“ಸಲಗಕ್ಕೆ ಅದ್ಧೂರಿ ಮುಹೂರ್ತ: ಬೊಂಬಾಟ್ ಫೋಟೋಗ್ಯಾಲರಿ
ವಿಜಿಗೆ ಎರಡು ಸಾವಿರ ನೋಟು ಕೊಟ್ಟು ಶುಭಹಾರೈಸಿದ ಕಿಚ್ಚ
ದುನಿಯಾ ವಿಜಯ್ ನಟನೆ ಹಾಗೂ ಚೊಚ್ಚಲ ನಿರ್ದೇಶನದ “ಸಲಗ’ ಚಿತ್ರದ ಮುಹೂರ್ತ ಗುರುವಾರ ನಗರದ ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲಿ ನಡೆಯಿತು. ನಟ ಸುದೀಪ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ, ಚಿತ್ರತಂಡಕ್ಕೆ ಶುಭಕೋರಿದರು. ಜೊತೆಗೆ ಎರಡು ಸಾವಿರ ರೂಪಾಯಿಯ ಮೇಲೆ “ಒಳ್ಳೆಯದಾಗಲಿ’ ಎಂದು ಬರೆದು ವಿಜಿ ಕೈಗಿತ್ತ, ಸುದೀಪ್, “ಇದನ್ನು ನಿಮ್ಮ ಬಳಿ ಇಟ್ಟುಕೊಳ್ಳಿ, ಒಳ್ಳೆಯದಾಗುತ್ತದೆ’ ಎಂದು ಗೆಳೆಯನಿಗೆ ಶುಭಕೋರಿದರು. ಚಿತ್ರದ ಮುಹೂರ್ತಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಡಿ.ಕೆ.ಸುರೇಶ್, ನಿರ್ಮಾಪಕ ರಾಘವೇಂದ್ರ ರಾಜ್ಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿ, ಚಿತ್ರತಂಡಕ್ಕೆ ಶುಭಕೋರಿದರು. ಕೆ.ಪಿ.ಶ್ರೀಕಾಂತ್ ಈ ಚಿತ್ರದ ನಿರ್ಮಾಪಕರು. ಸಂಜನಾ ಆನಂದ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಉಳಿದಂತೆ ಧನಂಜಯ್, ಸುಧೀರ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.ಚಿತ್ರದ ಮೂಹೂರ್ತದ ಝಲಕ್ ನಿಮಗಾಗಿ…
ಹೊಸ ಫೋಟೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ