ಲಾಕ್ಡೌನ್ ನಿರ್ಬಂಧಗಳ ಸಡಿಲಿಕೆ ; ಹೆಚ್ಚುತ್ತಿದೆ ಸೋಂಕಿತರ ಸಂಖ್ಯೆ !
ದೇಶವೀಗ ಬಹುದೊಡ್ಡ ಸವಾಲನ್ನು ಎದುರಿಸುತ್ತಿದೆ. ಲಾಕ್ಡೌನ್ ನಿರ್ಬಂಧಗಳ ಸಡಿಲಿಕೆಯ ನಂತರದಿಂದ ಸೋಂಕಿತರ ಸಂಖ್ಯೆ ಅಪಾರ ಪ್ರಮಾಣದಲ್ಲಿ ವೇಗವಾಗಿ ವೃದ್ಧಿಸುತ್ತಿದ್ದು, ಈಗ ಎರಡು ಲಕ್ಷ ಸೋಂಕಿತರು ಪತ್ತೆಯಾಗಿದ್ದರೆ, ದೇಶವು ಜಾಗತಿಕ ಹತ್ತು ಹಾಟ್ಸ್ಪಾಟ್ಗಳಲ್ಲಿ ಏಳನೇ ಸ್ಥಾನಕ್ಕೆ ಏರಿದೆ. ಮಾರ್ಚ್ ತಿಂಗಳಿಂದ ದೇಶಾದ್ಯಂತ ಆರೋಗ್ಯ ಕಾರ್ಯಕರ್ತರು, ಪೊಲೀಸರು, ಆರೋಗ್ಯ ಇಲಾಖೆಗಳು, ಆಡಳಿತಗಳ ನಿರಂತರ ಪರಿಶ್ರಮ ಹಾಗೂ ಕಟ್ಟುನಿಟ್ಟಾದ ಲಾಕ್ಡೌನ್ನ ಹೊರತಾಗಿಯೂ ಸೋಂಕಿತರ ಸಂಖ್ಯೆ ಈ ಪ್ರಮಾಣದಲ್ಲಿದೆ ಎನ್ನುವುದು ಆಘಾತ ಮೂಡಿಸುತ್ತದೆ. ಆದರೆ, ಒಂದು ವೇಳೆ ಕಟ್ಟುನಿಟ್ಟಾದ ಲಾಕ್ಡೌನ್ ತರದೇ ಹೋಗಿದ್ದರೆ ಪರಿಸ್ಥಿತಿ ಇನ್ನು ಹೇಗೆ ಇರುತ್ತಿತ್ತೋ ಎಂದು ಯೋಚಿಸುವುದಕ್ಕೂ ಕಷ್ಟವಾಗುತ್ತದೆ.