ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾದ, ಲಾಕ್ಡೌನ್ ನಾಲ್ಕನೇ ಚರಣ
ಲಾಕ್ಡೌನ್ ನಾಲ್ಕನೇ ಚರಣದ ಆರಂಭದಿಂದ ದೇಶಾದ್ಯಂತ ಸಂಚಾರ ಸೇರಿದಂತೆ ವಿವಿಧ ನಿರ್ಬಂಧಗಳು ಸಡಿಲಗೊಂಡಿವೆ. ಅನ್ಯ ರಾಜ್ಯಗಳಿಗೆ ವಲಸೆ ಹೋದವರು ತಮ್ಮ ತವರು ರಾಜ್ಯಕ್ಕೆ ಬೃಹತ್ ಪ್ರಮಾಣದಲ್ಲಿ ಹಿಂದಿರುಗುತ್ತಿರುವುದರ ಜತೆಗೆೆ, ಕೊರೊನಾ ಪ್ರಕರಣಗಳ ಸಂಖ್ಯೆಯೂ ಅಧಿಕವಾಗುತ್ತಿದೆ. ಕರ್ನಾಟಕದಲ್ಲಿ ಪತ್ತೆಯಾದ ಹೊಸ ಸೋಂಕಿತರಲ್ಲಿ ಬಹುತೇಕರು ಮಹಾರಾಷ್ಟ್ರದಿಂದ ಹಿಂದಿರುಗಿದವರು. ನಮ್ಮಲ್ಲೆಂದಷ್ಟೇ ಅಲ್ಲ, ಮೇ 17ರವರೆಗೂ ಕೋವಿಡ್-19 ಅನ್ನು ತಡೆಯಲು ಸಾಕಷ್ಟು ಯಶಸ್ವಿಯಾಗಿದ್ದ ಹಲವು ರಾಜ್ಯಗಳಲ್ಲಿ ಈಗ ರೋಗಿಗಳ ಸಂಖ್ಯೆ ಹಠಾತ್ತನೆ ಏರಿಕೆಯಾಗಿರುವುದಷ್ಟೇ ಅಲ್ಲದೇ, ಅಲ್ಲಿ ರೋಗ ದ್ವಿಗುಣಗೊಳ್ಳುವ ದರದಲ್ಲೂ ವೇಗ ಕಾಣಿಸಿಕೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಕೊರೊನಾ ಮಹಾನಗರಗಳನ್ನು ದಾಟಿ, ಗ್ರಾಮೀಣ ಪ್ರದೇಶಗಳಿಗೂ ಅಡಿ ಇಟ್ಟಿರುವುದು ನಿಜಕ್ಕೂ ಆತಂಕದ ವಿಚಾರ.