![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Jan 19, 2024, 9:42 AM IST
ಉಡುಪಿ: ಪುತ್ತಿಗೆ ಶ್ರೀಪಾದರ ಚತುರ್ಥ ಪರ್ಯಾಯಕ್ಕೆ ಆಗಮಿಸಿದ್ದ ಹಲವು ವಿದೇಶಿ ಗಣ್ಯರು ಹಿಂದೂ ಧಾರ್ಮಿಕ ಆಚರಣೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಪಾನಿನ ರಿಶೋ ಕೋಸಿ ಕ್ಯಾಯ ಅಧ್ಯಕ್ಷೆ ರೆ| ಕೋಶೋ ನಿವಾನೋ ಮಾತನಾಡಿ, ಹಿಂದೂ ಧಾರ್ಮಿಕ ಮೌಲ್ಯವು ಆ ಧರ್ಮಕ್ಕಷ್ಟೇ ಸೀಮಿತವಾಗಿರದೆ ಇಡೀ ಮಾನವ ಕುಲಕ್ಕೆ ಅವಶ್ಯವಾಗಿದೆ. ಪರ್ಯಾಯ ಉತ್ಸವದ ಧಾರ್ಮಿಕ ಮೌಲ್ಯವು ಭಕ್ತರ ಭಕ್ತಿಯಿಂದ ತಿಳಿಯುತ್ತದೆ. ಪುತ್ತಿಗೆ ಶ್ರೀಪಾದರು ಜಾಗತಿಕವಾಗಿ ಧಾರ್ಮಿಕ ಶಾಂತಿ ಸ್ಥಾಪನೆಯ ವಿಚಾರದಲ್ಲಿ ಬಹುದೊಡ್ಡ ಕಾರ್ಯ ಮಾಡುತ್ತಿದ್ದಾರೆ ಎಂದರು.
ಕೆನಡಾದ ಶಾಸಕ ಹಾಗೂ ಮಾಜಿ ಆರೋಗ್ಯ ಸಚಿವ ಬೆನ್ವಾ ಬೋರ್ಕಿ ಮಾತನಾಡಿ, ನಾನೊಬ್ಬ ಕ್ಯಾಥೋಲಿಕ್ ಕ್ರಿಶ್ಚಿಯನ್ ಆಗಿದ್ದು ಹಿಂದೂ ಧರ್ಮವನ್ನು ಬಹುವಾಗಿ ನಂಬುವೆ. ಈ ಹಿಂದೆ ಕಾಶಿ ವಿಶ್ವನಾಥ ದೇವಸ್ಥಾನದ ದರ್ಶನ ಪಡೆದಿದ್ದೆ. ಇದೀಗ ಉಡುಪಿಗೆ ಬಂದಿದ್ದೇನೆ. ಪರ್ಯಾಯ ಉತ್ಸವದ ಧಾರ್ಮಿಕ ಆಚರಣೆಗಳನ್ನು ಮತ್ತು ಸಾಂಸ್ಕೃತಿಕ ವೈಭವ ಕಂಡು ತುಂಬ ಖುಷಿ ಪಟ್ಟೆ. ಶ್ರೀಪಾದರು ಜಾಗತಿಕ ಧಾರ್ಮಿಕ ಶಾಂತಿ ಪ್ರತಿಪಾದನೆಯ ಜೀವಂತ ನಿದರ್ಶನ. ಅವರ ಕಾರ್ಯಗಳು ಜೀವನದಲ್ಲಿ ತುಂಬ ಪ್ರೇರಣೆ ನೀಡಿದೆ ಎಂದು ಹೇಳಿದರು.
You seem to have an Ad Blocker on.
To continue reading, please turn it off or whitelist Udayavani.