ಇರಲಿ ಇಮ್ಮಡಿ ಎಚ್ಚರ ; ಇಂದಿನಿಂದ ಅನ್ಲಾಕ್ 1.0 ಜಾರಿ !
ನಿರ್ಬಂಧ ಸಡಿಲಿಕೆಯ ಮೊದಲ ಹಂತದಲ್ಲಿ ದೇವಸ್ಥಾನ, ಪ್ರಾರ್ಥನ ಮಂದಿರಗಳು, ಮಾಲ್ಗಳ ಆರಂಭಕ್ಕೆ ಸೋಮವಾರದಿಂದ ಅವಕಾಶ ಕಲ್ಪಿಸಲಾಗಿದೆ. ಜತೆಗೆ ಇತರ ಧಾರ್ಮಿಕ ಕೇಂದ್ರ, ಪ್ರಾರ್ಥನ ಮಂದಿರಗಳಲ್ಲೂ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಧಾರ್ಮಿಕ ಚಟುವಟಿಕೆಗಳು ಆರಂಭವಾಗಲಿವೆ. ಹೊಟೇಲ್, ರೆಸ್ಟೋರೆಂಟ್ಗಳಲ್ಲಿ ಸೋಮವಾರ ಸ್ಥಳದಲ್ಲೇ ತಿಂಡಿ, ಊಟ ಒದಗಿಸಲು ಅನುಮತಿ ನೀಡಲಾಗಿದೆ. ಸಾಮಾಜಿಕ ಅಂತರ ಪಾಲನೆ, ನೈರ್ಮಲ್ಯ ರಕ್ಷಣೆ, ಗ್ರಾಹಕರ ಸಂಖ್ಯೆಗೆ ಮಿತಿ ಮತ್ತಿತರ ಷರತ್ತುಗಳೊಂದಿಗೆ ಇವು ತೆರೆಯಬೇಕಿದೆ. ಈ ಹಿನ್ನೆಲೆಯಲ್ಲಿ ಜನರ ಓಡಾಟ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ದೇವಸ್ಥಾನ, ಪ್ರಾರ್ಥನ ಮಂದಿರಗಳು, ಮಾಲ್ ಗಳು ಇಂದಿನಿಂದ ತೆರೆದುಕೊಳ್ಳಲಿದ್ದು, ಮುನ್ನೆಚ್ಚರಿಕೆ ಕ್ರಮಗಳ ಸಿದ್ಧತೆ ನಡೆದಿದೆ.