“ಫಿಫಾ ವಿಶ್ವಕಪ್ ಫುಟ್ಬಾಲ್ 2018’ಕ್ಕೆ ವರ್ಣರಂಜಿತ ಚಾಲನೆ: ಬ್ಯೂಟಿಫುಲ್ ಫೋಟೋ ಗ್ಯಾಲರಿ
ಮಾಸ್ಕೋದಲ್ಲಿ ನಡೆಯುತ್ತಿರುವ ವಿಶ್ವಕಪ್ ಫುಟ್ಬಾಲ್ ಕೂಟವನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಘೋಷಿಸುವ ಮೂಲಕ ಸರಳ ಚಾಲನೆ ಕೊಟ್ಟರು. ಕೇವಲ 30 ನಿಮಿಷಗಳಲ್ಲಿ ಎಲ್ಲ ಕಾರ್ಯಕ್ರಮಗಳು ಮುಕ್ತಾಯಗೊಂಡವು. ಬ್ರಿಟನ್ನ ಪಾಪ್ ಗಾಯಕ ರಾಬಿ ವಿಲಿಯಮ್ಸ್ ಅದ್ಭುತ ಗಾಯನ ಮೂಲಕ ಕ್ರೀಡಾಂಗಣದಲ್ಲಿ ಮಿಂಚು ಹರಿಸಿದರು. 80 ಸಾವಿರಕ್ಕೂ ಅಧಿಕ ಮಂದಿ ಇವರ ಹಾಡಿಗೆ ತಲೆದೂಗಿದರು. ಇದಾದ ಬಳಿಕ ರಷ್ಯಾದ ಒಪೆರಾ ಗಾಯಕಿ ಏಡ್ ಗರಿಪುಲಿನಾ ಸುಂದರ ಉಡುಪಿನೊಂದಿಗೆ ಬಂದು ಹಾಡು ಹಾಡಿದರು. ಸ್ಟಾರ್ಗಳ ಬಳಿಕ 700ಕ್ಕೂ ಹೆಚ್ಚು ಸ್ಥಳೀಯ ನೃತ್ಯಗಾರರು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಜತೆಗೆ ಸಿಡಿಮದ್ದಿನ ವರ್ಣರಂಜಿತ ಚಾಲನೆ ದೊರಕಿತು. ಎಲ್ಲ ದೇಶದ ಆಟಗಾರರು ಉದ್ಘಾಟನೆ ವೇಳೆ ಕಾಣಿಸಿಕೊಂಡರು. ಬಳಿಕ ಜಿಮ್ನಾಸ್ಟಿಕ್, ಟ್ರ್ಯಾಂಫೋಲಿನ್ ಪಟುಗಳು ಕ್ರೀಡಾಂಗಣಕ್ಕೆ ಆಗಮಿಸಿ ನೆರೆದಿದ್ದ ಅನೇಕರು ರಂಜಿಸಿದರು. ಅಲ್ಲದೇ ಈ ಸರಳ ಉದ್ಘಾಟನೆಯಲ್ಲಿ ಮಾಸ್ಕೋದ ಸಂಸ್ಕೃತಿ ಬಿಂಬಿಸುವಂತಹ ನೃತ್ಯ ಪ್ರದರ್ಶನ ನೀಡಲಾಯಿತು. ಹೀಗಾಗಿ ಇಡೀ ಮಾಸ್ಕೋ ಮಾಯಾನಗರಿಯಂತೆ ಕಂಡು ಬಂತು. ಕಾರ್ಯಕ್ರಮದ ಬ್ಯೂಟಿಫುಲ್ ಫೋಟೋ ಗ್ಯಾಲರಿ ನಿಮಗಾಗಿ…. ಚಿತ್ರಗಳು: ಏಜೆನ್ಸೀಸ್.