ಎಲ್ಲ ದೇಶಗಳಲ್ಲೂ ಕೋವಿಡ್ ಸೋಂಕು ಹೆಚ್ಚಳ: ಆತಂಕ
ಎಲ್ಲ ದೇಶಗಳಲ್ಲೂ ಕೋವಿಡ್ ಸೋಂಕು ಹೆಚ್ಚುತ್ತಿದ್ದು ಅದರಲ್ಲೂ ವಿಶ್ವದ ದಕ್ಷಿಣ ಭಾಗದಲ್ಲಿ ಏರಿಕೆಯಾಗುತ್ತಿದ್ದು ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಜತೆಗೆ ಜಗತ್ತಿಗೇ ಬಾಧಿಸಿದ ಈ ಸಮಸ್ಯೆಯನ್ನು ಪರಿಹರಿಸುವತ್ತ ಮುಂದಿನ 100 ವರ್ಷಗಳವರೆಗೆ ಎಲ್ಲ ರಾಷ್ಟ್ರಗಳೂ ಕೈ ಜೋಡಿಸಿ ನಿಲ್ಲಬೇಕಿದೆ ಎಂದು ಹೇಳಿದೆ. ಹೆಚ್ಚಿನ ಎಲ್ಲ ದೇಶಗಳು ಈಗ ಮೊದಲನೇ ಹಂತದ ಕೋವಿಡ್ ಹಾವಳಿಯನ್ನು ಎದುರಿಸಿವೆ.