ಅಳಿಯಾ ಅಂದ್ರು ಹಾನ್ಗಲ್ ನಾಗೆ ಹಲ್ವಾ ಕೊಟ್ರಾ…
Team Udayavani, Nov 7, 2021, 9:19 AM IST
ಅಮಾಸೆ: ನಮ್‌ಸ್ಕಾರ ಸಾ…
ಚೇರ್ಮನ್ರು: ಏನ್ಲಾ ಅಮಾಸೆ ಆಳೆ ಕಾಣೆ
ಅಮಾಸೆ: ಎಲ್ಗೋಗುಮಾ ಸಾ… ಬೈ ಎಲೆಕ್ಸನ್ ರಿಸಲ್ಟ್ ಇತ್ತಲ್ವೇ ಅದ್ಕೆ ವಸಿ ರೌಂಡ್ ಹಾಕ್ಕಂಡ್ ಬರೂಮಾ ಅಂತಾ ಒಂಟೋಗಿದ್ನಿ.
ಚೇರ್ಮನ್ರು: ಹಾನ್ಗಲ್ ಯಾಕ್ಲಾ ಕಮ್ಲ ಪಾಲ್ಟಿ ಬರ್ಲಿಲ್ಲಾ
ಅಮಾಸೆ: ಮೊದ್ಲು ಹಾನಗಲ್ ನಮ್ದು, ಸಿಂದ್ಗಿ ಅವರ್ಧು ಅಂತಾ ಕೈ ಪಾಲ್ಟಿ ಹೈಕ್ಳು ಹೇಳ್ತಿದ್ರು. ಅದ್ಕೆ ಬುದ್ವಂತ ಬಸಣ್ಣೋರು ಹಾನಗಲ್ ನಾಗೆ ಟೆಂಟ್ ಹಾಕ್ಕಂಡು ನಾನ್ ನಿಮ್ ಊರ್ ಅಳಿಯಾ ಕಾಣಿ. ವಸಿ ಹೆಲ್ಪ್ ಪ್ಲೀಸ್ ಅಂತೇಳಿ ನೈನ್ ಡೇಸ್ ಅಲ್ಲೇ ಜಾಂಡಾ ಊರಿದ್ರು. ಇನ್‌ಚಾರ್ಜ್ ಡಾಕ್ಟ್ರು ಸುಧಾಕರಣ್ಣೋರು ಜತ್ಗೆ ಸೇರ್ಕೊಡು ವಸಿ ಅರೇಂಜ್‌ಮೆಂಟ್ ಮಾಡಿದ್ರು. ಆದ್ರೂ ಸಿನೇರಿಯೋ ಚೇಂಜ್ ಆಗೋಯ್ತು
ಚೇರ್ಮನ್ರು: ಬಸ್ವರಾಜ್ ಬೊಮ್ಮಾಯ್ ಸಾಹೇಬ್ರು ರಿಕ್ವೆಸ್ಟ್ ಮಾಡಿದ್ರು ಕೈ ಕೊಟ್ರಾ
ಅಮಾಸೆ: ಅಂಗಂತಾ ಕೈ ಲೀಡ್ರುಗ್ಳು ಪುಂಗ್‌ತಾವ್ರೆ. ಆದ್ರೆ ಗ್ರೌಂಡ್ ರಿಯಾಲಿಟಿ ಬ್ಯಾರೇ ಐತಿ. ಕಮ್ಲ ಪಾಲ್ಟಿನೋರೇ ಹಾನ್ಗಲ್ ಸೋತೋಗ್ಲಿ ಅಂತಾ ಕೋರ್ ಕಂಡಿದ್ರಂತೆ.
ಚೇರ್ಮನ್ರು: ಅಂಗಾ ಇಸ್ಯಾ
ಅಮಾಸೆ: ಹೌದೇಳಿ, ನೆಕ್ಸ್ಟ್ ಕಿತಾನೂ ನಾನೇ ಸಿಎಂ ಅಂತಾ ಬಸಣ್ಣೋರು ಹೇಳ್ದೇಟ್ಗೆ ಕಮ್ಲ ಪಾಲ್ಟಿನಾಗೆ ಶೇಕ್ ಆಗೋಬುಟ್ಟು, ಈಗ್ಲೆ ಮಾಂಜಾ ಕೊಡ್ಬೇಕು ಅಂತಾ ಅಂಡರ್‌ವರ್ಕ್ ಮಾಡಿದ್ರಂತೆ. ಲಾಸ್ಟ್ ತ್ರೀ ಡೇಸ್ ಕಮ್ಲ ಪಾಲ್ಟಿ ಕವರ್‌ನಾಗೆ ಪಿಂಕ್ ಕಲರ್ ನೋಟ್ ತೂರ್ಸಿ ಫುಲ್ ಮೀಲ್ಸ್ ಕೊಟ್ರಾ ಹಾನ್ಗಲ್ ನಾಗೆ ಹಲ್ವಾ ಕೊಟ್‌ಬುಟ್ರು
ಚೇರ್ಮನ್ರು: ತೆನೆ ಪಾಲ್ಟಿ ಸಿಂದ್ಗಿ ನಮ್ಗೆ ಅಂದ್ರಲ್ಲಾ
ಅಮಾಸೆ: ದೊಡ್‌ಗೌಡ್ರು, ಕುಮಾರಣ್ಣೋರು ಫುಲ್ ಎಫರ್ಟ್ಸ್ ಹಾಕಿದ್ರು. ಆದ್ರೂ ಕಮ್ಲ ಪಾಲ್ಟಿ ಡಾಲರ್ ಎದ್ರು ಲಾಸ್ಟ್ ನಾಗೆ ಡಲ್ ಆಗೋದ್ರಂತೆ. ಎಲ್ರೂ ಕಡ್ಗೆ ಕೈ ಪಾಲ್ಟಿಗೆ ಮಾಂಜಾ ಕೊಡ್ತೀವಿ ಅಂತಾ ಹೋದ್ರು ಎಲ್ರೂ ಕಡ್ಗೆ ದಬ್ಟಾಕಂಡ್ರು
ಚೇರ್ಮನ್ರು: ಕುಮಾರಣ್ಣೋರು ಸಿಂದ್ಗಿಮ್ಯಾಗೆ ಬರೋಸಾ ಇಟ್‌ಕಂಡಿದ್ರು ಅಲ್ವಾ
ಅಮಾಸೆ: ಹೌದೇಳಿ, ಆದ್ರೂ ಸಿದ್ರಾಮಣ್ಣೋರು ತೆನೆ ಪಾಲ್ಟಿ ನಿಂತಿರೋದೆ ಕಮ್ಲ ಗೆಲ್ಸೋಕೆ ಅಂತಾ ಪಸರ್ ಕೊಟ್ ಬುಟ್ರಾ. ಜಮೀರಣ್ಣೋರು ಸಾಬ್ರ ಗಲ್ಲಿನಾಗೆ ನೈಟ್ ರೌಂಡ್ಸ್ ಹಾಕ್‌ಬುಟ್ರಾ.
ಚೇರ್ಮನ್ರು: ಅದೇನ್ಲಾ ಸಿಎಮ್ಮು ಇಬ್ರಾಹಿಂ ಅವ್ರು ಯೂ ಟ್ಯೂಬ್‌ನಾಗೆ ರಿಕ್ವೆಸ್ಟ್ ಮಾಡಿದ್ರು
ಅಮಾಸೆ: ಹೌದೇಳಿ, ಅವ್ರು ಮನ್ಯಾಗೇ ಕುಂತ್ಕಂಡು, ಸಲಾಂವಲೇಕುಂ… ಅಂತಾ ಹುಕುಂ ಕೊಟ್ ಬಿಟ್ರಾ. ಆಮ್ಯಾಕೆ ಕುಮಾರಣ್ಣೋರ್ಗೆ ಫೋನ್ ಮಾಡ್‌ಬುಟ್ಟು ಯೂ ಟ್ಯೂಬ್ ಫೇಸ್‌ಬುಕ್‌ನಾಗೆ ಸ್ಟೇಟ್‌ಮೆಂಟ್ ರಿಲೀಸ್ ಮಾಡೀವ್ನಿ. ಸಾಬ್ರು ಯಾಮಾರಕ್ಕಿಲ್ಲಾ ನೋಡ್ತಿರಿ ಅಂತಾ ಹೇಳಿದ್ರು. ಆದ್ರೂ ಓಟ್ ಗಿಟ್ಟಿಲ್ಲಾ
ಚೇರ್ಮನ್ರು: ಸಿವ್‌ಕುಮಾರ್ ಅವ್ರು ಫುಲ್ ಜೋಶ್‌ನಾಗವ್ರೆ ಏನ್ ಇಸ್ಯಾ
ಅಮಾಸೆ: ಸೋನಿಯಾ ಮೇಡಂನೋರು ಫೈಟ್ ಸೀರಿಯಸ್‌ಲೀ ಅಂತೇಳಿದ್ರಂತೆ. ಅದ್ಕೆ ಹಾನ್ಗಲ್ಲು-ಸಿಂದ್ಗಿನಾಗೆ ಟೆನ್ ಡೇಸ್ ಸೆಟ್ಲಾಗಿ ಫುಲ್ ಎಫರ್ಟ್ ಹಾಕಿದ್ರು. ಹಾನ್ಗಲ್ ವಿಕ್ಟ್ರಿ ಆದ್‌ಮ್ಯಾಕೆ ಸುರ್ಜೇವಾಲಾ ಸಾಹೇಬ್ರು ಗುಡ್ ಎಫರ್ಟ್ಸ್ ಸಿವ್‌ಕುಮಾರ್ ಅಂತೇಳಿ ಸಾಬಾಸ್ ಕೊಟ್ರಂತೆ. ಅದ್ಕೆ ಜೋಶ್‌ನಾಗವ್ರೆ.
ಚೇರ್ಮನ್ರು: ರಾಜಾಹುಲಿ ಅಂಡ್ ವಿಜಯೇಂದ್ರ ಬಾಹುಬಲಿ ಎಂಟ್ರಿ ವರ್ಕ್ ಔಟ್ ಆಗಿಲ್ವಾ
ಅಮಾಸೆ: ಅವ್ರು ಬರ್‌ದಿದ್ರೆ ಎಲ್ರೂ ಕಡ್ಗೆವಗೆ ಪ್ರೋಗ್ರಾಂ ಅಂತಾ ಇಂಟ್ಲಿಜೆನ್ಸು ರಿಪೋರ್ಟ್ ಕೊಟ್ರಂತೆ. ನಾನ್ ಸಿಎಂ ಆದ್ಮೇಕೆ ಫಸ್ಟ್ ಬೈ ಎಲೆಕ್ಸನ್ ಅಂಗೇನಾರಾ ಆದ್ರೆ ಚಿವನೇ ಚಂಬುಲಿಂಗಾ ಅಂತೇಳಿ ಬುದ್ವಂತ ಬಸಣ್ಣೋರು ರಿಕ್ವೆಸ್ಟ್ ಮಾಡ್ಕಂಡ್ರಂತೆ. ಅವ್ರ್ ಬರ್‌ದಿದ್ರೆ ಸಿಂದ್ಗಿನಾಗೂ ವಗೆ ಆಗ್‌ತಿತ್ತಂತೆ
ಚೇರ್ಮನ್ರು: ಅದೇನ್ಲಾ ಬಿಟ್ ಕಾಯಿನ್ನು ಯವಾರ
ಅಮಾಸೆ: ಅದೆಲ್ಲಾ ನಂಕೆಲ್ಲಾ ಗೊತ್ತಾಗಾಕಿಲ್ಲಾ ಬುಡಿ. ದೊಡ್ಡೋರ್ ವ್ಯವಾರ. ಅಕೌಂಟ್ಗೆ ಮನಿ ಟ್ರಾನ್ಸ್‌ಫರ್ ಆಗೈತಂತೆ. ಡೆಲ್ಲಿಗಂಟಾ ರಿಪೋರ್ಟ್ ಹೋಗೈತಂತೆ. ಕುತ್‌ಗೇಕ್ ಬತ್ತದಂತೆ.
ಚೇರ್ಮನ್ರು: ಯಾರವ್ರೆಲಾ ಅದ್ರಾಗೆ
ಅಮಾಸೆ: ಹೇಳಂಗಿಲ್ಲಾ ಬುಡಂಗಿಲ್ಲಾ. ಎಕ್ಸ್, ಪ್ರಸೆಂಟ್ ಅಂತೆಲ್ಲಾ ಹೇಳ್ತಾವ್ರೆ. ನೋಡುಮಾ ಏನ್ ಆಯ್ತದೋ. ನನ್ ಹೆಂಡ್ರು ಬಂಗ್ಡೆ ಮೀನ್ ತತ್ತಾ ಅಂತಾ ಹೇಳವ್ರೆ ಬತ್ತೀನಿ ಸಾ…..
ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಆಮ್ ಆದ್ಮಿಯ ಮಾಜಿ ಶಾಸಕ ಸುಖ್ಬೀರ್ ದಲಾಲ್ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ
Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
Uttara Pradesh: ಬುಲ್ಡೋಜರ್ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ
One Nation, One Poll: ಲೋಕಸಭೆಯಲ್ಲಿ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ; ಕೈ ವಿರೋಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.