ಪಂಜಾಬ್‌ನಲ್ಲಿ ಇಂದು ಅಗ್ನಿಪರೀಕ್ಷೆ; ಕಾಂಗ್ರೆಸ್‌, ಆಪ್‌, ಬಿಜೆಪಿಗೆ ಸವಾಲು

ಉತ್ತರ ಪ್ರದೇಶದಲ್ಲಿ 3ನೇ ಹಂತದ ಮತದಾನ

Team Udayavani, Feb 20, 2022, 6:15 AM IST

ಪಂಜಾಬ್‌ನಲ್ಲಿ ಇಂದು ಅಗ್ನಿಪರೀಕ್ಷೆ; ಕಾಂಗ್ರೆಸ್‌, ಆಪ್‌, ಬಿಜೆಪಿಗೆ ಸವಾಲು

ಲಕ್ನೋ/ಚಂಡೀಗಢ‌: ಆಮ್‌ ಆದ್ಮಿ ಪಾರ್ಟಿ, ಕಾಂಗ್ರೆಸ್‌ ನಡುವಿನ ನೇರ ಹಣಾಹಣಿ ಏರ್ಪಟ್ಟಿರುವ ಪಂಜಾಬ್‌ ವಿಧಾನಸಭೆಯ ಮತದಾನ ಪ್ರಕ್ರಿಯೆ ಒಂದೇ ಹಂತದಲ್ಲಿ ರವಿವಾರ (ಫೆ. 20) ನಡೆಯಲಿದೆ. ಇದೇ ವೇಳೆ, ಉತ್ತರ ಪ್ರದೇಶದಲ್ಲಿ 3ನೇ ಹಂತದ ಮತದಾನ ನಡೆಯಲಿದೆ.

ಪಂಜಾಬ್‌ನಲ್ಲಿ ಒಟ್ಟು 117 ವಿಧಾನಸಭಾ ಕ್ಷೇತ್ರಗಳಿವೆ. ಕಣದಲ್ಲಿ ಒಟ್ಟು 1304 ಅಭ್ಯರ್ಥಿ ಗಳು ಇದ್ದು, ಅವರಲ್ಲಿ 93 ಮಹಿಳೆಯರು, 1,209 ಪುರು ಷರು ಹಾಗೂ ಇಬ್ಬರು ದ್ವಿಲಿಂಗಿಗಳು ಇದ್ದಾರೆ. 2.14 ಕೋಟಿ ಮತದಾರರು ಈ ಅಭ್ಯರ್ಥಿಗಳ ಮುಂದಿನ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

ಪಂಜಾಬ್‌ ಚುನಾವಣ ಆಯೋಗವು, ಮತದಾನಕ್ಕಾಗಿ 24,689 ಬೂತ್‌ಗಳನ್ನು ನಿಗದಿಪಡಿಸಿದೆ. ಜತೆೆಗೆ, 51 ಆ್ಯಕ್ಸಿಲರಿ ಮತದಾನ ಕೇಂದ್ರಗಳನ್ನೂ ರಚಿಸಲಾಗಿದೆ.

ಕಾಂಗ್ರೆಸ್‌ ಪಕ್ಷವು ಮತ್ತೂಂದು ಬಾರಿಗೆ ಅಧಿಕಾರ ಪಡೆಯಲು ಸರ್ಕಸ್‌ ಮಾಡುತ್ತಿರುವಾಗಲೇ ಆ ಪಕ್ಷಕ್ಕೆ ಆಮ್‌ ಆದ್ಮಿ ಪಕ್ಷ (ಆಪ್‌) ಸಡ್ಡು ಹೊಡೆದಿದೆ. ಇನ್ನು ಬಿಜೆಪಿಯು ಈ ಬಾರಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕ್ಯಾ| ಅಮರೀಂದರ್‌ ಸಿಂಗ್‌ ಪಂಜಾಬ್‌ ಲೋಕ ಕಾಂಗ್ರೆಸ್‌ (ಪಿಎಲ್‌ಸಿ) ಜತೆಗೂಡಿ ಹೊಸ ಪ್ರಯೋಗಕ್ಕಿಳಿದಿದೆ. ಶಿರೋಮಣಿ ಅಕಾಲಿ ದಳ ಕೂಡ ಬಹುಜನ ಸಮಾಜವಾದಿ ಪಾರ್ಟಿ (ಬಿಎಸ್‌ಪಿ) ಜತೆೆಗೆ ಕಣಕ್ಕಿಳಿದಿದೆ.

ಯಾದವ ಭದ್ರಕೋಟೆಯಲ್ಲಿ ಮತದಾನ: ಉತ್ತರ ಪ್ರದೇಶ ಚುನಾವಣೆಯ 3ನೇ ಹಂತದ ಮತದಾನಕ್ಕೆ ರಾಜ್ಯದ ಪ್ರಬಲ ಸಮುದಾಯವಾದ “ಯಾದವರ ಭದ್ರಕೋಟೆ’ ಸಜ್ಜಾಗಿದೆ. ಬಂದೇಲ್‌ಖಾಂಡ್‌ ಪ್ರಾಂತ್ಯ ಹಾಗೂ ಅವಧ್‌ ಪ್ರಾಂತ್ಯದ ವರೆಗಿನ ಒಟ್ಟು 16 ಜಿಲ್ಲೆಗಳ 59 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಇವುಗಳಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್‌ ಅವರು ಕಣಕ್ಕಿಳಿದಿರುವ ಮೈನ್‌ಪುರಿ ಪ್ರಮುಖವಾದದ್ದು.

ಈ ಹಂತದಲ್ಲಿ ಉತ್ತರ ಪ್ರದೇಶದ ಪಶ್ಚಿಮ ಭಾಗದ ಐದು ಜಿಲ್ಲೆಗಳಲ್ಲೂ ಮತದಾನದ ವ್ಯಾಪ್ತಿಗೆ ಬರುತ್ತದೆ. ಫಿರೋಜಾ­ಬಾದ್‌, ಮೈನ್‌ಪುರಿ, ಇಟಾ, ಹತ್ರಾಸ್‌, ಅವಧ್‌ ಪ್ರಾಂತ್ಯದ ಆರು ಜಿಲ್ಲೆಗಳು – ಕಾನ್ಪುರ, ಕಾನ್ಪುರ ಡೆಹಾಟ್‌, ಔರಯ್ಯ, ಕನೌ°ಜ್‌, ಇಟಾವಾ, ಫಾರೂಕಾಬಾದ್‌, ಬುಂದೇಲ್‌ಖಂಡ್‌ ಪ್ರಾಂತ್ಯದ ಝಾನ್ಸಿ, ಜಲೌನ್‌, ಲಲಿತ್‌ಪುರ್‌, ಹಮೀರ್‌ಪುರ್‌, ಮಹೋಬಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಎಂಟು ಜಿಲ್ಲೆಗಳಲ್ಲಿ ಯಾದವರ ಪ್ರಾಬಲ್ಯ: ಮೈನ್‌ಪುರಿ, ಇಟಾವಾ, ಫಿರೋಜಾಬಾದ್‌, , ಇಟಾ, ಫಾರೂಕಾಬಾದ್‌, ಕನೌ°ಜ್‌ ಹಾಗೂ ಔರಯ್ನಾ ಕ್ಷೇತ್ರಗಳಲ್ಲಿ ಯಾದವ ಸಮುದಾಯದ ಪ್ರಾಬಲ್ಯ ಹೆಚ್ಚು. ಇಲ್ಲಿ ಹಿಂದಿನಿಂದಲೂ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ರವರ ಪ್ರಭಾವ ದಟ್ಟವಾಗಿತ್ತು. 2017ರಲ್ಲಿ ಬಿಜೆಪಿಯು ಇಲ್ಲಿ ಲಗ್ಗೆಯಿಡುವಲ್ಲಿ ಸಫ‌ಲವಾಗಿ, ಭರ್ಜರಿ ಯಶಸ್ಸು ಕಂಡಿತ್ತು. 29 ಸ್ಥಾನಗಳಲ್ಲಿ 23 ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದರೆ, ಉಳಿದ ಆರು ಸ್ಥಾನಗಳಲ್ಲಿ ಸಮಾಜವಾದಿ ಪಕ್ಷ ಜಯ ಸಾಧಿಸಿತ್ತು. ಆದರೆ 2017ರ ಚುನಾವಣೆಯ ಪರಿಸ್ಥಿತಿಗೂ ಈಗ ನಡೆಯುತ್ತಿರುವ ಪರಿಸ್ಥಿತಿಯಲ್ಲಿ ವ್ಯತ್ಯಾಸವಿದೆ. ಈ ಬಾರಿ ಅಖಿಲೇಶ್ ಯಾದವ್‌ ಕಣಕ್ಕಿಳಿದಿರುವುದು ಇಲ್ಲಿನ ಯಾದವರ ಸಮುದಾಯದಲ್ಲಿ ಹೊಸ ಸಂಚಲನ ಉಂಟು ಮಾಡಿದೆ ಎನ್ನಲಾಗಿದೆ. ಹಾಗಾಗಿ ಈ ಪ್ರಾಂತ್ಯದಲ್ಲಿ ಬಿಜೆಪಿ-ಸಮಾಜವಾದಿಯಲ್ಲಿ ಯಾರಿಗೆ ಜನರ ಶ್ರೀರಕ್ಷೆ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಚನ್ನಿ ವಿರುದ್ಧ ಪ್ರಕರಣ
ಪಂಜಾಬ್‌ನಲ್ಲಿ ರವಿವಾರ ಮತದಾನ ನಡೆಯಲಿರುವ ಹಿನ್ನೆಲೆ ಯಲ್ಲಿ ಶುಕ್ರವಾರ ಸಂಜೆ ಅಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಆದರೆ ಪ್ರಚಾರಕ್ಕೆ ತೆರೆ ಬಿದ್ದ ಅನಂತರವೂ ತಮ್ಮ ಪಕ್ಷದ ಅಭ್ಯರ್ಥಿಯೊಬ್ಬರ ಪರವಾಗಿ ಮತಯಾಚನೆ ಮಾಡಿದ ಆರೋಪದಡಿ ಪಂಜಾಬ್‌ ಸಿಎಂ ಚರಣ್‌ಜಿತ್‌ ಚನ್ನಿ ವಿರುದ್ಧ ಪ್ರಕರಣ ದಾಖಲಾಗಿದೆ.

ನಿಯಮಗಳ ಪ್ರಕಾರ, ಶುಕ್ರವಾರ ಸಂಜೆ 6 ಗಂಟೆಯವರೆಗೆ ಮಾತ್ರ ಬಹಿರಂಗ ಪ್ರಚಾರಕ್ಕೆ ಅವಕಾಶವಿತ್ತು. 6 ಗಂಟೆಯ ಅನಂತರ ಯಾರೂ ಪ್ರಚಾರ ನಡೆಸಕೂಡ ದೆಂದು ಚುನಾವಣ ಆಯೋಗ ಗುರುವಾರವೇ ಪ್ರಕಟನೆ ಹೊರಡಿಸಿತ್ತು. ಆದರೆ ಮಾನ್ಸಾ ಕ್ಷೇತ್ರದಲ್ಲಿ ಚುನಾವಣೆಗೆ ಇಳಿದಿರುವ ಕಾಂಗ್ರೆಸ್‌ ಅಭ್ಯರ್ಥಿ ಸಿಧು ಮೂಸೆ ವಾಲಾ ಅವರ ಪರವಾಗಿ ಚನ್ನಿಯವರು ಪಾದಯಾತ್ರೆ ನಡೆಸಿದ್ದಾರೆ. ಅವಧಿ ಮೀರಿದ್ದರೂ ಮನೆಮನೆ ಪ್ರಚಾರ ನಡೆಸಿದ್ದಾರೆ ಎನ್ನಲಾಗಿದೆ.

ಸಿಧು ವಿರುದ್ಧ ಪ್ರಕರಣ: 2021ರ ಡಿಸೆಂಬರ್‌ನಲ್ಲಿ ಪಂಜಾಬ್‌ ಪೊಲೀಸರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ, ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ವಿರುದ್ಧ, ಚಂಡೀಗಢದ ಪೊಲೀಸ್‌ ಉಪವರಿಷ್ಠಾಧಿಕಾರಿ ದಿಲೆÏàರ್‌ ಸಿಂಗ್‌ ಚಾಂದೇಲ್‌ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಚಂಡೀಗಢದ ಸ್ಥಳೀಯ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸುಲ್ತಾನ್‌ಪುರ್‌ ಲೋಧಿಯಲ್ಲಿ ನಡೆದಿದ್ದ ಚುನಾವಣ ರ್ಯಾಲಿ ಯೊಂದರಲ್ಲಿ ಸಿಧು, ಪಂಜಾಬ್‌ ಪೊಲೀಸರು ಪ್ಯಾಂಟ್‌ ಒದ್ದೆಯಾಗುತ್ತೆ ಎಂದು ಲೇವಡಿ ಮಾಡಿದ್ದರು. ಅದು ವಿವಾದಕ್ಕೆ ಕಾರಣವಾಗಿತ್ತು. ಈವರೆಗೂ ಅವರು ಕ್ಷಮೆ ಯಾಚಿಸದ ಹಿನ್ನೆಲೆ ಯಲ್ಲಿ ಚಾಂದೇಲ್‌ ಅವರು ಪ್ರಕರಣ ದಾಖಲಿಸಿದ್ದಾರೆ.

ಮಣಿಪುರ: ಅಭ್ಯರ್ಥಿಯ ತಂದೆ ಹತ್ಯೆ
ಮಣಿಪುರದ ನ್ಯಾಶ‌ನಲ್‌ ಪೀಪಲ್ಸ್‌ ಪಾರ್ಟಿ (ಎನ್‌ಪಿಪಿ) ಅಭ್ಯರ್ಥಿ ಎಲ್‌. ಸಂಜಯ್‌ರವರ ತಂದೆ ಶಾಮ್‌ಜೈ ಸಿಂಗ್‌ ಎಂಬವರನ್ನು ಶಂಕಿತ ಉಗ್ರರು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.ಕ್ಷೇತ್ರವೊಂದರಲ್ಲಿ ತಮ್ಮ ಪುತ್ರನ ಪರವಾಗಿ ಪ್ರಚಾರ ನಡೆಸುತ್ತಿರುವಾಗಲೇ ಈ ಘಟನೆ ನಡೆದಿದೆ. ಸಿಂಗ್‌ರವರ ಬಲಭುಜಕ್ಕೆ ಗುಂಡು ತಾಗಿತ್ತು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫ‌ಲಿಸದೇ ಅವರು ಕೊನೊಯುಸಿರೆಳೆದಿದ್ದಾರೆ. ಈ ಹಿಂದೆ ಬಿಜೆಪಿಯಲ್ಲಿದ್ದ ಸಂಜಯ್‌, ಇತ್ತೀಚೆಗೆ ಎನ್‌ಪಿಪಿಗೆ ನೆಗೆದಿದ್ದರು.

“ಪ್ರಣಾಳಿಕೆ ಆಶ್ವಾಸನೆ ಈಡೇರಿಕೆ ಕಡ್ಡಾಯ ಮಾಡಿ’
ಚುನಾವಣ ಸಂದರ್ಭಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು ಬಿಡುಗಡೆ ಮಾಡುವ ಪ್ರಣಾಳಿಕೆಗಳಲ್ಲಿನ ಎಲ್ಲ ಅಂಶಗಳು ಸಂಪೂರ್ಣವಾಗಿ ಅನುಷ್ಠಾನಗೊಳಿಸುವುದನ್ನು ಕಾನೂನುಬದ್ಧ ಮಾಡಬೇಕು. ಜತೆೆಗೆ ಪ್ರಣಾಳಿಕೆಯಲ್ಲಿನ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ವಿಫ‌ಲವಾಗುವ ರಾಜಕೀಯ ಪಕ್ಷಗಳ ಹೆಸರು ಮತ್ತು ಚಿಹ್ನೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಕೇಂದ್ರ ಸರಕಾರ ಹಾಗೂ ಕೇಂದ್ರ ಚುನಾವಣ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ವಕೀಲ ಅಶ್ವಿ‌ನಿ ಕುಮಾರ್‌ ಉಪಾಧ್ಯಾಯ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.