Goa: ನೇಪಾಳ ಮೇಯರ್ ಪುತ್ರಿ, ಓಶೋ ಅನುಯಾಯಿ ಗೋವಾದಲ್ಲಿ ನಾಪತ್ತೆ
Team Udayavani, Mar 27, 2024, 10:05 AM IST
ಪಣಜಿ: ನೇಪಾಳ ಮೇಯರ್ ಪುತ್ರಿ ಆರತಿ ಹಮಾಲ್ (36ವರ್ಷ) ಗೋವಾದಲ್ಲಿ ನಾಪತ್ತೆಯಾಗಿರುವುದಾಗಿ ಆಕೆಯ ತಂದೆ ದೂರಿನಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:Sena ಉದ್ಧವ್ ಪಕ್ಷದ 16 ಅಭ್ಯರ್ಥಿಗಳ ಲಿಸ್ಟ್ ಪ್ರಕಟ: ಮಾಜಿ ಕೇಂದ್ರ ಸಚಿವರು ಕಣಕ್ಕೆ
ಓಶೋ ಧ್ಯಾನಕೇಂದ್ರದ ಅನುಯಾಯಿಯಾಗಿರುವ ಆರತಿ ಕಳೆದ ಕೆಲವು ತಿಂಗಳಿನಿಂದ ಗೋವಾದಲ್ಲಿ ವಾಸ್ತವ್ಯ ಹೂಡಿದ್ದು, ಆಕೆ ಕೊನೆಯದಾಗಿ ಕಾಣಿಸಿಕೊಂಡಿದ್ದು ಸೋಮವಾರ ರಾತ್ರಿ ಎಂಬುದಾಗಿ ವರದಿ ವಿವರಿಸಿದೆ.
ಸೋಮವಾರ ರಾತ್ರಿ 9.30ರ ಹೊತ್ತಿಗೆ ಅಶ್ವೇಮ್ ಸೇತುವೆ ಸಮೀಪ ಆರತಿ ಕೊನೆಯದಾಗಿ ಕಾಣಿಸಿಕೊಂಡಿದ್ದಳು ಎಂದು ನೇಪಾಳಿ ದೈನಿಕ ದ ಹಿಮಾಲಯನ್ ಟೈಮ್ಸ್ ವರದಿ ಮಾಡಿದೆ.
ಧಂಗಾಧಿ ಉಪನಗರದ ಮೇಯರ್ ಆಗಿರುವ ಗೋಪಾಲ್ ಹಮಾಲ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿಷಯವನ್ನು ಹಂಚಿಕೊಂಡಿದ್ದು, ತಮ್ಮ ಹಿರಿಯ ಪುತ್ರಿಯನ್ನು ಪತ್ತೆಹಚ್ಚಲು ನೆರವಾಗುವಂತೆ ಮನವಿ ಮಾಡಿಕೊಂಡಿದ್ದಾರೆ.
“ನನ್ನ ಹಿರಿಯ ಪುತ್ರಿ ಆರತಿ ಕಳೆದ ಕೆಲವು ತಿಂಗಳಿನಿಂದ ಗೋವಾದಲ್ಲಿ ವಾಸ್ತವ್ಯ ಹೂಡಿದ್ದಳು. ಆದರೆ ಕಳೆದ ರಾತ್ರಿಯಿಂದ ಆಕೆ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಆಕೆಯ ಗೆಳೆಯರಿಂದ ಸಂದೇಶ ಬಂದಿದ್ದು, ದಯವಿಟ್ಟು ನನ್ನ ಮಗಳನ್ನು ಪತ್ತೆಹಚ್ಚಲು ನೆರವು ನೀಡಿ” ಎಂದು ಗೋಪಾಲ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಮಗಳು ಆರತಿಯ ಬಗ್ಗೆ ವಿಚಾರಿಸಲು ನನ್ನ ಕಿರಿಯ ಮಗಳು ಅರ್ಝೂ ಮತ್ತು ಅಳಿಯ ಗೋವಾಕ್ಕೆ ತೆರಳಿದ್ದಾರೆ. ಒಂದು ವೇಳೆ ಆಕೆಯ ಬಗ್ಗೆ ಮಾಹಿತಿ ಸಿಕ್ಕಿದ್ದಲ್ಲಿ ವಿಷಯ ತಿಳಿಸಲು ಸಾಮಾಜಿಕ ಜಾಲತಾಣದಲ್ಲಿ ಮೂರು ಮೊಬೈಲ್ ನಂಬರ್ ಅನ್ನು ಶೇರ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election:ಕೈತಪ್ಪಿದ ಟಿಕೆಟ್-ಶಿಂಧೆ ಸೇನಾ ಶಾಸಕ ವಂಗಾ ನಾಪತ್ತೆ, ಪೊಲೀಸರ ಶೋಧ!
Maharashtra Assembly Elections: 23 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
Zeeshan Siddique: ಬಾಬಾ ಸಿದ್ದಿಕಿ ಪುತ್ರ ಝೀಶಾನ್ ಸಿದ್ದಿಕಿ ಎನ್‌ಸಿಪಿಗೆ ಸೇರ್ಪಡೆ…
ಕಾನೂನು ಸಮರದಲ್ಲಿ ಪವಾರ್ ಗೆ ಕೈ ಕೊಟ್ಟ “ಗಡಿಯಾರ”, ಸುಪ್ರೀಂನಲ್ಲಿ ಅಜಿತ್ ಬಣಕ್ಕೆ ಮೇಲುಗೈ
Wayanad Bypolls: ಚುನಾವಣ ರಾಜಕಾರಣದ ಅಖಾಡಕ್ಕಿಳಿದ ಪ್ರಿಯಾಂಕಾ, ನಾಮಪತ್ರ ಸಲ್ಲಿಕೆ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.