ಕೇವಲ 100 ಗಂಟೆಗಳಲ್ಲಿ ಜಗತ್ತಿನಾದ್ಯಂತ 1ಮಿಲಿಯನ್ ಜನರಿಗೆ ಸೋಂಕು: ಕಳವಳ ವ್ಯಕ್ತಪಡಿಸಿದ WHO
ನ್ಯೂಯಾರ್ಕ್: ಜಾಗತಿಕವಾಗಿ ಕೋವಿಡ್-19 ವೈರಸ್ ಕಬಂಧ ಬಾಹುವವನ್ನು ಚಾಚುತ್ತಿದ್ದು ಜುಲೈ 17 ಶುಕ್ರವಾರದ ವೇಳೆಗೆ 14 ಮಲಿಯನ್ ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಾತ್ರವಲ್ಲದೆ ಕಳೆದ 100 ಗಂಟೆಗಳಲ್ಲಿ 1 ಮಿಲಿಯನ್ (10 ಲಕ್ಷ) ಜನರು ವೈರಾಣುವಿಗೆ ಭಾದಿತರಾಗಿದ್ದು ಇದೊಂದು ದಾಖಲೆಯಾಗಿದೆ.
ಚೀನಾದ ವುಹಾನ್ ನಲ್ಲಿ ಮೊದಲ ಕೋವಿಡ್ ಪ್ರಕರಣ ಕಂಡುಬಂದಾಗಿನಿಂದ 1 ಮಿಲಿಯನ್ ಜನರಿಗೆ ಸೊಂಕು ತಗುಲಲು ಮೂರು ತಿಂಗಳುಗಳು ಬೇಕಾದವು. ಆದರೇ 13 ಮಿಲಿಯನ್ ನಿಂದ 14 ಮಿಲಿಯನ್ ಗೆ ಕೇವಲ 4 ದಿನಗಳಲ್ಲಿ ತಲುಪುವ ಮೂಲಕ ಸೊಂಕು ತನ್ನ ವ್ಯಾಪ್ತಿಯನ್ನು ಬಹುವಾಗಿ ವಿಸ್ತರಿಸಿಕೊಳ್ಳುತ್ತಿದೆ.
ಅಮೆರಿಕಾದಲ್ಲಿ ಇಂದಿಗೂ ಕೂಡ ಸೋಂಕಿನ ವ್ಯಾಪ್ತಿ ಬೃಹದಾಕರವನ್ನು ತಳೆದಿದ್ದು ಪ್ರತಿನಿತ್ಯ 60 ಸಾವಿರ ಹೊಸ ಪ್ರಕರಣಗಳು ಕಂಡುಬರುತ್ತಿದೆ. ಹೀಗಾಗಿ ಇಲ್ಲಿ ಒಟ್ಟು ಸೊಂಕಿತರ ಸಂಖ್ಯೆ 3.6 ಮಿಲಿಯನ್ ಗೆ ತಲುಪಿದೆ. ಗುರುವಾರ ಒಂದೇ ದಿನ ಇಲ್ಲಿ 77 ಸಾವಿರ ಜನರಿಗೆ ವೈರಾಣು ಭಾಧಿಸಿದೆ.
ಅದಾಗ್ಯೂ ಅನೇಕ ರಾಷ್ಟ್ರಗಳಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಸಾಂಕ್ರಮಿಕ ರೋಗ ನಿಯಂತ್ರಿಸುವಲ್ಲಿ ಕೆಲವು ದೇಶಗಳು ಅಲ್ಪ ಯಶಸ್ಸನ್ನು ಗಳಿಸಿವೆ. ಇನ್ನು ಹಲವಡೆ ಸೋಂಕಿನ ಎರಡನೇ ಅಲೆ ಅರಮಭವಾಗಿದೆ.
ಜಗತ್ತಿನಲ್ಲಿ ವಾರ್ಷಿಕವಾಗಿ ವಿವಿಧ ರೋಗರುಜಿನಗಳಿಗೆ ಹಲವರು ತುತ್ತಾಗುತ್ತಾರೆ. ಆದರೇ ಇಲ್ಲಿ ದಾಖಲಾಗುವ ಪ್ರಮಾಣಕ್ಕಿಂತ ಮೂರು ಪಟ್ಟು ಅಧಿಕ ಜನರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ತೆ ತಿಳಿಸಿದೆ.
ಈವರೆಗೆ ಕೋವಿಡ್ ಮಾರಕ ಸೋಂಕಿಗೆ 5.99 ಲಕ್ಷಕ್ಕಿಂತ ಹೆಚ್ಚು ಮಂದಿ ಬಲಿಯಾಗಿದ್ದು, ಅಮೆರಿಕಾದಲ್ಲೇ ಇದರ ಪ್ರಮಾಣ ಹೆಚ್ಚಿದೆ. ಬ್ರೆಜಿಲ್, ಭಾರತ, ರಷ್ಯಾ, ಪೆರು, ದಕ್ಷಿಣ ಆಫ್ರಿಕಾ, ಮೆಕ್ಷಿಕೋ, ಚೀಲಿ, ಸ್ಪೇನ್ ಮುಂತಾದ ರಾಷ್ಟ್ರಗಳಲ್ಲಿ ವೈರಾಣು ವೇಗವನ್ನು ಪಡೆದುಕೊಳ್ಳುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಹೊಸ ಫೋಟೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Tulu Movie: ಎರಡು ಭಾಗದಲ್ಲಿ ಬರುತ್ತಿದೆ ತುಳು ಸಿನಿಮಾ; ಹೊಸಚಿತ್ರಕ್ಕೆ ಮುಹೂರ್ತ
Kollywood: ಧನುಷ್ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್