ಗೋವಾ: ಚರ್ಚೆಗೆ ಕಾರಣವಾದ 10 ಕಾಂಗ್ರೆಸ್ ಶಾಸಕರು ಬಿಜೆಪಿಯಲ್ಲಿ ವಿಲೀನ ಸುದ್ದಿ !
Team Udayavani, Jul 10, 2022, 4:50 PM IST
ಪಣಜಿ: ಗೋವಾ ಕಾಂಗ್ರೆಸ್ ಪಕ್ಷದ 11 ಜನ ಶಾಸಕರ ಪೈಕಿ 10 ಜನ ಶಾಸಕರು ಬಿಜೆಪಿಯಲ್ಲಿ ವಿಲೀನವಾಗುವ ಸಿದ್ಧತೆ ನಡೆಸಿದ್ದಾರೆ ಎಂಬ ಸುದ್ಧಿ ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ವರಿಷ್ಠರು ಕಾಂಗ್ರೆಸ್ ನ 10 ಜನ ಶಾಸಕರಿಗೆ ಬಿಜೆಪಿಗೆ ಪ್ರವೇಶ ನೀಡಲು ಹಸಿರು ನಿಶಾನೆ ತೋರಿಸಿದ್ದಾರೆ ಎನ್ನಲಾಗಿದೆ.
ಗೋವಾ ವಿಧಾನಸಭಾ ಅಧಿವೇಶನ ಜುಲೈ 11 ರಿಂದ ಆರಂಭಗೊಳ್ಳಲಿದ್ದು, ಗೋವಾ ರಾಜಕೀಯದಲ್ಲಿ ಈ ಭಾರಿ ಬೆಳವಣಿಗೆ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೋವಾ ಪ್ರಭಾರಿ ದಿನೇಶ್ ಗುಂಡೂರಾವ್ ಶನಿವಾರ ಗೋವಾಕ್ಕೆ ಆಗಮಿಸಿದ್ದರು. ಅವರು ಕಾಂಗ್ರೆಸ್ ಶಾಸಕರ ಸಭೆ ನಡೆಸಿ ಶಾಸಕರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಕಾಂಗ್ರೆಸ್ ಪಕ್ಷದ 11 ಶಾಸಕರ ಪೈಕಿ 10 ಶಾಸಕರು ಬಿಜೆಪಿ ಸೇರ್ಪಡೆಯಾಗುವುದು ಖಚಿತ ಎಂದೇ ಹೇಳಲಾಗುತ್ತಿದೆ.
ಈ ಕುರಿತು ಪ್ರತಿಪಕ್ಷದ ನಾಯಕ ಮೈಕಲ್ ಲೋಬೊ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಶಾಸಕರೆಲ್ಲ ಒಗ್ಗಟ್ಟಾಗಿದ್ದಾರೆ. ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಜುಲೈ 11 ರಂದು ಅಧಿವೇಶನ ಆರಂಭಗೊಳ್ಳುತ್ತಿರುವುದರಿಂದ ಅಧಿವೇಶನದ ಕಾರ್ಯತಂತ್ರವನ್ನು ರೂಪಿಸಲು ನಾವು ಸಭೆ ಸೇರಿದ್ದೇವೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Election 2025: ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್ ವಿರುದ್ಧ ವರ್ಮಾ
Bangladesh: ಹಿಂದೂ ಸನ್ಯಾಸಿ ಚಿನ್ಮಯಿ ದಾಸ್ ಜಾಮೀನು ಅರ್ಜಿ ವಜಾಗೊಳಿಸಿದ ಅರ್ಜಿ!
Delhi: ಕೇಜ್ರಿವಾಲ್ ಚುನಾವಣೆಯಲ್ಲಿ ನೀಡಿದ್ದ ಒಂದೂ ಭರವಸೆ ಈಡೇರಿಸಿಲ್ಲ: ಬಿಜೆಪಿ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Cast Census: ಜಾತಿ ಗಣತಿ ಮರು ಸಮೀಕ್ಷೆ ಅಗತ್ಯ: ಅಶೋಕ್ ಹಾರನಹಳ್ಳಿ
Congress: ‘ಒಬ್ಬರಿಗೆ ಒಂದೇ ಹುದ್ದೆ’ಗೆ ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ: ರಣದೀಪ್
ಬಣ ಜಗಳ ಸಾಕು ನಿಲ್ಲಿಸಿ, ಗೊಂದಲದ ಹೇಳಿಕೆ ನೀಡಿದ್ರೆ ಕ್ರಮ: ಕಾಂಗ್ರೆಸ್ ಹೈಕಮಾಂಡ್ ತಾಕೀತು
Election: ರಾಜ್ಯದ ಜಿ.ಪಂ, ತಾ.ಪಂ. ಚುನಾವಣೆಗೆ ಮತಪತ್ರ ಬಳಕೆ: ಚುನಾವಣ ಆಯೋಗ
Congress Session: ಸಚಿವರ ಸುಧಾರಣೆಗೆ ಎರಡು ತಿಂಗಳ ಗಡುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.