ಜಗತ್ತಿನಾದ್ಯಂತ Lockdown: ಜನ ಜೀವನದ Special Gallery
ಲಾಕ್ಡೌನ್ ದಿನಗಳಲ್ಲಿ ನವಿ ಮುಂಬೈಯ ಎಪಿಎಂಸಿ ಮಾರುಕಟ್ಟೆಯ ವಿಹಂಗಮ ನೋಟ.
ಮುಂಬೈ: ಕೂಪರ್ ಆಸ್ಪತ್ರೆಯ ಸಿಬಂದಿಯೋರ್ವರಿಗೆ ರೋಗಿಯೊಬ್ಬರು ಹಲ್ಲೆ ನಡೆಸಿರುವುದನ್ನು ಖಂಡಿಸಿ ಆಸ್ಪತ್ರೆಯ ಮುಂಭಾಗದಲ್ಲಿ ಸಿಬಂದಿ ಪ್ರತಿಭಟನೆ ನಡೆಸಿದರು.
ಹೊಸದಿಲ್ಲಿ: ರಾಷ್ಟ್ರವ್ಯಾಪಿ ಲಾಕ್ಡೌನ್ ಸಂದರ್ಭದಲ್ಲಿ ಜುಮಾ ಮಸೀದಿ ಪರಿಸರದ ಒಂದು ನೋಟ.
ಜೈಪುರ: ಸುಭಾಷ್ ಚೌಕ್ ಪ್ರದೇಶದ ಮಸೀದಿ ಮೇಲೆ ಸೋಂಕು ನಿವಾರಕ ಔಷಧ ಸಿಂಪಡಿಸಲಾಯಿತು.
ಜಮ್ಮು ಕಾಶ್ಮೀರ: ಸ್ವಯಂ ಸೇವಕರು ನಾಗರಿಕ ಸೇವಕರಿಗೆ ಫೇಸ್ ಮಾಸ್ಕ್ ಮತ್ತು ವೈಯಕ್ತಿಕ ರಕ್ಷಣಾ ಸಾಧನಗಳನ್ನು ವಿತರಿಸುತ್ತಿರುವುದು.
ಮಥುರಾ: ಜನಧನ್ ಖಾತೆಯಿಂದ ಹಣವನ್ನು ಹಿಂಪಡೆಯಲು ಸಾಮಾಜಿಕ ಅಂತರವನ್ನು ಪಾಲಿಸಿ ಸಾಲಿನಲ್ಲಿ ನಿಂತಿರುವ ಮಹಿಳೆಯರು.
ಜಬಲ್ಪುರ: ರಾಷ್ಟ್ರವ್ಯಾಪಿ ಲಾಕ್ಡೌನ್ ಸಂದರ್ಭದಲ್ಲಿ ಎಫ್ಸಿಐ ಗೋಡೌನ್ನಲ್ಲಿ ಕಾರ್ಮಿಕರೊಬ್ಬರು ಗೋಣಿಚೀಲಗಳ ಮೇಲೆ ಮಲಗಿರುವ ದೃಶ್ಯ.
ಮೊರಾದಾಬಾದ್: ಕೋವಿಡ್ 19 ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಕಲ್ಲು ತೂರಾಟ ನಡೆಸಿದ ಮಹಿಳೆಯರನ್ನು ಪೊಲೀಸರು ಕರೆದೊಯ್ಯುತ್ತಿರುವುದು.
ಶ್ರೀನಗರ: ರೆಡ್ ಅಲರ್ಟ್ ಘೋಷಣೆಯ ಬಳಿಕ ಶ್ರೀನಗರದ ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಮುನ್ಸಿಪಾಲಿಟಿ ಕಾರ್ಪೊರೇಷನ್ ತಂಡ ಸೋಂಕು ನಿವಾರಕವನ್ನು ಸಿಂಪಡಿಸುತ್ತಿರುವ ದೃಶ್ಯ.
ಸೋಲಾಪುರ: ಲಾಕ್ಡೌನ್ ಸಂದರ್ಭ ಪೂರ್ಣ ದೇಹದ ನೈರ್ಮಲ್ಯ ಸುರಂಗದಲ್ಲಿ ಪೊಲೀಸ್ ಸಿಬಂದಿ ಬೈಕ್ನಲ್ಲಿ ಹಾದು ಹೋಗುತ್ತಿರುವುದು.
ಕೋಲ್ಕತ: ಸಾಮಾಜಿಕ ಅಂತರವನ್ನು ಕಾಪಾಡಲು ತಾತ್ಕಾಲಿಕವಾಗಿ ಸ್ಥಾಪಿಸಲಾದ ಮಾರುಕಟ್ಟೆಯಲ್ಲಿ ತರಕಾರಿ ಯನ್ನು ಖರೀದಿಸುತ್ತಿರುವ ದೃಶ್ಯ.
ಮೊರದಾಬಾದ್: ಕಲ್ಲು ತೂರಾಟ ನಡೆಸಿದ ಇಬ್ಬರನ್ನು ಪೊಲೀಸರು ಬಂಧಿಸಿದರು.
ಜಮ್ಮು: ತಮ್ಮ ಊರಿಗೆ ಹೊರಗಿನವರು ಬರದಂತೆ ಮಹಿಳೆಯರು ರಸ್ತೆಗೆ ಕಲ್ಲು ಅಡ್ಡ ಇಟ್ಟರು.
ಲಾಸ್ವೆಗಾಸ್: ಕ್ಯಾಸಿನೋಗಳಿಲ್ಲದೆ ಭಣಗುಟ್ಟುತ್ತಿರುವ ನಗರ.
ಭಠಿಂಡ: ಇಲ್ಲಿನ ಧಾನ್ಯಗಳ ಮಾರುಕಟ್ಟೆಯಲ್ಲಿ ಕಾರ್ಮಿಕನೊಬ್ಬ ಗೋಧಿ ಸ್ವಚ್ಛಗೊಳಿಸುತ್ತಿರುವುದು.
ಹಂಬರ್ಗ್: ಲಾಕ್ಡೌನ್ನಿಂದಾಗಿ ಸ್ವಚ್ಛಗೊಂಡಿರುವ ಹಂಸಗಳ ಸರೋವರ.
ಮೊರದಾಬಾದ್: ಪ್ರತಿಭಟನೆಗೆ ಸಿಲುಕಿದ ಆರೋಗ್ಯ ಕಾರ್ಯಕರ್ತರಿದ್ದ ವಾಹನ.
ವುಹಾನ್: ಕೋವಿಡ್ ವಿರುದ್ಧ ಹೋರಾಡಲು ಹೊರಗಿನಿಂದ ಬಂದ ಆರೋಗ್ಯ ಕಾರ್ಯಕರ್ತರನ್ನು ಭಾವಪೂರ್ಣವಾಗಿ ಬೀಳ್ಕೊಡಲಾಯಿತು.
ಮುಂಬೈ: ಧಾರಾವಿಯಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡನೆ ಕಾರ್ಯ.
ಮಥುರಾ: ವಾಹನ ಸಂಚಾರ ನಿರ್ಬಂಧಿಸಿದ ಕಾರಣ ಇಲ್ಲಿನ ಮೇವು ಮಾರುಕಟ್ಟೆಗೆ ಕುದುರೆಗಾಡಿಯಲ್ಲಿ ಮೇವನ್ನು ತರಲಾಯಿತು.
ನ್ಯೂಯಾರ್ಕ್: ಕೋವಿಡ್ ವಿರುದ್ಧ ಹೋರಾಡುತ್ತಿರ ಬ್ರೂಕ್ಲಿನ್ ಆಸ್ಪತ್ರೆಯ ಸಿಬಂದಿಯನ್ನು ಅಗ್ನಿಶಾಮಕ ದಳದವರು ಚಪ್ಪಾಳೆ ತಟ್ಟಿ ಅಭಿನಂದಿಸಿದರು.
ಬ್ಯಾಂಕಾಕ್: ಧಾರ್ಮಿಕ ತರಗತಿಯಲ್ಲಿ ಫೇಶ್ಶೀಲ್ಡ್, ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಪಾಲಿಸಿದ ಬೌದ್ಧ ಸನ್ಯಾಸಿಗಳು.
ಅಹಮದಾಬಾದ್: ಕರ್ತವ್ಯ ನಿರತ ಪೊಲೀಸ್ ಸಿಬಂದಿಯ ಗಂಟಲ ದ್ರವ ಮಾದರಿ ಸಂಗ್ರಹಿಸುತ್ತಿರುವ ಆರೋಗ್ಯ ಕಾರ್ಯಕರ್ತರು.
ಭುವನೇಶ್ವರ: ಮೈಮ್ ಕಲಾವಿದ ರೊಬ್ಬರು ಕೋವಿಡ್ ಜಾಗೃತಿ ನಾಟಕ ಪ್ರದರ್ಶಿಸಿದರು.
ಸಿಯೋಲ್: ಕೋವಿಡ್ ವೇಳೆ ನಡೆದ ಚುನಾವಣೆಯ ಮತ ಪೆಟ್ಟಿಗೆಗಳನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು.
ಹೊಸದಿಲ್ಲಿ: ನಗರ ಪಾಲಿಕೆ ಸಿಬಂದಿ ಮಂದಿರ್ ಮಾರ್ಗ್ನಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಿದರು.
ಇಂದು ಇಡೀ ಜಗತ್ತೇ ಕೋವಿಡ್ 19 ವೈರಸ್ ಕಪಿಮುಷ್ಠಿಯಲ್ಲಿ ಸಿಲುಕಿದೆ, ಹೆಚ್ಚಿನ ದೇಶಗಳು Lockdownಗೆ ಕರೆ ನೀಡಿದೆ