![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Apr 29, 2022, 5:05 PM IST
ಪಣಜಿ: ಪಕ್ಷವನ್ನು ಇನ್ನೂ ಬಲಪಡಿಸಲು ಗೋವಾದಲ್ಲಿ ಹಲವು ವೈದ್ಯರು,ಇಂಜಿನಿಯರ್ ಗಳು , ಹಲವು ಜನ ಸೇವಾ ನಿವೃತ್ತ ಅಧಿಕಾರಿಗಳು ಬಿಜೆಪಿ ಸೇರಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ ಹೇಳಿದ್ದಾರೆ.
ದಕ್ಷಿಣ ಗೋವಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಸಿದ್ಧ ಹೃದಯರೋಗ ತಜ್ಞ ಡಾ. ಮಿಲಿಂದ ದೇಸಾಯಿ ಬಿಜೆಪಿ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಗಣೇಶ ಗಾಂವಕರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ ಉಪಸ್ಥಿತರಿದ್ದರು.
ವಿವಿಧ ಗಣ್ಯರು ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆ. ಡಾ.ದೇಸಾಯಿ ರವರನ್ನು ಶೀಘ್ರದಲ್ಲಿಯೇ ಬಿಜೆಪಿ ವೈದ್ಯರ ಸೆಲ್‍ಗೆ ಸೇರಿಸಲಾಗುವುದು. ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇದೆ. ಇದರಿಂದಾಗಿ ಈಗ ಬಿಜೆಪಿ ಸೇರುತ್ತಿರುವವರು ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಸುವ ಉದ್ದೇಶವನ್ನಿಟ್ಟುಕೊಂಡು ಬಿಜೆಪಿ ಸೇರುತ್ತಿಲ್ಲ ಎಂದು ತಾನಾವಡೆ ಹೇಳಿದರು.
ಬಿಜೆಪಿ ಸೇರ್ಪಡೆಯಾದ ಡಾ. ಮಿಲಿಂದ ದೇಸಾಯಿ ಮಾತಾಡಿ, ಆಸ್ಪತ್ರೆಯ ಮಾಲೀಕನಾದ ನನಗೆ ಜನರ ಹಾಗೂ ರಾಜಕಾರಣಿಗಳ ನೆರವು ಬೇಕು. ವೈದ್ಯಕೀಯ ಶಿಭಿರಗಳನ್ನು ಆಯೋಜಿಸುವ ಮೂಲಕ ನಾನು ಸಮಾಜಕ್ಕೆ ನನ್ನ ಕೊಡುಗೆ ನೀಡುತ್ತೇನೆ ಎಂದರು.
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
Congress Siddu Team: ಸಿದ್ದರಾಮಯ್ಯ ಆಪ್ತರಿಂದ ಈಗ ʼಮಾಸ್ ಲೀಡರ್ʼ ಅಸ್ತ್ರ
Jayalalithaa Assets: ಮಾಜಿ ಸಿಎಂ ಜಯಲಲಿತಾ 27 ಕೆ.ಜಿ. ಚಿನ್ನಾಭರಣ ತಮಿಳುನಾಡು ವಶಕ್ಕೆ
You seem to have an Ad Blocker on.
To continue reading, please turn it off or whitelist Udayavani.