ಪಂಜಾಬ್; ಗೋ ಬ್ಯಾಕ್ ಮೋದಿ ಭಿತ್ತಿಪತ್ರ ಪ್ರದರ್ಶನಕ್ಕೆ ಮುಂದಾದ ರೈತ ಸಂಘಟನೆ
ಮೋದಿ ರ್ಯಾಲಿ ಗೆ ಪ್ರತಿಭಟನೆ ಬಿಸಿ
Team Udayavani, Jan 4, 2022, 4:40 PM IST
ಅಮೃತಸರ:ಪ್ರಧಾನಿ ನರೇಂದ್ರ ಮೋದಿ ಯವರಿಗೆ ರೈತ ಪ್ರತಿಭಟನೆಯ ಬಿಸಿ ಸದ್ಯಕ್ಕೆ ತಪ್ಪುವ ಲಕ್ಷಣ ಕಾಣುತ್ತಿಲ್ಲ. ದಿಲ್ಲಿಯಲ್ಲಿ ವರ್ಷ ಪರ್ಯಂತ ಪ್ರತಿಭಟನೆ ಎದುರಿಸಿದ್ದ ಮೋದಿಯವರಿಗೆ ಪಂಜಾಬ್ ಚುನಾವಣೆ ಸಂದರ್ಭದಲ್ಲೂ ರೈತರೊಂದಿಗೆ ವಿರೋಧದ ಮುಖಾಮುಖಿ ಅನಿವಾರ್ಯವಾಗಿದೆ.
ಹೌದು. ಪಂಜಾಬ್ ಚುನಾವಣೆ ಹಿನ್ನಲೆಯಲ್ಲಿ ಫಿರೋಜ್ ಪುರದಲ್ಲಿ ಪ್ರಧಾನಿ ಮೋದಿ ಭಾಗವಹಿಸುವ ರ್ಯಾಲಿ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲು 9 ರೈತಪರ ಸಂಘಟನೆಗಳು ನಿರ್ಧರಿಸಿವೆ. ಜ 5ರಂದು ಮಜ್ದೂರ್ ಸಂಘರ್ಷ ಸಮಿತಿ, ಕ್ರಾಂತಿಕಾರಿ ಕಿಸಾನ್ ಯೂನಿಯನ್ ಸೇರಿದಂತೆ 9 ಸಂಘಟನೆಗಳು ಪ್ರತಿಭಟನೆ ನಡೆಸುವುದಾಗಿ ಘೋಷಿಸಿವೆ.
ಕೇಂದ್ರ ಸರಕಾರ ತಮ್ಮ ಮೂರು ಪ್ರಧಾನ ಬೇಡಿಕೆ ಈಡೇರಿಸಿಲ್ಲ. ಹೀಗಾಗಿ ” ಗೋ ಬ್ಯಾಕ್ ಮೋದಿ” ಭಿತ್ತಿಪತ್ರ ಪ್ರದರ್ಶಿಸಲು ನಿರ್ಧರಿಸಲಾಗಿದೆ. ದಿಲ್ಲಿ ಪ್ರತಿಭಟನೆ ವೇಳೆ ಮೃತಪಟ್ಟ ರೈತ ಕುಟುಂಬಕ್ಕೆ 1 ಕೋಟಿ ರೂ. ಎಕ್ಸ್ ಗ್ರೇಷಿಯಾ ನೀಡುವುದು, ಕೇಂದ್ರ ಕೃಷಿ ಇಲಾಖೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ಕೈ ಬಿಡುವುದು ಹಾಗೂ ಬಂಧನಕ್ಕೆ ಒಳಗಾದ ರೈತರ ಮೇಲಿನ ಪ್ರಕರಣ ಕೈ ಬಿಡಬೇಕೆಂಬುದು ಪ್ರಧಾನ ಬೇಡಿಕೆಯಾಗಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಬಿಜೆಪಿ ಘಟಕ, ಇದು ರಾಜಕೀಯ ಪ್ರೇರಿತ ಪ್ರತಿಭಟನೆ. ಕಾಂಗ್ರೆಸ್ ಒಳಗೊಂಡಂತೆ ಎಲ್ಲ ಪ್ರತಿಪಕ್ಷಗಳು ಈ ಪ್ರತಿಭಟನೆಗೆ ರಹಸ್ಯ ಬೆಂಬಲ ನೀಡಿವೆ ಎಂದು ಸಂಸದ ದುಷ್ಯಂತ ಕುಮಾರ್ ಗೌತಮ್ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.