Udupi ಪರ್ಯಾಯ ಮಹೋತ್ಸವಕ್ಕೆ ಕಲಾತಂಡಗಳ ಮೆರುಗು
30ಕ್ಕೂ ಅಧಿಕ ಟ್ಯಾಬ್ಲೋ, ವಿವಿಧೆಡೆ ಸಾಂಸ್ಕೃತಿಕ ವೈಭವ
Team Udayavani, Jan 16, 2024, 11:38 PM IST
ಉಡುಪಿ: ಪರ್ಯಾಯೋತ್ಸವದ ಸಂಭ್ರಮ ಹೆಚ್ಚಿಸಲು ನಗರದ ವಿವಿಧೆಡೆ ಸಾಂಸ್ಕೃತಿಕ ಕಲಾತಂಡಗಳು ಸಿದ್ಧತೆ ನಡೆಸುತ್ತಿವೆ. ರಥಬೀದಿ, ಹೊರೆಕಾಣಿಕೆ ಸ್ಥಳದ ಗದ್ದೆ, ಪೇಜಾವರ ಮಠದ ಮುಂಭಾಗ, ಶ್ರೀಕೃಷ್ಣ ಮಠದ ಎದುರು, ಕಿನ್ನಿಮೂಲ್ಕಿ, ಸರ್ವಿಸ್ ಬಸ್ ತಂಗುದಾಣ, ಹಳೆ ಕೆಎಸ್ಸಾರ್ಟಿಸಿ ಬಸ್ ತಂಗುದಾಣ, ತ್ರಿವೇಣಿ ಸರ್ಕಲ್, ತ್ರಿಶಾ ಸರ್ಜಿಕಲ್ ಬಳಿ, ಗಿರಿಜಾ ಸರ್ಜಿಕಲ್ ಬಳಿ, ಪುರಭವನದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ನಾಸಿಕ್ ಡೋಲು
ಮೆರವಣಿಗೆಯಲ್ಲಿ ಸ್ಥಳೀಯ ಕಲಾತಂಡಗಳಷ್ಟೇ ಅಲ್ಲದೆ ಪುಣೆಯ ನಾಸಿಕ್ ಡೋಲು, 60-70 ಮಂದಿಯ ತಾಸೆ, ಪಂಢರಾಪುರದ ಭಜನ ತಂಡಗಳು ಭಾಗವಹಿಸಲಿವೆ. ಕೃಷ್ಣನ ಅವತಾರಕ್ಕೆ ಸಂಬಂಧಿಸಿದ 7ರಿಂದ 8 ಟ್ಯಾಬ್ಲೋಗಳು, ಗೀತೆಯ ನಾಣ್ಣುಡಿ ಇರುವ 3ರಿಂದ 4 ಟ್ಯಾಬ್ಲೋಗಳು, ವಿವಿಧ ಸರಕಾರಿ ಇಲಾಖೆಗಳ 4 ಟ್ಯಾಬ್ಲೋಗಳು ಇರಲಿವೆ.
300ಕ್ಕೂ ಅಧಿಕ ಚೆಂಡೆ ಬಳಗ
ಕೇರಳ-ಭಾರತೀಯ ಶೈಲಿಯ ವಿವಿಧ ಮಾದರಿಯ ಚೆಂಡೆಗಳ ಸಹಿತ ಒಟ್ಟು 300ಕ್ಕೂ ಅಧಿಕ ಚೆಂಡೆ ಬಳಗ ಮೆರವಣಿಗೆಯಲ್ಲಿ ಗಮನ ಸೆಳೆಯಲಿವೆ. ಕುಣಿತ ಭಜನೆ, ಜನಪದ ಕಲೆ, ಡೊಳ್ಳು ಕುಣಿತ, ಸೋಮನ ಕುಣಿತ, ವೀರಗಾಸೆ, 50 ಮಂದಿಯ ತಂಡದ ಕೊರಗರ ಡೋಲು ಮೆರವಣಿಗೆಯಲ್ಲಿರಲಿವೆ.
ಮಕ್ಕಳಿಂದ ಪಾರಾಯಣ
ಭಗವದ್ಗೀತೆಯ 18 ಅಧ್ಯಾಯದ ಫಲಕದೊಂದಿಗೆ ಕಿನ್ನಿಮೂಲ್ಕಿಯ ಸಂಸ್ಥೆಯೊಂದರ 40ರಿಂದ 50 ಮಂದಿ ಮಕ್ಕಳು ಪಾರಾಯಣ ಮಾಡಲಿದ್ದಾರೆ. 108 ಕೃಷ್ಣಭಕ್ತರಿಂದ ಭಜನೆ, ವೈವಿಧ್ಯಮಯ ಕೋಲಾಟ, ಕುಣಿತ ಭಜನೆ, ಬಳ್ಳಾರಿಯ ಕೋಲಾಟ, ಜನಪದ ಕಲಾ ಸಂಸ್ಕೃತಿ ಬಿಂಬಿಸುವ ಕಂಬಳದ ಜೀವಂತ ಕೋಣ, ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ಟ್ಯಾಬ್ಲೋ, ಪರಶುರಾಮನ ಬೃಹತ್ ವಿಗ್ರಹ, ಹುಲಿಯ ಟ್ಯಾಬ್ಲೋ, ಚಿಲಿಪಿಲಿ ಗೊಂಬೆಗಳು, ಜನಪದ ಕಲೆಗಳು, ದರ್ಪಣ ಸಂಸ್ಥೆಯ 35 ಮಂದಿ ಮಹಿಳೆಯರ ಹುಲಿವೇಷ, ಕುರ್ಕಾಲಿನ 30 ಮಂದಿಯ ಹುಲಿವೇಷ, ಕೇರಳ ಶೈಲಿಯ ಧರ್ಮಾರ್ಥವಾಗಿ 70 ಚೆಂಡೆಗಳು, 70 ಮಂದಿಯ ಚೆಂಡೆ ಹಾಗೂ ವಯೋಲಿನ್ ಮೆರವಣಿಗೆಯಲ್ಲಿರಲಿದೆ.
ರಾಮಮಂದಿರದ ಟ್ಯಾಬ್ಲೋ
ಮಧ್ವಗಾನ ಯಾನ, ಜೋಗಿ ಸಮಾಜದ ಕುಣಿತ ಭಜನೆ, ವಿಷ್ಣುಸಹಸ್ರನಾಮ ಶ್ಲೋಕಗಳು, ಕೋಟಿಗೀತ ಯಜ್ಞದ ಭೂಮಂಡಲ ಮಾಡಿ ಡಿಜಿಟಲ್ ಮೂಲಕ ತೋರಿಸುವ ವ್ಯವಸ್ಥೆ, ವಾದ್ಯ, ಬ್ಯಾಂಡ್‌ಸೆಟ್‌ಗಳು, ಸ್ಯಾಕೊÕಫೋನ್, ಕೇರಳ ಶೈಲಿಯ ಪಂಚವಾದ್ಯ, ಅಯೋಧ್ಯೆ ರಾಮಮಂದಿರದ ಟ್ಯಾಬ್ಲೋ, ಪೌರಾಣಿಕ ಸನ್ನಿವೇಶದ ಟ್ಯಾಬ್ಲೋ, ಕೆಮ್ಮುಂಡೇಲು ಹಿ.ಪ್ರಾ. ಶಾಲೆಯ “ಗರುಡನಲ್ಲಿ ಕೃಷ್ಣ’ ಕಲ್ಪನೆಯ ಮಕ್ಕಳಿಂದಲೇ ರಚಿಸಲ್ಪಟ್ಟ ಮೋಡದ ಮೇಲೆ ಕೃಷ್ಣ ಹೋಗುವಂತಹ ಟ್ಯಾಬ್ಲೋಗಳು ಜನರನ್ನು ರಂಜಿಸಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.