![](https://www.udayavani.com/wp-content/uploads/2024/12/Wedding-1-1-394x315.jpg)
![](https://www.udayavani.com/wp-content/uploads/2024/12/Wedding-1-1-394x315.jpg)
ಎ.ಪಿ ಅರ್ಜುನ್ ನಿರ್ದೇಶನದ “ಕಿಸ್’ ಚಿತ್ರ ಶತಕ ಬಾರಿಸಿದ ಖುಷಿಯಲ್ಲಿದೆ. ಹೌದು, ನವ ನಟ ವಿರಾಟ್, ಶ್ರೀಲೀಲಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ ರೊಮ್ಯಾಂಟಿಕ್ ಕಥಾಹಂದರದ “ಕಿಸ್’ ಚಿತ್ರ ಯಶಸ್ವಿಯಾಗಿ 100 ದಿನಗಳ ಪ್ರದರ್ಶನವನ್ನು ಕಂಡಿದೆ. ಇದೇ ಸಂಭ್ರಮವನ್ನು ಚಿತ್ರದ ಕಲಾವಿದರು, ತಂತ್ರಜ್ಞರು ಮತ್ತು ಚಿತ್ರರಂಗದ ಜೊತೆಗೆ ಹಂಚಿಕೊಳ್ಳಲು ಇತ್ತೀಚೆಗೆ “ಕಿಸ್’ ಚಿತ್ರ ಅದ್ಧೂರಿಯಾಗಿ “ಕಿಸ್’ ಶತದಿನೋತ್ಸವ ಸಮಾರಂಭವನ್ನು ಹಮ್ಮಿಕೊಂಡಿತ್ತು. ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ, ಚಿತ್ರರಂಗದ ಹಲವು ತಾರೆಯರು, ನಿರ್ದೇಶಕರು, ನಿರ್ಮಾಪಕರು, ಗಣ್ಯರು ಹಾಜರಿದ್ದರು. ಈ ವೇಳೆ ಚಿತ್ರದ ಯಶಸ್ಸಿಗೆ ಕಾರಣರಾದವರಿಗೆ ಚಿತ್ರತಂಡದ ಪರವಾಗಿ ನೆನಪಿನ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಎ.ಪಿ. ಅರ್ಜುನ್ ಅವರ ಹೊಸ ಚಿತ್ರ ಅದ್ದೂರಿ ಲವರ್ ಶೀರ್ಷಿಕೆ ಅನಾವರಣಗೊಳಿಸಲಾಯಿತು.
You seem to have an Ad Blocker on.
To continue reading, please turn it off or whitelist Udayavani.