ಪಾಕ್ – ಚೀನಾ ಹೆಸರು ಹೇಳಲು ಮೋದಿಗೆ ಭಯವೇಕೆ ? ಕಾಂಗ್ರೆಸ್ ಪ್ರಶ್ನೆ
Team Udayavani, Sep 26, 2021, 2:56 PM IST
ಬೆಂಗಳೂರು: ಶನಿವಾರ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣವನ್ನು ಕಾಂಗ್ರೆಸ್ ಟೀಕಿಸಿದೆ. ಮೋದಿಯವರಿಗೆ ಪಾಕ್ ಮತ್ತು ಚೀನಾ ಹೆಸರು ಹೇಳಲು ಏಕೆ ಭಯ ಎಂದು ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, “ಹಿಂದಿನಂತೆಯೇ ಈಗಲೂ ವಿಶ್ವಸಂಸ್ಥೆಯ ತಮ್ಮ ಭಾಷಣದಲ್ಲಿ ಪಾಕಿಸ್ತಾನ, ಚೀನಾದ ಹೆಸರು ಹೇಳಲು 56 ಇಂಚಿನ ಎದೆಯವರು ಭಯಪಟ್ಟಿದ್ದಾರೆ. ಪಾಕ್‌ನ ಭಯೋತ್ಪಾದನೆಗೆ ಕುಮ್ಮಕ್ಕು ಹಾಗೂ ಚೀನಾದ ಅತಿಕ್ರಮಣವನ್ನು ಜಾಗತಿಕ ವೇದಿಕೆಯಲ್ಲಿ ನೇರವಾಗಿ ಪ್ರಸ್ತಾಪಿಸಲು ಹಿಂಜರಿದಿದ್ದಾರೆ. ಪ್ರಧಾನಿ ಮೋದಿಯವರಿಗೆ ಪಾಕ್, ಚೀನಾದ ಹೆಸರು ಹೇಳಲು ಏಕೆ ಅಷ್ಟು ಭಯ? ಎಂದು ಕೇಳಿದೆ.
ಹಿಂದಿನಂತೆಯೇ ಈಗಲೂ ವಿಶ್ವಸಂಸ್ಥೆಯ ತಮ್ಮ ಭಾಷಣದಲ್ಲಿ ಪಾಕಿಸ್ತಾನ, ಚೀನಾದ ಹೆಸರು ಹೇಳಲು 56 ಇಂಚಿನ ಎದೆಯವರು ಭಯಪಟ್ಟಿದ್ದಾರೆ.
ಪಾಕ್‌ನ ಭಯೋತ್ಪಾದನೆಗೆ ಕುಮ್ಮಕ್ಕು ಹಾಗೂ ಚೀನಾದ ಅತಿಕ್ರಮಣವನ್ನು ಜಾಗತಿಕ ವೇದಿಕೆಯಲ್ಲಿ ನೇರವಾಗಿ ಪ್ರಸ್ತಾಪಿಸಲು ಹಿಂಜರಿದಿದ್ದಾರೆ.@narendramodi ಅವರಿಗೆ ಪಾಕ್, ಚೀನಾದ ಹೆಸರು ಹೇಳಲು ಏಕೆ ಅಷ್ಟು ಭಯ?!
— Karnataka Congress (@INCKarnataka) September 26, 2021
ಇನ್ನು ಶನಿವಾರ ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಭಯೋತ್ಪಾದನೆ ವಿಷಯವನ್ನುಂಟುಕೊಂಡು ಪಾಕ್ ಹಾಗೂ ಚೀನಾ ದೇಶಗಳಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಭಯೋತ್ಪಾದನೆ ರಾಜಕೀಯ ಅಸ್ತ್ರವಾಗಿ ಬಳಸಬಾರದು. ‘ಉಗ್ರ’ ಪೋಷಕ ರಾಷ್ಟ್ರಗಳು ಅದರಿಂದ ತೊಂದರೆ ಎದುರಿಸಲಿವೆ ಎಂದು ಪಾಕ್ ಹೆಸರು ಹೇಳದೆ ಚಾಟಿ ಬೀಸಿದರು.
ತಮ್ಮ ಭಾಷಣದಲ್ಲಿ ಚೀನಾ ವಿರುದ್ಧವೂ ಹರಿಹಾಯ್ದಿರುವ ಮೋದಿ, ವಿಸ್ತರಣಾವಾದ ನಡೆಸುತ್ತಿರುವ ಚೀನಾಗೂ ಮೋದಿ ಪರೋಕ್ಷವಾಗಿ ಕುಟುಕಿದರು. ಆದರೆ, ಈ ಬಾರಿ ನೆಲದ ಮೇಲಿನ ವಿಸ್ತರಣಾವಾದ ಕ್ಕಿಂತ ಹೆಚ್ಚಾಗಿ ಸಮುದ್ರದಲ್ಲಿನ ಅದರ ವಿಸ್ತರಣಾವಾದದತ್ತ ಗಮನಕೊಟ್ಟರು. ಸಮುದ್ರಗಳು ಎಂದರೆ ನಮ್ಮ ಹಿರಿಮೆ ಇದ್ದಂತೆ. ಯಾವುದೇ ಕಾರಣಕ್ಕೂ ಈ ಸಮುದ್ರಗಳನ್ನು ದುರ್ಬಳಕೆಯಾಗಲು ಬಿಡಬಾರದು ಎಂದು ಮೋದಿ ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
MUST WATCH
ಹೊಸ ಸೇರ್ಪಡೆ
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.