ಗಡಿಯಲ್ಲಿ ನಮೋ ಗುಡುಗು ; ಲಡಾಖ್ನ ಲೇಹ್ಗೆ ಪ್ರಧಾನಿ ಮೋದಿ ಅಚ್ಚರಿಯ ಭೇಟಿ
ಲಡಾಖ್: ಶುಕ್ರವಾರ ಬೆಳಗ್ಗೆ ಲಡಾಖ್ ಮತ್ತು ಎಲ್ಎಸಿಯ ಮುಂಚೂಣಿ ನೆಲೆಗಳಿಗೆ ಅಚ್ಚರಿಯ ಹಠಾತ್ ಭೇಟಿ ನೀಡಿದ ಪ್ರಧಾನಿ ಮೋದಿ ಭಾರತೀಯ ಯೋಧರಲ್ಲಿ ಧೈರ್ಯ ತುಂಬಿದರು. “ನೀವು ಪ್ರದರ್ಶಿಸಿದ ಧೈರ್ಯ ಮತ್ತು ಸಾಹಸ ನೀವೀಗ ಕರ್ತವ್ಯದಲ್ಲಿರುವ ಸ್ಥಳಕ್ಕಿಂತಲೂ ಉನ್ನತವಾದದ್ದು’ ಎಂದು ಬಣ್ಣಿಸಿದ ಮೋದಿ, ನಿಮ್ಮ ಶೌರ್ಯ ಈಗ ದೇಶದಲ್ಲಿ ಮನೆಮಾತಾಗಿದೆ ಎಂದು ಕೊಂಡಾಡಿದರು. ಸಿಂಧೂ ನದಿಯ ತಟದ ಮೇಲೆ, 11 ಸಾವಿರ ಅಡಿ ಎತ್ತರದ ಝನ್ಸ್ಕಾರ್ನ ನಿಮ್ಮು ನೆಲೆಗೆ ಪ್ರಧಾನಿ ನೀಡಿದ ಅತ್ಯಂತ ಅಚ್ಚರಿ ಭೇಟಿಯನ್ನು ಚೀನಕ್ಕೆ ಎಚ್ಚರಿಕೆಯ ನೇರ ಸಂದೇಶ ಎಂದೇ ವಿಶ್ಲೇಷಿಸಲಾಗಿದೆ. ವಿಸ್ತರಣೆಯ ಯುಗ ಮುಗಿದಿದೆ. ಈಗೇನಿದ್ದರೂ ಪ್ರಗತಿ ಪರ್ವ. ಭೂಮಿ ನುಂಗಲು ಹೊರಟ ವರು ಸೋಲನುಭವಿಸಿದ್ದಕ್ಕೆ ಚರಿತ್ರೆಯಲ್ಲಿ ಪುರಾವೆ ಗಳಿವೆ. ಇಂಥ ಭೂದಾಹಿಗಳು ತಮ್ಮ ಹಾದಿ ಸರಿ ಪಡಿಸಿಕೊಳ್ಳಬೇಕು, ಇಲ್ಲವೇ ನಾಶವಾಗುವುದನ್ನು ಕಲಿಯಬೇಕು ಎಂದು ಪ್ರಧಾನಿ ಮೋದಿ ಗುಡುಗಿದರು.
ಹೊಸ ಫೋಟೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Tulu Movie: ಎರಡು ಭಾಗದಲ್ಲಿ ಬರುತ್ತಿದೆ ತುಳು ಸಿನಿಮಾ; ಹೊಸಚಿತ್ರಕ್ಕೆ ಮುಹೂರ್ತ
Kollywood: ಧನುಷ್ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್