ಹೊರೆಯಾಗಿರುವ ನಿತೀಶ್ ಕುಮಾರ್ ಗೆ ಬಿಜೆಪಿ ಬಾಗಿಲು ಮುಚ್ಚಿದೆ: ಸುಶೀಲ್ ಮೋದಿ
ಎನ್‌ಡಿಎ ಸೇರುವ ಕುರಿತು ಅಠವಳೆ ಹೇಳಿಕೆಗೆ ಬಿಹಾರ ಬಿಜೆಪಿ ಹಿರಿಯ ನಾಯಕನ ಪ್ರತಿಕ್ರಿಯೆ
Team Udayavani, Jul 30, 2023, 10:40 PM IST
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್‌ಡಿಎಗೆ ಮರಳುವ ಕುರಿತು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಬಿಜೆಪಿ ಹಿರಿಯ ನಾಯಕ, ಸಂಸದ ಸುಶೀಲ್ ಮೋದಿ ಭಾನುವಾರ ಹೇಳಿದ್ದಾರೆ.
ಬಿಹಾರ ಸಿಎಂಗೆ ಬಿಜೆಪಿ ತನ್ನ ಎಲ್ಲಾ ಬಾಗಿಲುಗಳನ್ನು ಮುಚ್ಚಿದೆ. ಅವರು ಬರಲು ಬಯಸಿದರೂ ಬಿಜೆಪಿ ಸಿದ್ಧವಿಲ್ಲ, ರಾಮದಾಸ್ ಅಠವಳೆ ಬಿಜೆಪಿ ವಕ್ತಾರರೂ ಅಲ್ಲ ಅಥವಾ ಎನ್‌ಡಿಎ ವಕ್ತಾರರೂ ಅಲ್ಲ, ಅವರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ) ಪಕ್ಷದ ನಾಯಕ ಮತ್ತು ಕೇಂದ್ರ ಸಚಿವ, ಇದು ಅವರ ವೈಯಕ್ತಿಕ ಅಭಿಪ್ರಾಯವಾಗಿರಬೇಕು ಆದರೆ ಬಿಜೆಪಿ ತನ್ನ ಎಲ್ಲಾ ಬಾಗಿಲುಗಳನ್ನು ಮುಚ್ಚಿದೆ.” ಎಂದು ಬಿಹಾರ ಮಾಜಿ ಡಿಸಿಎಂ ಸುಶೀಲ್ ಮೋದಿ ಹೇಳಿದ್ದಾರೆ.
ನಿತೀಶ್ ಕುಮಾರ್ ಅವರು ಹೊರೆಯಾಗಿದ್ದಾರೆ. ಆರ್‌ಜೆಡಿ ಇದನ್ನು ಹೆಚ್ಚು ಕಾಲ ಸಹಿಸಿಕೊಳ್ಳುವುದು ಅನುಮಾನ. ಮತಗಳನ್ನು ವರ್ಗಾವಣೆ ಮಾಡುವ ಅವರ ಸಾಮರ್ಥ್ಯ ಕೊನೆಗೊಂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಬರದಿದ್ದರೆ ನಿತೀಶ್ ಕುಮಾರ್ ಪಕ್ಷ 44 ಸ್ಥಾನಗಳನ್ನು ಗೆಲ್ಲುತ್ತಿರಲಿಲ್ಲ, ರಾಜಕೀಯದಲ್ಲಿ, ಮತಗಳ ಬಲವಿದ್ದರೆ ನೀವು ಮುಖ್ಯ, ಇಲ್ಲದಿದ್ದರೆ, ನಿಮಗೆ ಯಾವುದೇ ಪ್ರಾಮುಖ್ಯತೆ ಇಲ್ಲ”ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Rajasthan: ಚುನಾವಣ ಅಧಿಕಾರಿ ಮೇಲೆ ಹಲ್ಲೆ; ಪ್ರತಿಭಟನೆ ನಡುವೆ ನರೇಶ್ ಮೀನಾ ಬಂಧನ!
Constitution: ಪ್ರಧಾನಿ ಸಂವಿಧಾನ ಓದಿಲ್ಲ, ಇದಕ್ಕೆ ನಾನು ಗ್ಯಾರಂಟಿ: ರಾಹುಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.