ಏರುತ್ತಿರುವ ಅಂಕಿಸಂಖ್ಯೆಯಲ್ಲಿ ಆತಂಕದ ಛಾಯೆ; ಟೆಸ್ಟ್ಗಳ ಜತೆಗೆ ಏರುವುದೇ ಸೋಂಕಿತರ ಸಂಖ್ಯೆ!
ಕೋವಿಡ್ ಹಾವಳಿ ಅಧಿಕವಾಗುತ್ತಾ ಸಾಗಿದ್ದರೂ, ಟೆಸ್ಟ್ಗಳ ಹೆಚ್ಚಳದಿಂದ ಇನ್ಮುಂದೆ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಾಣಿಸಬಹುದೆಂಬ ಅಂದಾಜಿದೆ. ಇದರ ನಡುವೆಯೇ ದೇಶದಲ್ಲಿ ಒಟ್ಟು ಪರೀಕ್ಷೆಗಳ ಸಂಖ್ಯೆ 64 ಲಕ್ಷ ದಾಟಿದೆ. ಮುಂದಿನ ದಿನಗಳಲ್ಲಿ ದೆಹಲಿ ಸೇರಿದಂತೆ ದೇಶಾದ್ಯಂತ ಟೆಸ್ಟಿಂಗ್ ಪ್ರಮಾಣ ಅಧಿಕವಾಗಲಿರುವುದರಿಂದ ಹೆಚ್ಚಿನ ಸೋಂಕಿತರೂ ಪತ್ತೆಯಾಗಬಹುದು ಎಂದು ಅಂದಾಜಿಸಲಾಗಿದೆ.