ಹೆಚ್ಚಾದ ಕೋವಿಡ್ 19 ವೇಗಕ್ಕೆ ಬ್ರೇಕ್ ಹಾಕಬಲ್ಲದೇ ರಾಜ್ಯ?
ಕರ್ನಾಟಕದಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆಯಲ್ಲಿ ಹಠಾತ್ತನೆ ಏರಿಕೆ ಕಂಡುಬಂದಿದ್ದು, ಈಗ 9 ಸಾವಿರ ದಾಟಿದೆ. ಆದಾಗ್ಯೂ ರಾಜ್ಯದಲ್ಲಿ ಚೇತರಿಸಿಕೊಂಡವರ ಪ್ರಮಾಣ 61 ಪ್ರತಿಶತ ದಾಟಿದೆಯಾದರೂ ಭವಿಷ್ಯದ ಬಗ್ಗೆ ಆತಂಕವಂತೂ ಹೆಚ್ಚಾಗುತ್ತಿದೆ. ಸೋಮವಾರದ ವೇಳೆಗೆ ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 4 ಲಕ್ಷ 27 ಸಾವಿರ ದಾಟಿದ್ದರೆ, ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ಪರಿಸ್ಥಿತಿ ನಿಯಂತ್ರಣ ತಪ್ಪಿದೆ. ರೋಗ ಪ್ರಸರಣ ತಡೆಯುವಲ್ಲಿ ಈಗ ಸರಕಾರವಷ್ಟೇ ಅಲ್ಲದೇ, ಜನಸಾಮಾನ್ಯರ ಜವಾಬ್ದಾರಿಯೂ ಅಧಿಕವಾಗಿದ್ದು, ಜನರು ಸಾಮಾಜಿಕ ಅಂತರ ಹಾಗೂ ಶುಚಿತ್ವದ ಬಗ್ಗೆ ನಿಷ್ಕಾಳಜಿ ಮೆರೆಯುತ್ತಾ ಹೋದರೆ, ಪರಿಸ್ಥಿತಿ ವಿಷಮಿಸುವ ಸಾಧ್ಯತೆ ಇಲ್ಲದಿಲ್ಲ…