ತುಂಬಿದೆ ಭಕ್ತಿ, ಉತ್ಸಾಹ, ಕಾತರ; ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಸಡಗರ; Photo Gallery
ಶ್ರೀರಾಮನ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ಎಲ್ಲೆಲ್ಲೂ ಸಡಗರ ಮನೆ ಮಾಡಿದೆ. ಮನೆಗಳ ಮುಂದೆ ಹಾಕಿರುವ ವಿವಿಧ ರಂಗೋಲಿ, ಬಾಗಿಲಿಗೆ ಕಟ್ಟಿರುವ ತೋರಣಗಳು ನೋಡುಗರನ್ನು ಮುದಗೊಳಿಸುತ್ತಿವೆ. ಊರು ತುಂಬಾ ಇರುವ ದೇಗುಲಗಳಂತೂ ಹೂವಿನಿಂದ ಆವೃತವಾಗಿವೆ. ಬಗೆ ಬಗೆಯ ದೀಪಾಲಂಕಾರ ಗಳಿಂದ ಝಗಮಗಿಸುತ್ತವೆ. ಒಟ್ಟಾರೆಯಾಗಿ ಎಲ್ಲೆಲ್ಲೂ ಹಬ್ಬದ ವಾತಾವರಣ ಮುಗಿಲು ಮುಟ್ಟಿದೆ. ಇದು, ಅಯೋಧ್ಯೆಯಲ್ಲಿ ಬುಧವಾರ ನಡೆಯಲಿರುವ ಶ್ರೀರಾಮ ಮಂದಿರದ ಭೂಮಿಪೂಜೆ ಹಿನ್ನೆಲೆಯಲ್ಲಿ ಆವರಿಸಿರುವ ಮಾಯಾಲೋಕ. ಕೋಟ್ಯಂತರ ಹಿಂದೂಗಳು ಶತಮಾನಗಳಿಂದ ಕಾಯುತ್ತಿದ್ದ ಕನಸೊಂದು ನನಸಾಗುವ ಸುದಿನದ ಪ್ರತೀಕ.