ಗೋವಾ ಟಿಎಂಸಿ ಸಮಿತಿ ಪ್ರಕಟ: ರಾಜ್ಯಸಭಾ ಸದಸ್ಯ ಲುಯಿಜಿನ್ ಫಾಲೆರೊಗೆ ಸ್ಥಾನವಿಲ್ಲ
Team Udayavani, Sep 9, 2022, 5:18 PM IST
ಪಣಜಿ: ಗೋವಾ ತೃಣಮೂಲ ಕಾಂಗ್ರೆಸ್ ತನ್ನ ನೂತನ ರಾಜ್ಯ ಸಮಿತಿಯನ್ನು ಪ್ರಕಟಿಸಿದ್ದು, ರಾಜ್ಯಸಭಾ ಸದಸ್ಯ ಲುಯಿಜಿನ್ ಫಾಲೆರೊಗೆ ಸಮಿತಿಯಲ್ಲಿ ಸ್ಥಾನ ಸಿಕ್ಕಿಲ್ಲ. ರಾಜ್ಯದ ಜಂಟಿ ಸಂಚಾಲಕರಾಗಿ ಸಮೀರ್ ವಳವೈಕರ್ ಮತ್ತು ಮರಿಯಾನೋ ರೋಡ್ರಿಗಸ್ ಅವರನ್ನು ಆಯ್ಕೆ ಮಾಡಲಾಗಿದೆ.
ಪಕ್ಷದ ಗೋವಾ ಉಸ್ತುವಾರಿ ಕೀರ್ತಿ ಆಜಾದ್ ಅವರು ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ್ದು,ಸಮಿತಿಯಲ್ಲಿ ಲೂಯಿಜಿನ್ ಫಾಲೆರೊಗೆ ಏಕೆ ಸ್ಥಾನ ನೀಡಲಿಲ್ಲ? ಎಂಬ ಪ್ರಶ್ನೆಗೆ ಆಜಾದ್ ಉತ್ತರಿಸಲಿಲ್ಲ. ಉತ್ತರ ಗೋವಾ ಅಧ್ಯಕ್ಷ ರಾಜೇಂದ್ರ ಕಾಕೋಡ್ಕರ್, ದಕ್ಷಿಣ ಗೋವಾ ಅಧ್ಯಕ್ಷ ಡಾ. ಜೋರ್ಸನ್ ಫೆನಾರ್ಂಡಿಸ್, ಉತ್ತರ ಗೋವಾ ಉಪಾಧ್ಯಕ್ಷ ಕಾಂತ ಗಾವಡೆ, ದಕ್ಷಿಣ ಗೋವಾ ಉಪಾಧ್ಯಕ್ಷ ಶಿವದಾಸ್ ನಾಯ್ಕ್. ಸದಸ್ಯ ಸ್ಥಾನದಲ್ಲಿ ಅವಿತಾ ಬಂದೋಡ್ಕರ್, ಪ್ರತಿಭಾ ಬೋರ್ಕರ್, ಗಾಂಧಿ ಹೆನ್ರಿಕ್ಸ್, ಮರಿಯಾ ಪಿಂಟೊ, ರಾಖಿ ನಾಯಕ್, ವಿಕ್ಟರ್ ಗೊನ್ಸಾಲ್ವಿಸ್, ಸಚಿನ್ ಘೋಟ್ಗೆ, ಕೆನಡಿ ಅಫೊನ್ಸೊ ರವರಿದ್ದು, ದಶರತ್ ಮಾಂದ್ರೇಕರ್ ಮತ್ತು ಶಿತಿಲ್ ಗುಂಜ್ಕರ್ ಅವರು ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ.
ಮಾರಿಯಾ ಲೋಪೆಜ್, ಗಿಲ್ರಾಯ್ ಕೋಸ್ಟಾ, ರಾಜೇಶ್ ನಾಯ್ಕ್, ಮಹೇಶ್ ಭಂಡಾರಿ ಮತ್ತು ಗಣಪತ್ ಗಾಂವ್ಕರ್ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ.
ಮಹಿಳಾ ವಿಭಾಗದಲ್ಲಿ ಅವಿತಾ ಬಂದೋಡ್ಕರ್ ಸಮನ್ವಯಕಿ, ಪ್ರತಿಭಾ ಬೋರ್ಕರ್ ಸಹ ಸಂಯೋಜಕಿ. ಯುವ ವಿಭಾಗದ ಸಂಯೋಜಕ ಅಂತೋನಿ ಪಿಶೊಟ್, ಸದಸ್ಯರಾದ ನವೀನ್ ಫಲ್ದೇಸಾಯಿ, ರಾಹುಲ್ ಶೆಟ್ಟಿ ಮತ್ತು ಜೋಕಿಂ ಫೆನಾರ್ಂಡಿಸ್ ರವರಿಗೆ ಸ್ಥಾನ ನೀಡಲಾಗಿದೆ. ಟ್ರೋಜನ್ ಡಿಮೆಲ್ಲೋ, ವಕ್ತಾರರಾದ ಜಯೇಶ್ ಶೆಟ್ಗಾಂವ್ಕರ್, ಪೀಟರ್ ಅಫೊನ್ಸೊ ಮತ್ತು ಅನ್ನಾ ಗ್ರೇಸಿಯಾಸ್. ಅಲ್ಪಸಂಖ್ಯಾತರ ವಿಭಾಗದ ಸಂಯೋಜಕಿ ಸುಲ್ತಾನ್ ಶೇಖ್, ವಿನ್ಸೆಂಟ್ ಫೆನಾರ್ಂಡಿಸ್, ಸದಸ್ಯರಾದ ಸಂತನ್ ಡಯಾಸ್ ಮತ್ತು ಅಪ್ಸರಾ ಖಾನ್. ಪರಿಶಿಷ್ಟ ಜಾತಿ ಸಮನ್ವಯಾಧಿಕಾರಿ ಸಂತೋಷ ಶಂಕರ ಮಾಂಡ್ರೇಕರ. ಆನಂದ ನಾಯ್ಕ, ಇತರೆ ಹಿಂದುಳಿದ ವರ್ಗಗಳ ಇಲಾಖೆಯ ಸಂಯೋಜಕ ಸದಸ್ಯ ಪ್ರಚಾರ ವಿಭಾಗದ ಸಂಯೋಜಕ ಸಿದ್ಧೇಶ್ವರ ಮಿಶ್ರಾ ಮತ್ತು ಸದಸ್ಯೆ ನವಿದಾ ಹಬೀಬ್ ರವರಿಗೂ ಸ್ಥಾನ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
Uttara Pradesh: ಬುಲ್ಡೋಜರ್ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ
One Nation, One Poll: ಲೋಕಸಭೆಯಲ್ಲಿ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ; ಕೈ ವಿರೋಧ
ಭಾರತದಲ್ಲಿ ಶ್ರೀರಾಮನ ಸಂಪ್ರದಾಯ ಮುಂದುವರಿಯಲಿದೆ ವಿನಃ ಬಾಬರನದ್ದಲ್ಲ: ಸಿಎಂ ಯೋಗಿ
Constitution Debate:ಸಚಿವೆ ನಿರ್ಮಲಾ Balraj,Sultanpuri ಬಂಧನ ಘಟನೆ ಉಲ್ಲೇಖಿಸಿದ್ದೇಕೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.