ನಗರದ ಓಟಕ್ಕೆ ವಾರಾಂತ್ಯದ ವಿರಾಮ; ಬಿಕೋ ಎಂದ ರಸ್ತೆಗಳು
ವಾರದಿಂದ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದ್ದ ನಗರದ ಓಟಕ್ಕೆ ಭಾನುವಾರದ ಲಾಕ್ಡೌನ್ ತಾತ್ಕಾಲಿಕ ವಿರಾಮ ನೀಡಿತು. ವ್ಯಾಪಾರ-ವಾಣಿಜ್ಯ ಚಟುವಟಿಕೆಗಳು, ಸಮೂಹ ಸಾರಿಗೆ, ಖಾಸಗಿ ವಾಹನಗಳ ಸಂಚಾರ ಬಹುತೇಕ ಸ್ತಬ್ಧಗೊಂಡಿತ್ತು. ಲಾಕ್ಡೌನ್ ಬಗ್ಗೆ ಮೊದಲೇ ಅರಿವಿದ್ದರಿಂದ ಗೊಂದಲಕ್ಕೆ ಅವಕಾಶ ಇರಲಿಲ್ಲ. ಅಗತ್ಯ ವಸ್ತು ಪೂರೈಕೆ, ಸೇವೆ ಸಿಬ್ಬಂದಿ ಮಾತ್ರ ಕಂಡು ಬಂದರು. ಇದರಿಂದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು.