ಉಂಡೆ ಚಕ್ಕುಲಿಗಳ ತಯಾರಿ ಸಂಭ್ರಮ
ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದರೆ ಉಡುಪಿಯಲ್ಲಿ ಸಂಭ್ರಮವೋ ಸಂಭ್ರಮ. ಒಂದೆಡೆ ವಿವಿಧ ವೇಷಗಳು ಊರ ತುಂಬಾ ಸಂಭ್ರಮದಿಂದ ತಿರುಗಾಡುತ್ತಾ ಕುಣಿಯುತ್ತಿರುತ್ತವೆ. ಇನ್ನೊಂದೆಡೆ ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣನಿಗೆ ಸಮರ್ಪಣೆಗೊಂಡು ಬಳಿಕ ಭಕ್ತರ ಸಂತರ್ಪಣೆಗಾಗಿ ವಿವಿಧ ಬಗೆಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಇದರ ಒಂದು ಚಿತ್ರಣ ಇಲ್ಲಿದೆ.