![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Apr 28, 2022, 7:35 PM IST
ವಿಜಯಪುರ : ಬರುವ ವಿಧಾನಸಭೆ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ನಾಗಠಾಣ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಸಚಿವ ಕಾರಜೋಳ ಅವರ ಜೊತೆ ಚರ್ಚಿಸುತ್ತೇನೆ. ಪಕ್ಷದ ವರಿಷ್ಠರು ಸಮ್ಮತಿಸಿದರೆ ರಾಜ್ಯ ರಾಜಕಾರಣಕ್ಕೂ ಬರುತ್ತೇನೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಇಂಗಿತ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪಕ್ಷ ಲೋಕಸಭೆಗೆ ಸ್ಪರ್ಧಿಸು ಎಂದರೆ ಅಲ್ಲೇ ಮುಂದುವರೆಯುತ್ತೇನೆ. ಬೇಡ ಎಂದರೆ ಸಕ್ರಿಯ ರಾಜಕೀಯದಿಂದ ದೂರ ಸರಿದು ತೋಟದಲ್ಲಿ ತಣ್ಣಗೆ ಇದ್ದು ಬಿಡುತ್ತೇನೆ ಎಂದು ಸಮಜಾಯಿಷಿ ನೀಡಿದರು.
ಇದನ್ನೂ ಓದಿ: ಶೇ.23 ರಷ್ಟಿರುವ ದಲಿತರು ಸಿಎಂ ಆಗಬಾರದಾ : ಜಿಗಜಿಣಗಿ ಪುನರುಚ್ಛಾರ
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಾಹೇಬ ನನ್ನ ಸಹೋದರ ಇದ್ದಂತೆ. ನಮ್ಮ ಸಮಾಜದದ ಓರ್ವ ವ್ಯಕ್ತಿ ರಾಜ್ಯ ರಾಜಕಾರಣದಲ್ಲಿ ಬೆಳೆಯಲಿ ಎಂದೇ ನಾನು ರಾಜ್ಯ ರಾಜಕಾರಣಕ್ಕೆ ತಲೆ ಎತ್ತಿಯೂ ನೋಡಿರಲಿಲ್ಲ.ಸ್ಟೋರ್ ಕೀಪರ್ ಆಗಿದ್ದ ನಮ್ಮ ಸಮಾಜದ ವ್ಯಕ್ತಿಯೊಬ್ಬ ರಾಜಕೀಯವಾಗಿ ಬೆಳೆದು ನಿಂತಿದ್ದಾರೆ ಎಂದರೆ ಅದೇ ನನಗೆ ದೊಡ್ಡ ಖುಷಿ. ಹೀಗಾಗಿ ಕಾರಜೋಳ ಹಾಗೂ ನನ್ನ ನಡುವೆ ಯಾವ ಭಿನ್ನಾಭಿಪ್ರಾಯವಿಲ್ಲ. ಕೆಲವರು ಸುಖಾಸುಮ್ಮನೆ ಕಾರಜೋಳ-ಜಿಗಜಿಣಗಿ ಮಧ್ಯೆ ಸರಿ ಇಲ್ಲ ಎಂದೆಲ್ಲ ಕಲ್ಪಿತ ಸುದ್ದಿ ಹರಡಿಸುತ್ತಿದ್ದಾರೆ ಎಂದು ಸ್ಪಷ್ಟೀಕರಿಸಿದರು.
Karnataka BJP: ಬಿಜೆಪಿ ಹೈಕಮಾಂಡ್ ಗೆ ರಾಜ್ಯ ಬಿಜೆಪಿ ನುಂಗಲಾರದ ತುತ್ತು?
By Poll: ಅಯೋಧ್ಯೆ ಸೋಲಿಗೆ ಸೇಡು ತೀರಿಸಿಕೊಂಡ ಯೋಗಿ- ಮಿಲ್ಕಿಪುರ್ ಬಿಜೆಪಿ ತೆಕ್ಕೆಗೆ
Delhi Polls Results 2025:ದೆಹಲಿಯಲ್ಲಿ ಸತತ 3ನೇ ಅವಧಿಗೂ ಕಾಂಗ್ರೆಸ್ ಶೂನ್ಯ ಸಂಪಾದನೆ!?
Delhi Assembly Election: ದೆಹಲಿ ಮತ ಎಣಿಕೆ ಆರಂಭ; ಯಾರ ಪಾಲಾಗಲಿದೆ ದಿಲ್ಲಿಯ ಗದ್ದುಗೆ?
Delhi Election: ದಿಲ್ಲಿಯಲ್ಲಿಂದು ಮತದಾನ: ಕುರ್ಚಿಗಾಗಿ ತ್ರಿಕೋನ ಕದನ
You seem to have an Ad Blocker on.
To continue reading, please turn it off or whitelist Udayavani.