Tollywood: ನಾಗಚೈತನ್ಯ – ಶೋಭಿತಾ ಕಲ್ಯಾಣ; ಇಲ್ಲಿದೆ ಬ್ಯೂಟಿಫುಲ್ ಫೋಟೋಸ್
ನಾಗ ಚೈತನ್ಯ (Naga Chaitanya) ಹಾಗೂ ಶೋಭಿತಾ ಧೂಳಿಪಾಲ (Sobhita Dhulipala) ಬುಧವಾರ (ಡಿ.4ರಂದು) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನ್ನಪೂರ್ಣ ಸ್ಟುಡಿಯೋದಲ್ಲಿ ಮದುವೆ ಸಮಾರಂಭ ನಡೆದಿದೆ. ಅಕ್ಕಿನೇನಿ ಕುಟುಂಬದ ಮದುವೆ ಸಮಾರಂಭಕ್ಕೆ ಮೆಗಾ ಸ್ಟಾರ್ ಕುಟುಂಬ, ಅಲ್ಲು ಅರವಿಂದ್, ದಗ್ಗುಬಾಟಿ ಕುಟುಂಬ ಸೇರಿದಂತೆ ತಾರೆಗಳ ದಂಡೇ ಆಗಮಿಸಿ ನವದಂಪತಿಗೆ ಶುಭ ಕೋರಿದ್ದಾರೆ. ಅಕ್ಕಿನೇನಿ ನಾಗಾರ್ಜುನ ಅವರು ಮದುವೆಯ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.