.
ದ್ವಂದ್ವ ಮಠಾಧೀಶರ ಸಾಮ್ಯ!
ಪರ್ಯಾಯ ನಿರ್ಗಮನ ಪೀಠಾಧೀಶ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥರು ಮತ್ತು ಆಗಮನ ಪೀಠಾಧೀಶ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರು ದ್ವಂದ್ವ ಮಠಾಧೀಶರು. ಇವರಿಬ್ಬರ ಜನನ ದಿನಾಂಕ ಒಂದೇ ಅದು 15ನೇ ತಾರೀಕು ಮತ್ತು ಇವರಿಬ್ಬರಿಗೂ ಆಶ್ರಮ ಗುರುಗಳು ಒಬ್ಬರೇ ಶ್ರೀ ಸುಜ್ಞಾನೇಂದ್ರತೀರ್ಥರು. ಸನ್ಯಾಸಾಶ್ರಮವಾದುದು ಒಂದೇ ವಯಸ್ಸಿನಲ್ಲಿ 13ನೇ ವಯಸ್ಸಿನಲ್ಲಿ. ಒಬ್ಬರು ನಾಲ್ಕನೆಯ ಪರ್ಯಾಯ ಮುಗಿಸಿದರೆ ಇನ್ನೊಬ್ಬರು ನಾಲ್ಕನೆಯ ಪರ್ಯಾಯ ಪೂಜೆಗೆ ಅಣಿಯಾಗುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.