2 ರಾಜ್ಯ ಗೆದ್ದ ಆಪ್ ರಾಷ್ಟ್ರೀಯ ಪಕ್ಷವಾಗುವುದೇ? ರಾಷ್ಟ್ರೀಯ ಪಕ್ಷದ ಮಾನ್ಯತೆಗೆ ಮಾನದಂಡವೇನು?
Team Udayavani, Mar 11, 2022, 2:29 PM IST
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಧಿಕಾರಕ್ಕೇರಿದ ಬಳಿಕ ಇದೀಗ ಪಂಜಾಬ್ ನಲ್ಲಿ ಹೊಸ ಮೈಲಿಗಲ್ಲು ನೆಟ್ಟಿರುವ ಅರವಿಂದ ಕೇಜ್ರಿವಾಲ್ ರ ಆಮ್ ಆದ್ಮಿ ಪಕ್ಷವು ರಾಷ್ಟ್ರೀಯ ಪಕ್ಷವಾಗುವತ್ತ ಹೆಜ್ಜೆ ಇಡುತ್ತಿದೆ. ಕಳೆಗುಂದುತ್ತಿರುವ ಕಾಂಗ್ರೆಸ್ ನ ಪ್ರಭಾವದ ನಡುವೆ ಬಿಜೆಪಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಿ ಆಪ್ ಬೆಳೆಯುತ್ತಿದೆ.
ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಯವರ ಜತೆಗೆ ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ ಮುಂಚೂಣಿಗೆ ಬಂದ ಅರವಿಂದ ಕೇಜ್ರಿವಾಲ್ 2012ರ ಅಕ್ಟೋಬರ್‌ನಲ್ಲಿ ಆಮ್ ಆದ್ಮಿ ಪಕ್ಷ ಸ್ಥಾಪನೆ ಮಾಡಿದ್ದರು. ದೆಹಲಿಯಿಂದ ಆರಂಭವಾಗಿ ಇದೀಗ ಪಕ್ಕದ ಪಂಜಾಬ್ ನಲ್ಲಿನ ಜಯದಿಂದಾಗಿ ಪ್ರಾದೇಶಿಕ ಪಕ್ಷವಾಗಿರುವ ಆಪ್ ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಸಾಗುತ್ತಿದೆ ಎನ್ನುತ್ತಿದ್ದಾರೆ ವಿಶ್ಲೇಷಕರು.
ರಾಷ್ಟ್ರೀಯ ಪಕ್ಷದ ಮಾನದಂಡವೇನು?
ಎರಡು ರಾಜ್ಯದಲ್ಲಿ ಗೆದ್ದ ಮಾತ್ರಕ್ಕೆ ಪ್ರಾದೇಶಿಕ ಪಕ್ಷವನ್ನು ರಾಷ್ಟ್ರೀಯ ಪಕ್ಷವೆಂದು ಪರಿಗಣಿಸಲಾಗುವುದಿಲ್ಲ. ಅದಕ್ಕೆ ಹಲವು ಮಾನದಂಡಗಳಿವೆ.
ಕನಿಷ್ಠ ಮೂರು ವಿಭಿನ್ನ ರಾಜ್ಯಗಳಿಂದ ಲೋಕಸಭೆಯಲ್ಲಿ ಒಟ್ಟು ಸ್ಥಾನಗಳಲ್ಲಿ ಕನಿಷ್ಠ ಎರಡು ಪ್ರತಿಶತದಷ್ಟು (11 ಸ್ಥಾನಗಳು) ಗೆಲ್ಲುವ ಅಗತ್ಯವಿದೆ. ಪ್ರಸ್ತುತ, ಎಎಪಿ ಲೋಕಸಭೆಯಲ್ಲಿ ಕೇವಲ 1 ಸ್ಥಾನವನ್ನು ಹೊಂದಿದೆ.
ಲೋಕಸಭೆ ಸ್ಥಾನಗಳ ಜೊತೆಗೆ ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ಸ್ಪರ್ಧಿಸಿ ಶೇ.6ಕ್ಕಿಂತ ಹೆಚ್ಚು ಮತಗಳನ್ನು ಪಡೆಯಬೇಕು. ಹಿಂದಿನ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಪ್‌ಗೆ ಶೇ.54, ಗೋವಾದಲ್ಲಿ ಶೇ. 6.77, ಪಂಜಾಬ್‌ನಲ್ಲಿ ಶೇ.42, ಉತ್ತರಾಖಂಡದಲ್ಲಿ ಶೇ.3.4, ಉತ್ತರ ಪ್ರದೇಶದಲ್ಲಿ ಶೇ.0.3 ಮತಗಳನ್ನು ಪಡೆದು ಕೊಂಡಿದೆ.
ಇದನ್ನೂ ಓದಿ:ಸಿದ್ದರಾಮಯ್ಯಗೆ ”ಅಪ್ಪನ ಆಣೆ..” ಹೇಳಿಕೆ ನೆನಪಿಸಿ ಟಾಂಗ್ ನೀಡಿದ ಸಿಎಂ ಬೊಮ್ಮಾಯಿ
ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ‘ರಾಜ್ಯ ಪಕ್ಷ’ ಎಂದು ಗುರುತಿಸಿಕೊಳ್ಳಬೇಕು. ಗೋವಾ, ದೆಹಲಿ ಮತ್ತು ಪಂಜಾಬ್ ನಲ್ಲಿ ಮಾತ್ರ ಪಕ್ಷಕ್ಕೆ ಮನ್ನಣೆಯಿದೆ. ಯಾವುದೇ ಪಕ್ಷವು ರಾಜ್ಯ ಪಕ್ಷವೆಂದು ಗುರುತಿಸಲ್ಪಡಬೇಕಾದರೆ, ಅದು ವಿಧಾನಸಭಾ ಚುನಾವಣೆಗಳಲ್ಲಿ ಮತ್ತು ಎರಡು ವಿಧಾನಸಭಾ ಸ್ಥಾನಗಳ ಸಮಯದಲ್ಲಿ ಶೇಕಡಾ ಆರರಷ್ಟು ಮತಗಳನ್ನು ಗಳಿಸಬೇಕು; ಅಥವಾ ರಾಜ್ಯದಿಂದ ಲೋಕಸಭೆಯಲ್ಲಿ ಶೇಕಡಾ ಆರರಷ್ಟು ಮತಗಳು ಮತ್ತು ರಾಜ್ಯದಿಂದ ಸಂಸದ; ಅಥವಾ ಒಟ್ಟು ಅಸೆಂಬ್ಲಿ ಸ್ಥಾನಗಳ ಶೇಕಡಾ ಮೂರು ಅಥವಾ ಮೂರು ಸ್ಥಾನಗಳು (ಯಾವುದು ಹೆಚ್ಚು); ಅಥವಾ ಪ್ರತಿ 25 ಲೋಕಸಭಾ ಸ್ಥಾನಗಳಲ್ಲಿ ಒಬ್ಬ ಸಂಸದ ಅಥವಾ ರಾಜ್ಯದಿಂದ ಲೋಕಸಭೆ ಚುನಾವಣೆಯ ಸಮಯದಲ್ಲಿ ಅಥವಾ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಒಟ್ಟು ಮತಗಳ ಶೇಕಡಾ ಎಂಟುರಷ್ಟನ್ನು ಅದು ಪಡೆದಿರಬೇಕು.
ಆಪ್ ಸಾಧನೆ ಏನು?
ಮೊತ್ತಮೊದಲ ಪ್ರಯತ್ನವೆಂಬಂತೆ 2013ರಲ್ಲಿ ದೆಹಲಿ ವಿಧಾನಸಭೆಗೆ ನಡೆದಿದ್ದ ಚುನಾವಣೆಯಲ್ಲಿ 70 ಕ್ಷೇತ್ರಗಳ ಪೈಕಿ 28 ಕ್ಷೇತ್ರಗಳಲ್ಲಿ ಗೆದ್ದಿದ್ದರು ಮತ್ತು ಅಲ್ಪಮತದ ಸರ್ಕಾರ ಸ್ಥಾಪಿಸಿದ್ದರು. 2014ರ ಫೆಬ್ರವರಿಯಲ್ಲಿ ದೆಹಲಿ ವಿಧಾನಸಭೆಯಲ್ಲಿ ಜನಲೋಕಪಾಲ ವಿಧೇಯಕ ಅಂಗೀಕರಿಸಲು ಸಾಧ್ಯವಾಗದ್ದಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಚುನಾವಣೆಯಲ್ಲಿ ಆಪ್ ಅಭೂತ ಪೂರ್ವವಾಗಿ ಜಯ ಸಾಧಿಸಿತ್ತು ಮತ್ತು 2019ರ ವಿಧಾನಸಭೆ ಚುನಾವಣೆಯಲ್ಲಿಯೂ ಗೆದ್ದು ಅಧಿಕಾರ ಉಳಿಸಿಕೊಂಡಿದ್ದರು.
ಇದನ್ನೂ ಓದಿ:ಸೋನಿಯಾ ಕೋಟೆಯಲ್ಲಿ ಕಮಲ ಬಾವುಟ; ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಅದಿತಿ ಸಿಂಗ್ ಗೆ ಜಯ!
2017ರಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ 20 ಕ್ಷೇತ್ರಗಳಲ್ಲಿ ಗೆದ್ದು ಪ್ರಧಾನ ಪ್ರತಿಪಕ್ಷವಾಯಿತು. ಇದೀಗ ಪಂಜಾಬ್ ಚುನಾವಣೆಯಲ್ಲಿ ಗೆದ್ದು ಅಧಿಕಾರ ವಹಿಸಿಕೊಂಡಿದೆ. ಸೂರತ್ ಪಾಲಿಕೆ ಚುನಾವಣೆ ಮತ್ತು ಚಂಡೀಗಡ ಪಾಲಿಕೆ ಚುನಾವಣೆಯಲ್ಲೂ ಕೇಜ್ರಿವಾಲ್ ಪಕ್ಷ ಗಣನೀಯ ಸಾಧನೆ ಮಾಡಿದೆ.
2017ರಿಂದ 2022ರ ವರೆಗೆ ಕರ್ನಾಟಕ ಸೇರಿ ದಂತೆ ಪ್ರಮುಖ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಆಪ್ ಸ್ಪರ್ಧಿಸಿ ಸೋತಿದೆ. ಪ್ರಸಕ್ತ ಸಾಲಿನ ಗೋವಾ ವಿಧಾನಸಭೆ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲಿ ಗೆದ್ದಿದೆ. ವರ್ಷಾಂತ್ಯಕ್ಕೆ ನಡೆಯಲಿರುವ ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆಯಲ್ಲೂ ಆಪ್ ಅದೃಷ್ಟ ಪರೀಕ್ಷಿಸಿಕೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.